ಅಭಿಮಾನಿಯ ಹೊಸ ಬೈಕ್ ಹತ್ತಿ ಜಾಲಿ ರೈಡ್ ಮಾಡಿದ ಶಿವಣ್ಣ
ನಟ ಶಿವರಾಜ್ ಕುಮಾರ್‌ಗೆ ವಯಸ್ಸು 60 ಆದರೂ ಈಗಲೂ ಯುವಕರನ್ನು ನಾಚಿಸುವ ಎನರ್ಜಿ ಅವರದ್ದು. ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿರುವ ಶಿವರಾಜ್ ಕುಮಾರ್ ಚಿತ್ರೀಕರಣ ಇಲ್ಲದ ದಿನವೂ ಮನೆ ಬಳಿ ಬಂದ ಅಭಿಮಾನಿಗಳನ್ನು ಭೇಟಿಯಾಗುತ್ತಿರುತ್ತಾರೆ.
ಶಿವರಾಜ್ ಕುಮಾರ್ ಅಭಿಮಾನಿಯೊಬ್ಬ ಹೊಸ ಬೈಕ್ ಒಂದನ್ನು ಖರೀದಿಸಿದ್ದು ಅದನ್ನು ಮೊದಲಿಗೆ ತಮ್ಮ ಮೆಚ್ಚಿನ ನಟನಿಗೆ ತೋರಿಸಲೆಂದು ಮನೆಯ ಬಳಿ ತಂದಿದ್ದ. ಹೊಸ ಬೈಕ್ ಕೊಂಡ ಅಭಿಮಾನಿಗೆ ಶುಭಾಶಯ ಹೇಳಿದ ಶಿವಣ್ಣ ಬೈಕ್ ಮೇಲೆ ಆಟೊಗ್ರಾಫ್ ಹಾಕಿದ ಜೊತೆಗೆ ಅಭಿಮಾನಿಯನ್ನು ಹಿಂದೆ ಕೂರಿಸಿಕೊಂಡು ಬೈಕ್ ಓಡಿಸಿ ಖುಷಿ ಪಟ್ಟಿದ್ದಾರೆ. ಬೈಕ್ ಕೊಂಡ ಅಭಿಮಾನಿಗೆ ಸುರಕ್ಷತೆಯಿಂದ ಗಾಡಿ ಓಡಿಸುವಂತೆ ಸಲಹೆಯನ್ನೂ ನೀಡಿದ್ದಾರೆ.
ನಾಗವಾರ ಬಳಿ ಇರುವ ಶಿವರಾಜ್ ಕುಮಾರ್ ನಿವಾಸದ ಬಳಿ ಸದಾ ಅಭಿಮಾನಿಗಳು ನೆರದೇ ಇರುತ್ತಾರೆ. ತಮ್ಮನ್ನು ಕಾಣಲು ಬಂದ ಅಭಿಮಾನಿಗಳಿಗೆ ಶಿವರಾಜ್ ಕುಮಾರ್ ನಿರಾಸೆ ಮಾಡುವುದಿಲ್ಲ.

ಶೀವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಸೆಪ್ಟೆಂಬರ್ 10ಕ್ಕೆ ತೆರೆಗೆ ಬರುವುದು ಖಾತ್ರಿಯಾಗಿತ್ತು. ಆದರೆ ನಿರ್ಧಾರ ಬದಲಿಸಿರುವ ಚಿತ್ರತಂಡ ಸೆಪ್ಟೆಂಬರ್ 10ಕ್ಕೆ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದಿದೆ. ಶಿವಣ್ಣ ಅಭಿನಯದ 'ಭೈರವ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾವನ್ನು ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದು, ಡಾಲಿ ಧನಂಜಯ್, ಪೃಥ್ವಿ ಅಂಬರ್ ಅವರುಗಳು ಸಿನಿಮಾದಲ್ಲಿದ್ದಾರೆ. 'ನೀ ಸಿಗೊವರೆಗೆ' ಹೆಸರಿನ ಹೊಸ ಸಿನಿಮಾಕ್ಕೆ ಸಹಿ ಹಾಕಿರುವ ಶಿವಣ್ಣ, ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಹಾಗೂ ಹೊಸ ನಿರ್ದೇಶಕರೊಬ್ಬರ 'ಸತ್ಯಮಂಗಲ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಟ ಪ್ರಭುದೇವ್ ಜೊತೆಗೆ ಶಿವಣ್ಣ ನಟಿಸಲಿದ್ದಾರೆ. ಇದೆಲ್ಲದರ ಜೊತೆಗೆ ಗೀತಾ ಪಿಕ್ಚರ್ಸ್ ಬ್ಯಾನರ್‌ನ ಹೊಸ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.


Click it and Unblock the Notifications











