ದೊಡ್ಡ ವ್ಯಕ್ತಿ ಕೊಟ್ಟಿದ್ದ ಉಡುಗೊರೆಯನ್ನ ವಿಷ್ಣು, ಶಿವಣ್ಣಗೆ ನೀಡಿದ್ದರಂತೆ.! ಏನದು.?
Recommended Video

ಡಾ ವಿಷ್ಣುವರ್ಧನ್ ಅವರ ಬಗ್ಗೆ ನಟ ಶಿವರಾಜ್ ಕುಮಾರ್ ಅಪಾರ ಅಭಿಮಾನ ಹೊಂದಿದ್ದಾರೆ. ಇದನ್ನ ಸ್ವತಃ ಶಿವಣ್ಣ ಅವರೇ ಹಲವು ಸಲ ಹೇಳಿಕೊಂಡಿದ್ದಾರೆ ಕೂಡ.
ಸದ್ಯ 'ಡಾ ವಿಷ್ಣು ಸೇನಾ ಸಮಿತಿ' ಅವರ ಸಾರಥ್ಯದಲ್ಲಿ ನಡೆಯುತ್ತಿರುವ 'ಡಾ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'ಕ್ಕೆ ಪ್ರತ್ಯಕ್ಷವಾಗಿ ಬೆಂಬಲ ನೀಡಿರುವ ಶಿವಣ್ಣ, ಅಭಿಮಾನಿಗಳ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ.
ಇದಕ್ಕೂ ಮುಂಚೆ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆದ 'ಹೃದಯಗೀತೆ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿಷ್ಣುದಾದ ಜೊತೆಗಿನ ಸಂಬಂಧದ ಬಗ್ಗೆ ಸೆಂಚುರಿಸ್ಟಾರ್ ಹೇಳಿಕೊಂಡರು. ವಿಶೇಷ ಅಂದ್ರೆ, ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಆನಂದ್' ಸಿನಿಮಾ ನಂತರ ವಿಷ್ಣು ಒಂದು ಉಡುಗೊರೆ ನೀಡಿದ್ದರಂತೆ. ಆ ಗಿಫ್ಟ್ ಅವರಿಗೆ ತಮಿಳಿನ ಬಹುದೊಡ್ಡ ನಟರೊಬ್ಬರು ಕೊಟ್ಟಿದ್ದರಂತೆ. ಯಾರದು.? ವಿಷ್ಣುಗೆ ನೀಡಿದ್ದು ಯಾರು.? ಎಂದು ತಿಳಿಯಲು ಮುಂದೆ ಓದಿ.....
ಚಿತ್ರಕೃಪೆ: ವಿಷ್ಣು ಫ್ಯಾನ್ಸ್ ಮತ್ತು ಶಿವಣ್ಣ ಫ್ಯಾನ್ಸ್

'ಆನಂದ್' ಸಿನಿಮಾ ವೇಳೆ ಸಿಕ್ಕಿದ ಉಡುಗೊರೆ.?
ಶಿವರಾಜ್ ಕುಮಾರ್ ನಾಯಕನಾಗಿ ಅಭಿನಯಸಿದ ಮೊದಲ ಸಿನಿಮಾ 'ಆನಂದ್'. 1986ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. 'ಈ ಚಿತ್ರದ ಮಾಡಿದ ನಂತರ ನನಗೆ ವಿಷ್ಣು ಸರ್ ಅವರ ಒಂದು ವಾಚ್ ನೀಡಿದ್ದರು' ಎಂದು ಶಿವಣ್ಣ ಬಹಿರಂಗಪಡಿಸಿದ್ದಾರೆ. ಆ ವಾಚ್ ನ್ನ ಅವರಿಗೆ ತಮಿಳಿನ ಸೂಪರ್ ಸ್ಟಾರ್ ನಟರೊಬ್ಬರು ನೀಡಿದ್ದರಂತೆ.

ವಿಷ್ಣುಗೆ ಕೊಟ್ಟಿದ್ದು ಯಾರು.?
ಶಿವಣ್ಣಗೆ ವಿಷ್ಣುವರ್ಧನ್ ನೀಡಿದ ವಾಚ್ ನ್ನ, ವಿಷ್ಣು ಅವರಿಗೆ ನೀಡಿದ್ದು ತಮಿಳು ಸೂಪರ್ ಸ್ಟಾರ್ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್ ಎಂದು ಸ್ವತಃ ಶಿವರಾಜ್ ಕುಮಾರ್ ಹೇಳಿಕೊಂಡರು. ಇದನ್ನ ನಾನು ಯಾವತ್ತು ಮರೆಯುವುದಿಲ್ಲ ಎಂದು ಸೆಂಚುರಿಸ್ಟಾರ್ ಭಾವುಕರಾದರು.

