ಶಿವಣ್ಣ ಹೊಸ ಚಿತ್ರ 'ಸನ್ ಆಫ್ ಬಂಗಾರದ ಮನುಷ್ಯ'

By Rajendra

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಹೊಸ ಹೊಸ ಪ್ರಯೋಗಳಿಗೆ ಸಿದ್ಧವಾಗಿದ್ದಾರೆ. ಅವುಗಳಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಜೊತೆಗಿನ 'ಕಿಲ್ಲಿಂಗ್ ವೀರಪ್ಪನ್' ಚಿತ್ರವೂ ಒಂದು. ಇದೀಗ ಮತ್ತೊಂದು ಚಿತ್ರ ತನ್ನ ಟೈಟಲ್ ಮೂಲಕವೇ ಚಿತ್ರೋದ್ಯಮದ ಗಮನಸೆಳೆದಿದೆ.

ಪ್ರೀತಂ ಗುಬ್ಬಿ ಹಾಗೂ ಹರ್ಷ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಯೋಗಿ ಜಿ ರಾಜ್ ಅವರು ಈ ಬಾರಿ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈ ಹಿಂದೆ ಅವರು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಖುಷಿ ಖುಷಿಯಾಗಿ' ಚಿತ್ರ ನಿರ್ದೇಶಿಸಿದ ಅನುಭವವಿದೆ. [ಖುಷಿ ಖುಷಿಯಾಗಿ ಚಿತ್ರ ವಿಮರ್ಶೆ]

Shiva Rajkumar next movie Son of Bangarada Manushya?

ಆ ಚಿತ್ರ ಬಾಕ್ಸ್ ಆಫೀಸಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ ಎಲ್ಲರ ಮೆಚ್ಚುಗೆಗಂತೂ ಪಾತ್ರವಾಯಿತು. ಇದೀಗ ತಮ್ಮ ಎರಡನೇ ಕಾಣಿಕೆಯಾಗಿ ಶಿವಣ್ಣ ಜೊತೆ ಕೆಲಸ ಮಾಡಲು ಸಿದ್ಧವಾಗಿದ್ದಾರೆ ಯೋಗಿ. ಇದಕ್ಕೆ ಶಿವಣ್ಣ ಓಕೆ ಎನ್ನುವುದೊಂದು ಬಾಕಿ ಇದೆ.

ತಮ್ಮ ಚಿತ್ರಕ್ಕೆ 'ಬಂಗಾರ - ಸನ್ ಆಫ್ ಬಂಗಾರದ ಮನುಷ್ಯ" ಎಂದು ಹೆಸರನ್ನು ಇಟ್ಟಿದ್ದಾರೆ. ಜಯಣ್ಣ ಹಾಗೂ ಭೋಗೇಂದ್ರ ಅವರು ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬಂದಿದ್ದಾರಂತೆ. ಇನ್ನೇನಿದ್ದರೂ ಶಿವಣ್ಣ ಸಬ್ಜೆಕ್ಟನ್ನು ಓಕೆ ಮಾಡಬೇಕಷ್ಟೆ.

ಇನ್ನೊಂದು ಕಡೆ 'ವಜ್ರಕಾಯ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ 'ಶಿವಲಿಂಗ' ಚಿತ್ರವೂ ರೆಡಿಯಾಗಿದೆ. ಸದ್ಯಕ್ಕೆ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಶಿವಣ್ಣ ಬಿಜಿಯಾಗಿದ್ದಾರೆ. ಅದಾದ ಬಳಿಕ ವರ್ಮಾ ಸಾಹೇಬರ 'ಕಿಲ್ಲಿಂಗ್ ವೀರಪ್ಪನ್', ಆ ಬಳಿಕವಷ್ಟೇ ಸನ್ ಆಫ್ ಬಂಗಾರದ ಮನುಷ್ಯ ಎನ್ನಲಾಗಿದೆ.

More from Filmibeat

English summary
Century Star Shiva Rajkumar is busy in many projects. However his new projects are also making news in Sandalwood. If everything goes as per plan, Yogi’s next project will be with Shivarajkumar. His next film Tentatively titled Bangara - Son of Bangarada Manushya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X