'2.0' ನಿರ್ದೇಶಕ ಶಂಕರ್ ಜೊತೆ ಶಿವಣ್ಣ ಸಿನಿಮಾ.!
Recommended Video

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟಿಸಿರುವ '2.0' ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಇಡೀ ಭಾರತ ಚಿತ್ರರಂಗ ಈ ಚಿತ್ರಕ್ಕಾಗಿ ಎದುರು ನೋಡುತ್ತಿದೆ. ಇದರಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಒಬ್ಬರು.
ತಮಿಳು ಚಿತ್ರರಂಗದಲ್ಲಿ ಅನ್ನಿಯನ್, ಐ, ಶಿವಾಜಿ, ಇಂಡಿಯನ್, ಬಾಯ್ಸ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಶಂಕರ್ '2.0' ಚಿತ್ರವನ್ನ ನಿರ್ದೇಶನ ಮಾಡಿದ್ದು, ಈ ಸಿನಿಮಾದ ನಂತರ ವಿಶ್ವಮಟ್ಟದಲ್ಲಿ ಶಂಕರ್ ಖ್ಯಾತಿಗಳಿಸಲಿದ್ದಾರೆ ಎನ್ನಲಾಗುತ್ತಿದೆ.
ಇಂತಹ ನಿರ್ದೇಶಕರ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ, ಇತ್ತೀಚಿಗಷ್ಟೆ ಚೆನ್ನೈನಲ್ಲಿ ನಡೆದ '2.0' ಚಿತ್ರದ ಟ್ರೈಲರ್ ಕಾರ್ಯಕ್ರಮ.

ಈ ಕಾರ್ಯಕ್ರಮದಲ್ಲಿ ವಿಡಿಯೋ ಬೈಟ್ ಮೂಲಕ ಶುಭಕೋರಿದ ಶಿವರಾಜ್ ಕುಮಾರ್, ನಿರ್ದೇಶಕ ಶಂಕರ್ ಅವರಲ್ಲಿ ತಮ್ಮ ಆಸೆಯನ್ನ ಹೇಳಿಕೊಂಡರು. 'ನಾನು ನಿಮ್ಮ ಜೊತೆ ಸಿನಿಮಾ ಮಾಡಬೇಕೆಂದುಕೊಂಡಿದ್ದೇನೆ' ಎಂದು ಇಂಗಿತ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಂಕರ್, 'ಕನ್ನಡ ಸೂಪರ್ ಸ್ಟಾರ್ ನಟ ನಮ್ಮ ಜೊತೆ ಸಿನಿಮಾ ಮಾಡಲು ಇಷ್ಟಪಡ್ತಿದ್ದೀರಾ, ಸೋ, ಸಮಯ ಬಂದ್ರೆ ಖಂಡಿತಾ ಸಾಧ್ಯವಾಗುತ್ತೆ' ಎಂದು ಹೇಳಿದರು.
ಇದು ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಪರಭಾಷೆ ನಿರ್ದೇಶಕರು, ನಿರ್ಮಾಪಕರು ಶಿವಣ್ಣ ಜೊತೆ ಸಿನಿಮಾ ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಬಹುಶಃ, ಯಾರಾದರೂ ನಿರ್ಮಾಪಕರು ಈ ಯೋಚನೆ ಮಾಡಿದ್ರೆ ಶಂಕರ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಸಿನಿಮಾ ಮಾಡಬಹುದು. ಸದ್ಯಕ್ಕೆ ಶಂಕರ್ '2.0' ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಈ ಕಡೆ ಹ್ಯಾಟ್ರಿಕ್ ಹೀರೋ ಸತತ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.


Click it and Unblock the Notifications











