'ಅವನೇ ಶ್ರೀಮನ್ನಾರಾಯಣ' ನಿರ್ದೇಶಕನ ಜೊತೆ ಶಿವಣ್ಣನ ಹೊಸ ಸಿನಿಮಾ
ಭಜರಂಗಿ-2 ಚಿತ್ರೀಕರಣದಲ್ಲಿ ಬ್ಯುಸಿಯಿರುವ ನಟ ಶಿವರಾಜ್ ಕುಮಾರ್ ತಮ್ಮ ಮುಂದಿನ ಚಿತ್ರವನ್ನು ಯುವ ನಿರ್ದೇಶಕನ ಜೊತೆ ಮಾಡುತ್ತಿದ್ದಾರೆ.
Recommended Video
ರಕ್ಷಿತ್ ಶೆಟ್ಟಿ ನಟನೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನಿರ್ದೇಶಿಸಿದ್ದ ಸಚಿನ್ ರವಿ ಹ್ಯಾಟ್ಯಿಕ್ ಹೀರೋಗೆ ಆಕ್ಷನ್ ಕಟ್ ಹೇಳುವ ಅವಕಾಶ ಪಡೆದುಕೊಂಡಿದ್ದಾರೆ. ಈ ಕುರಿತು ಸ್ವತಃ ಸಚಿನ್ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ.
''ಇವರ ಸಿನಿಮಾ ನೋಡಿ ಕನಸುಗಳನ್ನು ಕಟ್ಟುತ್ತಿದ್ದೆವು...ಈಗ ಇವರ ಜೊತೆಯಲ್ಲೆ ನಮ್ಮ ಕನಸು ನನಸಾಗುವ ಸಮಯ... ಮಹಾನ್ ಕಲಾವಿದ ಶಿವರಾಜ್ ಕುಮಾರ್ ಅವರ ಜೊತೆ ನನ್ನ ನಿರ್ದೇಶನದ ಮುಂದಿನ ಸಿನಿಮಾ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಿಮ್ಮ ಶುಭಹಾರೈಕೆ ನಮ್ಮ ಜೊತೆಗಿರಲಿ. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು'' ಎಂದು ಟ್ವೀಟ್ ಮಾಡಿದ್ದಾರೆ.

ಮಹಾಭಾರತದಲ್ಲಿ ಅಶ್ವತ್ಥಾಮ ಬಹಳ ಪ್ರಧಾನವಾಗಿದ್ದು, ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಶ್ವತ್ಥಾಮನನ್ನು ಹೋಲುವಂತಹ ಪಾತ್ರ ನಿರ್ವಹಿಸಲಿದ್ದಾರೆ.
ಸಚಿನ್ ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹಾಕುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಮಾತ್ರ ಘೋಷಣೆ ಮಾಡಿರುವ ನಿರ್ದೇಶಕರು ಶೂಟಿಂಗ್ ಹಾಗೂ ಇನ್ನಿತರ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಭಜರಂಗಿ-2 ಸಿನಿಮಾ ಬಳಿಕ ಈಗಾಗಲೇ ಶಿವಣ್ಣ 'ಆರ್‌ಡಿಎಕ್ಸ್' ಮತ್ತು 'ಬೈರತಿ ರಣಗಲ್ಲು' ಎಂಬ ಪ್ರಾಜೆಕ್ಟ್‌ಗಳಿಗೆ ಕಾಲ್‌ಶೀಟ್ ಕೊಟ್ಟಿದ್ದಾರೆ. ಬಹುಶಃ ಈ ಸಿನಿಮಾ ನಂತರ ಸಚಿನ್ ಅವರ ಚಿತ್ರ ಕೈಗೆತ್ತಿಕೊಳ್ಳಬಹುದು.


Click it and Unblock the Notifications











