'ಹನಿಮೂನ್'ಗೆ ಹೊರಟ ನಟ ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್ ಈಗ ಹನಿಮೂನ್ ಗೆ ಹೊರಟಿದ್ದಾರೆ. ಮದುವೆಯಾಗಿ ಇಷ್ಟ ವರ್ಷಗಳ ಬಳಿಕ ಶಿವಣ್ಣ ಈಗ ಯಾಕೆ ಹನಿಮೂನ್ ಗೆ ಹೋಗುತ್ತಿದ್ದಾರೆ ಅಂತ ಯೋಚನೆ ಮಾಡ್ತಿದ್ದೀರ. ಶಿವರಾಜ್ ಕುಮಾರ್ ಈಗ 'ಹನಿಮೂನ್'ಗೆ ಹೋಗುತ್ತಿಲ್ಲ, ಬದಲಿಗೆ 'ಹನಿಮೂನ್' ಎನ್ನುವ ಹೊಸ ಪ್ರಾಜೆಕ್ಟ್ ಶುರು ಮಾಡಿದ್ದಾರೆ.
'ಹನಿಮೂನ್' ಎಂಬುದು ಹೊಸ ವೆಬ್ ಸೀರಿಸ್. ಶಿವರಾಜ್ ಕುಮಾರ್ ತಮ್ಮ ಶ್ರೀಮುತ್ತು ಬ್ಯಾನರ್ ನಲ್ಲಿ ಈಗಾಗಲೇ ವೆಬ್ ಸೀರಿಸ್ ನಿರ್ಮಾಣ ಶುರು ಮಾಡಿದ್ದರು. ಈಗ ಆ ಸಾಲಿಗೆ ಮತ್ತೊಂದು ವೆಬ್ ಸೀರಿಸ್ ಸೇರಿದೆ.
ಸಕತ್ ಸ್ಟೂಡಿಯೋ ಹಾಗೂ ಶ್ರೀಮುತ್ತು ಸಿನಿ ಸರ್ವಿಸ್ ಬ್ಯಾನರ್ ನಲ್ಲಿ 'ಹೇಟ್ ಯು ರೋಮಿಯೋ' ಎಂಬ ವೆಬ್ ಸರಣಿ ನಿರ್ಮಾಣ ಆಗುತ್ತಿದೆ. ಆ ವೆಬ್ ಸೀರಿಸ್ ಬಿಡುಗಡೆಗೆ ಮೊದಲೇ 'ಹನಿಮೂನ್' ಎಂಬ ಮತ್ತೊಂದು ಹೊಸ ಪ್ರಾಜೆಕ್ಟ್ ಶುರು ಆಗಿದೆ. ಯುಗಾದಿ ಹಬ್ಬದ ವಿಶೇಷವಾಗಿ ಇದನ್ನು ಅನೌನ್ಸ್ ಮಾಡಲಾಗಿದೆ.

ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಈ ವೆಬ್ ಸೀರಿಸ್ ನಿರ್ಮಾಣದಲ್ಲಿ ತೊಡಗಿದ್ದಾರೆ. ವಿಕ್ರಮ್ ಯೋಗಾನಂದ್ ಈ ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಮತ್ತು ಕಾನ್ಸೆಪ್ಟ್ ಸಖತ್ ಸ್ಟೂಡಿಯೋದ್ದಾಗಿದೆ.


Click it and Unblock the Notifications











