For Quick Alerts
  ALLOW NOTIFICATIONS  
  For Daily Alerts

  ಕೆಪಿ ಶ್ರೀಕಾಂತ್ ಜೊತೆ ಟೇಬಲ್ ಟೆನ್ನಿಸ್ ಆಡಿದ ಶಿವರಾಜ್ ಕುಮಾರ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಳೆದ ಕೆಲವು ದಿನಗಳಿಂದ ವೈಯಕ್ತಿಕವಾಗಿ ಬಹಳ ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ, ಶೂಟಿಂಗ್ ಅಂತ ಯಾವಾಗಲೂ ಬ್ಯುಸಿ ಇರ್ತಿದ್ದ ಸೆಂಚುರಿ ಸ್ಟಾರ್ ಲಾಕ್‌ಡೌನ್ ಆದ ಟ್ರಕ್ಕಿಂಗ್, ರೆಸಾರ್ಟ್, ಮೃಗಾಲಯ ಅಂತ ಕುಟುಂಬ ಮತ್ತು ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

  ಕ್ರೀಡೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಶಿವರಾಜ್ ಕುಮಾರ್ ಟೇಬಲ್ ಟೆನ್ನಿಸ್ ಆಡುವ ಮೂಲಕ ಖುಷಿಪಟ್ಟಿದ್ದಾರೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಅವರ ಜೊತೆ ಸೇರಿ ಟೇಬಲ್ ಟೆನ್ನಿಸ್ ಆಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  'ಪಾರ್ವತಿ' ನೋಡಲು ಮೃಗಾಲಯಕ್ಕೆ ಕುಟುಂಬ ಸಮೇತ ಶಿವಣ್ಣ ಭೇಟಿ

  ಲಾಕ್‌ಡೌನ್ ಮುಗಿದ ಬಳಿಕ ಸ್ನೇಹಿತರ ಜೊತೆ ಶಿವರಾಜ್ ಕುಮಾರ್ ಕ್ರಿಕೆಟ್ ಆಡಿದ್ದು ಸಹ ನೋಡಿದ್ವಿ. ಈಗ ಟೇಬಲ್ ಟೆನ್ನಿಸ್‌ನಲ್ಲೂ ವೃತ್ತಿಪರ ಆಟಗಾರರಂತೆ ಕೈಚಳಕ ತೋರಿಸಿದ್ದಾರೆ.

  ಕಳೆದ ವಾರಾಂತ್ಯದಲ್ಲಿ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್‌ಗೆ ಭೇಟಿ ನೀಡಿದ್ದ ಶಿವರಾಜ್ ಕುಮಾರ್, ರಿಲ್ಯಾಕ್ಸ್‌ ಆಗಿದ್ದರು. ಅದಕ್ಕೂ ಮುಂಚೆ ಮೈಸೂರಿನ ಮೃಗಾಲಯಕ್ಕೆ ಹೋಗಿದ್ದರು.

  ವೀಕೆಂಡ್‌ನಲ್ಲಿ ಕುಟುಂಬ ಹಾಗೂ ಸ್ನೇಹಿತರ ಜೊತೆ ಶಿವಣ್ಣ ರಿಲ್ಯಾಕ್ಸ್

  Lovely Star Prem, ತನ್ನ ದೇವತೆಯನ್ನ ಪ್ರಪಂಚಕ್ಕೆ ತೋರಿಸಿದ Prem | Filmibeat Kannada

  ಭಜರಂಗಿ 2 ಚಿತ್ರೀಕರಣ ಮಾಡ್ತಿರುವ ಶಿವರಾಜ್ ಕುಮಾರ್ ಸದ್ಯಕ್ಕೆ ಬ್ರೇಕ್‌ನಲ್ಲಿದ್ದಾರೆ. ಈ ಬ್ರೇಕ್ ಮುಗಿದ ಬಳಿಕ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.

  English summary
  Kannada actor Shiva Rajkumar Played Table Tennis With Producer KP Sreekanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X