For Quick Alerts
  ALLOW NOTIFICATIONS  
  For Daily Alerts

  ಸೆಂಚುರಿ ಸ್ಟಾರ್ 'RDX' ಸಿನಿಮಾ ಶುಭಾರಂಭ: ಭಾಸ್ಕರ್ ರಾವ್, ಪುನೀತ್ ಭಾಗಿ

  |
  ಶಿವಣ್ಣನ 123 ಗೆ ಕೈ ಜೋಡಿಸಿದ ಪೊಲೀಸ್ ಕಮಿಷನರ್, ಅಪ್ಪು..! | ShivaRaj Kumar RDX | Filmibeat Kannada

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರರಂಗದಲ್ಲಿ ಇಂದಿಗೆ 34 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಶೇಷ ದಿನವೇ ಅವರ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿದೆ.

  ಶಿವಣ್ಣನ ಹೊಸ ಸಿನಿಮಾ 'ಆರ್ ಡಿ ಎಕ್ಸ್'. ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ಇಂದು (ಫೆಬ್ರವರಿ 19) ನಡೆದಿದೆ.

  ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ನಟ ಪುನೀತ್ ರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಸೇರಿದಂತೆ ಅನೇಕರು ಈ ಕಾರ್ಯಕ್ರಮ ಭಾಗಿಯಾಗಿದ್ದರು.

  Shiva Rajkumar New Movie Has Launched Today

  ಭಾಸ್ಕರ್ ರಾವ್ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು. ಇದು ಶಿವರಾಜ್ ಕುಮಾರ್ ನಟನೆಯ 123ನೇ ಸಿನಿಮಾವಾಗಿದ್ದು, ರವಿ ಅರಸು ನಿರ್ದೇಶನ ಮಾಡುತ್ತಿದ್ದಾರೆ.

  ಶಿವಣ್ಣನ ಹೊಸ ಚಿತ್ರ 'RDX' ಮುಹೂರ್ತಕ್ಕೆ ದಿನಾಂಕ ನಿಗದಿಶಿವಣ್ಣನ ಹೊಸ ಚಿತ್ರ 'RDX' ಮುಹೂರ್ತಕ್ಕೆ ದಿನಾಂಕ ನಿಗದಿ

  ರವಿ ಅರಸು ಈಗಾಗಲೇ ತಮಿಳಿನಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾಗೆ ರವಿ ಅರಸು ಕೈ ಹಾಕಿದ್ದಾರೆ. ರವಿ ಪ್ರಯತ್ನಕ್ಕೆ ಸೆಂಚುರಿ ಸ್ಟಾರ್ ಸಾಥ್ ನೀಡಿದ್ದಾರೆ.

  ನಟಿ ಕಂಗನಾಗೆ ಪದ್ಮಶ್ರೀ: ಶಿವರಾಜ್ ಕುಮಾರ್ ಅಭಿಮಾನಿಗಳ ಅಸಮಾಧಾನನಟಿ ಕಂಗನಾಗೆ ಪದ್ಮಶ್ರೀ: ಶಿವರಾಜ್ ಕುಮಾರ್ ಅಭಿಮಾನಿಗಳ ಅಸಮಾಧಾನ

  ತಮಿಳಿನ ಸತ್ಯಜಿತ್ ಫಿಲ್ಮ್ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹಾಕಿದೆ. ಕಾಲಿವುಡ್ ನಲ್ಲಿ ಅಜಿತ್ ನಟನೆಯ 'ವಿಶ್ವಾಸಂ', 'ವಿವೇಗಂ' ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ.

  English summary
  Actor Shiva Rajkumar news movie has launched Today February 19th. The movie titled as RDX.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X