For Quick Alerts
  ALLOW NOTIFICATIONS  
  For Daily Alerts

  ಸರ್ಕಾರ ಅಗತ್ಯವಾದುದನ್ನು ಮಾಡುತ್ತೆ ಎಂದು ಭಾವಿಸಿದ್ದೇನೆ; ಶಿವರಾಜ್ ಕುಮಾರ್ ಮನವಿ

  |

  ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೇ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹೊಸ ಕೊರೊನಾ ನಿಯಮ, ಈಗತಾನೆ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದೆ.

  ಸಿಡಿದೆದ್ದ ಅಪ್ಪು ಫ್ಯಾನ್ಸ್: BSY ನಿವಾಸಕ್ಕೆ ಮುತ್ತಿಗೆ ಹಾಕುವ ಪ್ಲ್ಯಾನ್!! | Filmibeat Kannada

  ಸರ್ಕಾರ ಕೈಗೊಂಡಿರುವ ನಿರ್ಧಾರದಲ್ಲಿ ಚಿತ್ರಮಂದಿರಗಳಲ್ಲಿ ಮತ್ತೆ ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಿದೆ. ಈ ನಿರ್ಧಾರ ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ. ಏಪ್ರಿಲ್ 1ಕ್ಕೆ ಬಿಡುಗಡೆಯಾಗಿರುವ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಈಗ ಸಂಕಷ್ಟದಲ್ಲಿ ಸಿಲುಕಿದೆ.

  ಕೊರೊನಾ ತಡೆಯುವ ಉದ್ದೇಶ ಬಿಟ್ಟರೆ ಬೇರೇನೂ ಇಲ್ಲ; ಪುನೀತ್ ಅಸಮಾಧಾನಕ್ಕೆ ಸುಧಾಕರ್ ಪ್ರತಿಕ್ರಿಯೆಕೊರೊನಾ ತಡೆಯುವ ಉದ್ದೇಶ ಬಿಟ್ಟರೆ ಬೇರೇನೂ ಇಲ್ಲ; ಪುನೀತ್ ಅಸಮಾಧಾನಕ್ಕೆ ಸುಧಾಕರ್ ಪ್ರತಿಕ್ರಿಯೆ

  ಇನ್ನು ಮುಂದೆ ಬಿಡುಗಡೆಗೆ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಸಹ ಸಂಕಷ್ಟಕ್ಕೆ ಸಿಲುಕಿವೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಸರ್ಕಾರದ ದಿಢೀರ್ ನಿರ್ಧಾರ ಈಗ ಚಿತ್ರರಂಗದ ಲೆಕ್ಕಾಚಾರವೇ ಉಲ್ಟ ಮಾಡಿದೆ. ಈ ಬಗ್ಗೆ ಇಡೀ ಸಿನಿಮಾರಂಗ ಈಗ ಅಸಮಾಧಾನ ಹೊರಹಾಕುತ್ತಿದೆ.

  ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟ್ವೀಟ್ ಮಾಡಿ, ಕಷ್ಟದಲ್ಲಿರುವ ಚಿತ್ರರಂಗಕ್ಕೆ ಅಗತ್ಯವಾದುದನ್ನು ಸರ್ಕಾರ ಮಾಡುತ್ತೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ. 'ಕಷ್ಟದಲ್ಲಿರುವ ಚಿತ್ರರಂಗಕ್ಕೆ ಸರ್ಕಾರ ಅಗತ್ಯವಾದುದನ್ನು ಮಾಡುತ್ತೆ ಎಂದು ಭಾವಿಸಿದ್ದೇನೆ. ಚಿತ್ರಮಂದಿರಗಳಲ್ಲಿ ಎಲ್ಲಾ ನಿಯಮಗಳನ್ನು ಅನುಸರಿಸಲಾಗುವುದು. ನಾನು ನಮ್ಮ ಸಿಎಂಗೆ ವಿನಂತಿಸುತ್ತೇನೆ. ಈ ವಿಷಯವನ್ನು ಪರಿಗಣಿಸಿ ತಕ್ಷಣ ಪರಿಹರಿಸಬೇಕೆಂದು' ಮನವಿ ಮಾಡಿದ್ದಾರೆ.

  ಸದ್ಯ ರಿಲೀಸ್ ಆಗಿರುವ ಯವರತ್ನ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೆ ಇನ್ನು ಬಿಡುಗಡೆಗೆ ರೆಡಿಯಾಗಿರುವ ಸಲಗ, ಕೋಟಿಗೊಬ್ಬ-3, ಭಜರಂಗಿ-2 ಸೇರಿದಂತೆ ಅನೇಕ ಸಿನಿಮಾಗಳು ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಆದರೀಗ ಹೊಸ ನಿಯಮದಿಂದ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗವನ್ನು ಸರ್ಕಾರ ಪಾರು ಮಾಡುತ್ತಾ ಎಂದು ಕಾದುನೋಡಬೇಕು.

  English summary
  Actor Shiva Rajkumar Reaction to govt new decision on 50% occupancy in theatres.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X