For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಮಾರ್ ಜನ್ಮದಿನ: ವಿಶೇಷ ಪೂಜೆ ಮೂಲಕ ಅಪ್ಪಾಜಿ ನೆನೆದ ಶಿವಣ್ಣ

  |

  ಡಾ.ರಾಜ್ ಕುಮಾರ್ ಅವರ 92ನೇ ಜನ್ಮದಿನದ ಸಂಭ್ರಮ. ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ವರನಟನ ಸ್ಮರಣೆ ಮಾಡುತ್ತಿದ್ದಾರೆ. ರಾಜ್ಯದಾದ್ಯಂತ ಇಂದು ಮತ್ತು ನಾಳೆ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಈ ವರ್ಷವೂ ಅದ್ದೂರಿಯಾಗಿ ಅಣ್ಣಾವ್ರ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ.

  Dr Rajkumar & Sachin Tendulkar ಹೆಸರಲ್ಲಿವೆ ಇದುವರೆಗೆ ಯಾರೂ ಮಾಡಿರದ ದಾಖಲೆ | Filmibeat Kannada

  ಅನೇಕರು ಮನೆಯಲ್ಲೇ ಡಾ.ರಾಜ್ ಕುಮಾರ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇನ್ನು ಡಾ.ರಾಜ್ ಕುಮಾರ್ ಮಕ್ಕಳು ಸಹ ವಿಶೇಷ ಪೂಜೆಯ ಮೂಲಕ ಅಪ್ಪಾಜಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಸದ್ಯ ಕನಕಪುರದಲ್ಲಿ ಬೀಡುಬಿಟ್ಟಿದ್ದಾರೆ.

  ಕೊರೊನಾ ಜಾಗೃತಿಗೆ ಅಣ್ಣಾವ್ರ ಹಾಡು ಬಳಸಿದ ವೈದ್ಯಕೀಯ ವಿದ್ಯಾರ್ಥಿಗಳುಕೊರೊನಾ ಜಾಗೃತಿಗೆ ಅಣ್ಣಾವ್ರ ಹಾಡು ಬಳಸಿದ ವೈದ್ಯಕೀಯ ವಿದ್ಯಾರ್ಥಿಗಳು

  ಅಲ್ಲಿಯೇ ವಿಶೇಷ ಪೂಜೆ ಮೂಲಕ ಶಿವಣ್ಣ ಅಪ್ಪಾಜಿಯನ್ನು ನೆನೆದಿದ್ದಾರೆ. ಕನಕಪುರ ಫಾರ್ಮ್ ಹೌಸ್ ನಲ್ಲಿರುವ ಶಿವಣ್ಣ ಅಲ್ಲೇ ಗದ್ದೆಯಲ್ಲಿ ಅಪ್ಪಾಜಿಯ ಫೋಟೋವಿಟ್ಟು, ಹೂವಿನ ಹಾರಹಾಕಿ ಪೂಜೆ ಮಾಡಿದ್ದಾರೆ. ಫೂಜೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಇನ್ನು ಇಂದು ಬೆಳಗ್ಗೆ ರಾಘವೇಂದ್ರ ರಾಜ್ ಕುಮಾರ್ ಅಪ್ಪಾಜಿ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕರ್ಫ್ಯೂ ಕಾರಣ ಬೆಳ್ಳಂಬೆಳಗ್ಗೆ ಕಂಠೀರವ ಸ್ಟುಡಿಯೋಗೆ ತೆರಳಿದ್ದ ರಾಘವೇಂದ್ರ ರಾಜ್ ಕುಮಾರ್ ಸಮಾಧಿಗೆ ವಿಶೇಷ ಪೂಜೆ ಮಾಡಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ವಿಶೇಷ ಹಾಡಿನ ಮೂಲಕ ಅಪ್ಪಾಜಿಯನ್ನು ನೆನೆದಿದ್ದಾರೆ.

  English summary
  Shivarajkumar offers special pooja to Dr Rajkumar On his Birth Anniversary in Kanakapura.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X