James Movie: 'ಜೇಮ್ಸ್' ಸಿನಿಮಾದಲ್ಲಿ ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್ ಪಾತ್ರವೇನು?

ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಮೂವರು ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬುದು ದೊಡ್ಮನೆ ಅಭಿಮಾನಿಗಳ ಬಹುಕಾಲದ ಆಸೆ. ಆದರೆ ಆ ಆಸೆ ಈಡೇರಲೇ ಇಲ್ಲ.

Recommended Video

James | ಅಂದು ಶಿವಣ್ಣ, ರಾಘಣ್ಣ ಹೇಳಿದ್ದ ಮಾತಾದ್ರು ಏನು..?

ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಆದರೆ ಮೂವರು ಅಣ್ಣ-ತಮ್ಮಂದಿರು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ.

'ಜೇಮ್ಸ್' ಸಿನಿಮಾದಲ್ಲಿ ಇಂಟರ್ವೆಲ್ ಬಳಿಕ ಶಿವಣ್ಣ ಹಾಗೂ ರಾಘಣ್ಣ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿಯೂ ಶಿವರಾಜ್ ಕುಮಾರ್ ತೆರೆಯ ಮೇಲೆ ಕಾಣಿಸಿಕೊಂಡಾಗ ಶಿಳ್ಳೆ, ಚಪ್ಪಾಳೆಗಳ ಭೋರ್ಗರೆತವೇ ಆಗುತ್ತದೆ.

Shiva Rajkumar Raghavendra Rajkumar Acted In James Movie

'ಜೇಮ್ಸ್' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸೈನ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪಿರಂಗಿ ಪಾತ್ರಧಾರಿ ರಂಗಾಯಣ ರಘು, ಸಂತೋಶ್ ಪಾತ್ರಧಾರಿ ಪುನೀತ್ ಅವರನ್ನು ಅವರ ಕುಟುಂಬದ ಬಗ್ಗೆ ಕೇಳುತ್ತಾರೆ. ಆಗ ಫ್ಲಾಶ್‌ಬ್ಯಾಕ್ ದೃಶ್ಯ ತೆರೆದುಕೊಳ್ಳುತ್ತದೆ. ಜೋರು ಮಳೆಯಿಂದ ಆದ ಅತಿವೃಷ್ಟಿಯಲ್ಲಿ ಸಂತೋಶ್ (ಪುನೀತ್) ಹಾಗೂ ಇನ್ನು ಕೆಲವು ಬಾಲಕರು ತಮ್ಮ ಪೋಷಕರನ್ನು ಕಳೆದುಕೊಂಡಿರುತ್ತಾರೆ. ಎಲ್ಲರೂ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಅತಿವೃಷ್ಟಿಯಲ್ಲಿ ಸಿಲುಕಿದವರಿಗೆ ನೆರವಾಗುವ ಸೈನ್ಯದ ಗುಂಪಿನ ಮುಖ್ಯಸ್ಥನ ಪಾತ್ರದಲ್ಲಿ ನಟಿಸಿರುವ ಶಿವರಾಜ್ ಕುಮಾರ್ ಅದೇ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿರುತ್ತಾರೆ.

ಶಿವಣ್ಣ ಆ ಮಕ್ಕಳನ್ನು ಕರೆದು ಕೂರಿಸಿಕೊಂಡು ಜೀವನ ಪಾಠ ಹೇಳುತ್ತಾರೆ. '''ಯಾರ ಮೇಲೆ ಪ್ರೀತಿ ಹೆಚ್ಚು ಇರುತ್ತೊ ಅವರನ್ನು ಆ ದೇವರು ಬೇಗ ಕರೆದುಕೊಂಡು ಬಿಡುತ್ತಾರೆ'' ಎಂದು ಸಂಭಾಷಣೆ ಹೇಳುವ ಶಿವಣ್ಣ ಅರೆ ಕ್ಷಣ ಆಕಾಶ ನೋಡುತ್ತಾರೆ. ಆ ದೃಶ್ಯ ಪ್ರೇಕ್ಷಕನ ಹೃದಯ ಕರಗಿಸಿಬಿಡುತ್ತದೆ.

ಪೋಷಕರನ್ನು ಕಳೆದುಕೊಂಡ ಎಲ್ಲ ಹುಡುಗರನ್ನು ಆಶ್ರಮವೊಂದಕ್ಕೆ ಶಿವಣ್ಣ ಸೇರಿಸುತ್ತಾರೆ. ಆ ಆಶ್ರಮದ ಮುಖ್ಯ ಗುರುವಿನ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಸಂಭಾಷಣೆಗಳಿಲ್ಲ.

'ಜೇಮ್ಸ್' ಸಿನಿಮಾ ಶೂಟಿಂಗ್ ಮಾಡುವಾಗ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಪಾತ್ರ ಇರಲಿಲ್ಲ. ಆದರೆ ಪುನೀತ್ ಕಾಲವಾದ ಬಳಿಕ ಇವರಿಬ್ಬರ ಪಾತ್ರಗಳನ್ನು ಸೃಷ್ಟಿಸಿ ಕತೆಗೆ ಹೊಂದಿಕೊಳ್ಳುವಂತೆ ಜಾಣತನದಿಂದ ಬಳಸಿಕೊಂಡಿದ್ದಾರೆ ನಿರ್ದೇಶಕ ಚೇತನ್.

More from Filmibeat

English summary
Shiva Rajkumar and Raghavendra Rajkumar acted in James movie. James movie released on March 17.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X