ನನಗೂ ಒಂದು ದುಃಖ ಕಾಡುತ್ತಿದೆ
'ನನ್ನ ಪ್ರೀತಿಯಿಂದ ಶಿವು ಅಂತಿದ್ರು. ನನಗೆ ಒಂದೇ ಒಂದು ದುಃಖ ಏನಪ್ಪಾ ಅಂದ್ರೆ, ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಿಲ್ಲ ಅನ್ನೋದು. ಅವರೊಬ್ಬ ಅದ್ಭುತ ನಟ, ಅದಕ್ಕೂ ಮೀಗಿಲಾಗಿ ಅವರೊಬ್ಬ ಗ್ರೇಟ್ ವ್ಯಕ್ತಿ. ಕೊನೆಯ ಸಮಯದಲ್ಲಿ ಸಾಕಷ್ಟು ವಿಷ್ಯಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದರು. ಅದು ನಮ್ಮಲ್ಲಿ ಇರಲಿ ಬಿಡಿ' ಎಂದರು.

'ನೂರೊಂದು ನೆನಪು' ಹಾಡೇಳಿದ ಶಿವಣ್ಣ
ಇನ್ನು 'ಹೃದಯಗೀತೆ' ವೇದಿಕೆಯಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್, ವಿಷ್ಣುವರ್ಧನ್ ಅಭಿನಯಿಸಿದ್ದ 'ಬಂಧನ' ಸಿನಿಮಾದ ನೂರೊಂದು ನೆನಪು.... ಹಾಡನ್ನ ಹಾಡುವುದರ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದರು.

ಒಂದು ಲಕ್ಷ ಹಣ ನೀಡಿದ ಶಿವಣ್ಣ
ಈ ಕಾರ್ಯಕ್ರಮದಿಂದ ಬರುವ ಹಣವನ್ನು ಸುಮಾರು 140ಕ್ಕೂ ಹೆಚ್ಚು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಮಕ್ಕಳ ಶಸ್ತ್ರ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು ಎಂದು ಭಾರತಿ ವಿಷ್ಣುವರ್ಧನ್ ಅವರು ಮೊದಲೇ ತಿಳಿಸಿದ್ದರು. ಈ ಒಳ್ಳೆಯ ಕೆಲಸಕ್ಕೆ ನಟ ಶಿವರಾಜ್ ಕುಮಾರ್ ಕೂಡ ನೆರವು ನೀಡಿದ್ದು, ಒಂದು ಲಕ್ಷ ರೂಪಾಯಿ ನೀಡಿದ್ದಾರೆ.

ನಾಗರಹಾವು ನೋಡಿದಾಗ ನನಗೆ 11 ವರ್ಷ
''ನಾಗರಹಾವು ಸಿನಿಮಾ ನೋಡಿದಾಗ ಬಹುಶಃ ನನಗೆ ಹನ್ನೊಂದು ವರ್ಷ ಇರಬಹುದು. ಪುಟ್ಟಣ್ಣ, ವೀರಾಸ್ವಾಮಿ, ಎಲ್ಲರೂ ಇದ್ದಾರೆ. ನಾನು ಆಗ ಸಿನಿಮಾ ನೋಡಿದ್ದೆ. ಅಲ್ಲಿವರೆಗೂ ಅಪ್ಪಾಜಿ ಸಿನಿಮಾಗಳು ಮಾತ್ರ ನೋಡ್ತಿದ್ವಿ. ಬಟ್, ಈ ಸಿನಿಮಾ ನೋಡಿದಾಗ, ಅಬ್ಬಾ ಯಾರೂ ಈ ಆಕ್ಟರ್, ಇಷ್ಟೊಂದು ಹ್ಯಾಂಡ್ ಸಮ್, ಇಷ್ಟೊಂದು ಎನರ್ಜಿ, ಲವಲವಿಕೆ, ಬಾಡಿ ಲಾಂಗ್ವೇಜ್ ಎಂದು ಆಶ್ಚರ್ಯದಿಂದ ನೋಡಿದ್ದೆ. ಪುಟ್ಟಣ್ಣ ಬಳಿ ಹೋಗಿ 'ಸರ್ ಈ ಸಿನಿಮಾ ಸೂಪರ್ ಹಿಟ್, ಸಿಲ್ವರ್ ಜೂಬ್ಲಿ. ಆ ಹೀರೋ ತುಂಬಾ ಚೆನ್ನಾಗಿ ಮಾಡಿದ್ದಾರೆ, ನನಗೆ ಸಿಕ್ಕಾಪಟ್ಟೆ ಇಷ್ಟವಾದ್ರು, ಐ ಲವ್ ಹಿಮ್ ಸರ್' ಅಂತ ಹೇಳಿದ್ದರಂತೆ ಶಿವಣ್ಣ.


Click it and Unblock the Notifications