'ಗಹನ' ಟೀಸರ್ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್
ಸಸ್ಪೆನ್ಸ್ ಥ್ರಿಲ್ಲರ್ 'ಗಹನ' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಡಾ. ಶಿವರಾಜ್ ಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ಪ್ರೀತ್ ಹಾಸನ್ ಅವರು ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಆದಿತ್ಯಶೆಟ್ಟಿ, ಶರಣ್ಯಗೌಡ, ರಂಜಿನಿ, ಶಿವು ಇಂಚರ ಭೀಮಯ್ಯ, ಸ್ವಾತಿ ಶಿವಮೊಗ್ಗ, ಸುನೀಲ್ ಗೌಡ, ಸುಭಾಷ್‍ಚಂದ್ರ, ಸ್ವಾತಿ ಕೊಡಗು, ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
'ಗಿಣಿ ಹೇಳಿದ ಕಥೆ' ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್
ಬುದ್ಧ ಚಿತ್ರಾಲಯ ಲಾಂಛನದಲ್ಲಿ ವಿ.ದೇವರಾಜು ನಿರ್ಮಿಸಿರುವ 'ಗಿಣಿ ಹೇಳಿದ ಕಥೆ' ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ನಾಗರಾಜು ಉಪ್ಪುಂದ ಈ ಚಿತ್ರಕ್ಕೆ ನಿರ್ದೇಶನ ಹಾಗೂ ಛಾಯಾಗ್ರಹಣ ಒದಗಿಸಿದ್ದಾರೆ. ಈ ಚಿತ್ರದಲ್ಲಿ ಬಹುಪಾಲು ರಂಗಭೂಮಿ ಕಲಾವಿದರುಗಳು ಅಭಿನಯಿಸಿದ್ದಾರೆ. ದೇವ್, ಗೀತಾಂಜಲಿ, ಮಾಲತೇಶ್, ನೀತುರಾಯ್, ಹಾವೇರಿ ಶ್ರೀಧರ್, ಮಹಂತೇಶ್, ಮುಂತಾದವರಿದ್ದಾರೆ.

ಮಾತಿನ ಮನೆಯಲ್ಲಿ 'ಆರ್.ಡಿ'
ಪುಣ್ಯ ಫಿಲಂಸ್ ಲಾಂಛನದಲ್ಲಿ ಅನಿಲ್ ಕುಮಾರ್ ಮತ್ತು ಪವನ್ ಕುಮಾರ್ ಕೂಡಿ ನಿರ್ಮಿಸಿರುವ 'ಆರ್‍ಡಿ' ಚಿತ್ರಕ್ಕೆ ಬಾಲಾಜಿ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಪವನ್‍ಕುಮಾರ್-ಎಂ.ಎಸ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅನಿಲ್ ನೀನಾಸಂ ಅಶ್ವತ್, ಆದರ್ಶ್, ರಿಷ್ಟ, ತೇಜು ಪೊನ್ನಪ್ಪ ಮುಂತಾದವರಿದ್ದಾರೆ.

'ಟಿಪ್ಪುವರ್ಧನ್' ಮೊದಲ ಪ್ರತಿ ಸಿದ್ಧ
ಟಿ.ಎಂ.ಪಿ. ಮೂವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಟಿಪ್ಪುವರ್ಧನ್, ನಿರ್ಮಾಣದ 'ಟಿಪ್ಪುವರ್ಧನ್' ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದೆ. ಟಿಪ್ಪುವರ್ಧನ್ ನಿರ್ದೇಶಿಸಿರುವ ಈ ಚಿತ್ರಕ್ಕೆ ದಾಮೋದರ್ ಸುರೇಶ್ ಸಂಗೀತ ನೀಡಿದ್ದಾರೆ. ಪ್ರೀತಿ-ಪ್ರೇಮ-ರಾಜಕೀಯದ ಸುತ್ತ ನಡೆಯುವ ಕಥಾವಸ್ತುವುಳ್ಳ ಈ ಚಿತ್ರದಲ್ಲಿ 4 ಹಾಡುಗಳಿದ್ದು, ಹುಬ್ಬಳ್ಳಿ-ಬಾದಾಮಿ-ಪಟ್ಟದಕಲ್ಲು-ಬೆಂಗಳೂರು ಮುಂತಾದೆಡೆ ಚಿತ್ರೀರಣ ನಡೆದಿದೆ.


Click it and Unblock the Notifications











