ಶಿವಣ್ಣನ ಸಿನಿಮಾಗೆ ಹಣ ಹಾಕಲು ಬಂದ 'ವಿಶ್ವಾಸಂ' ನಿರ್ಮಾಪಕ
ಶಿವರಾಜ್ ಕುಮಾರ್ ಎಂದಿನಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರೊಂದಿಗೆ ಅವರ ಹೊಸದೊಂದು ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ 'ವಿಶ್ವಾಸಂ' ನಿರ್ಮಾಪಕರು ಬಂಡವಾಳ ಹಾಕುತ್ತಿದ್ದಾರೆ.
ಸತ್ಯ ಜ್ಯೋತಿ ಫಿಲ್ಮ್ಸ್ ಶಿವರಾಜ್ ಕುಮಾರ್ ಗಾಗಿ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೆಲ ತಿಂಗಳ ಹಿಂದೆ ಬಂದಿತ್ತು. ಆ ಸುದ್ದಿ ಇದೀಗ ಅಧಿಕೃತವಾಗಿದೆ. ನಿರ್ಮಾಣ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.
ಇತ್ತೀಚಿಗಷ್ಟೆ ಧನುಷ್ ಅಭಿನಯದ 'ಪಟ್ಟಾಸ್' ಸಿನಿಮಾವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಅದಕ್ಕೂ ಹಿಂದೆ 'ವಿಶ್ವಾಸಂ', 'ವಿವೇಗಂ', 'ಸತ್ರಿಯಾನ್', 'ತೋದರಿ' ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿತ್ತು.

ಅಂದಹಾಗೆ, ಶಿವರಾಜ್ ಕುಮಾರ್ ಅವರ ಈ ಹೊಸ ಸಿನಿಮಾವನ್ನು ತಮಿಳು ನಿರ್ದೇಶಕ ರವಿ ಅರಸು ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ರವಿ ಅರಸು 'ಐನಾಗಾರನ್' ಹಾಗೂ 'ಎಟ್ಟಿ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ಈ ಸಿನಿಮಾದ ತಾರಬಳಗ, ತಾಂತ್ರಿಕ ವರ್ಗ ಹಾಗೂ ಉಳಿದ ಮಾಹಿತಿಯನ್ನು ಸದ್ಯದಲ್ಲಿಯೇ ಚಿತ್ರತಂಡ ಹಂಚಿಕೊಳ್ಳಲಿದೆಯಂತೆ.
ಅಂದಹಾಗೆ, ಶಿವಾರಾಜ್ ಕುಮಾರ್ ಸದ್ಯ 'ದ್ರೋಣ', 'ಭಜರಂಗಿ 2' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.


Click it and Unblock the Notifications











