ಶಿವಣ್ಣನ ಹೊಸ ಚಿತ್ರ 'RDX' ಮುಹೂರ್ತಕ್ಕೆ ದಿನಾಂಕ ನಿಗದಿ

Recommended Video

ಮಗನಿಗೆ ಪ್ರೀತಿಯಿಂದ ಕೆನ್ನೆಗೆ ಹೊಡೆದ ಡಿ ಬಾಸ್ | Darshan | D Boss | Filmibeat Kannada

ನಟ ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದೆ. ಇದೇ ಬುಧವಾರ ಸಿನಿಮಾ ಲಾಂಚ್ ಆಗಲಿದೆ.

ತಮಿಳು ನಿರ್ದೇಶಕ ರವಿ ಅರಸು ನಟ ಶಿವರಾಜ್ ಕುಮಾರ್ ಜೊತೆಗೊಂದು ಸಿನಿಮಾ ಮಾಡುವ ಸುದ್ದಿ ಈ ಹಿಂದೆಯೇ ಹೊರಬಂದಿತ್ತು. ಇದೀಗ ಆ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 19 ರಂದು ಸಿನಿಮಾ ಕಂಠೀರವ ಸ್ಟೂಡಿಯೊದಲ್ಲಿ ಚಿತ್ರ ಲಾಂಚ್ ಆಗಲಿದೆ.

ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹಾಗೂ ನಟ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದಾರೆ. ಬೆಳಗ್ಗೆ 9:15 11:45ರ ವರೆಗೆ ಕಾರ್ಯಕ್ರಮ ಜರುಗಲಿದೆ.

Shiva Rajkumar new movie will be launching on February 19th

ಈ ಚಿತ್ರಕ್ಕೆ 'ಆರ್ ಡಿ ಎಕ್ಸ್' ಎಂಬ ಶೀರ್ಷಿಕೆ ಇಡಲಾಗಿದೆ. ಆದರೆ, ಇದುವರೆಗೆ ಈ ಟೈಟಲ್ ಅನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮುಹೂರ್ತದ ದಿನವೇ ಸಿನಿಮಾ ಹೆಸರು ಕೂಡ ಹೊರ ಬರಬಹುದು.

ಅಂದಹಾಗೆ, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವನ್ನು ರವಿ ಅರಸು ನಿರ್ದೇಶನ ಮಾಡುತ್ತಾರೆ. ಸತ್ಯ ಜೋತಿ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಹಿಂದೆ ಈ ಸಂಸ್ಥೆಯಿಂದ 'ವಿವೇಗಂ', 'ವಿಶ್ವಾಸಂ' ಸೇರಿದಂತೆ ಅನೇಕ ಸಿನಿಮಾಗಳು ಬಂದಿವೆ.

More from Filmibeat

English summary
Actor Shiva Rajkumar new movie will be launching on February 19th. The movie titled as RDX.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X