ಡಾ ರಾಜ್ ಹುಟ್ಟುಹಬ್ಬಕ್ಕೆ 'ರುಸ್ತುಂ' ಲುಕ್: ಈ ಗೆಟಪ್ ನಲ್ಲಿ ಒಂದು ವಿಶೇಷವಿದೆ

By Bharath Kumar

Recommended Video

ಅಪ್ಪಾಜಿ ಹುಟ್ಟುಹಬ್ಬಕ್ಕೆ ಶಿವಣ್ಣನ ಲುಕ್ ರಿವೀಲ್ ಆಯ್ತು| Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಲಿರುವ 'ರುಸ್ತುಂ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ.

ಈ ಮೊದಲೇ ತಿಳಸಿದಂತೆ ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು 'ರುಸ್ತುಂ' ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿತ್ತು. ಇದೀಗ, ಅಣ್ಣಾವ್ರ ಜನುಮದಿನದಂದು ಶಿವಣ್ಣನ ಗೆಟಪ್ ರಿವಿಲ್ ಆಗಿದ್ದು, ರಾಜ್ ಕುಟುಂಬದ ಭಕ್ತರಿಗೆ ಡಬಲ್ ಧಮಾಕ.

Shiva rajkumar rustum look release

ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಜಯಣ್ಣ-ಭೋಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ, ಶಿವಣ್ಣನ ಸ್ಟೈಲಿಶ್ ಫೋಟೋಶೂಟ್ ಮಾಡಿರುವುದು ಛಾಯಾಗ್ರಾಹಕ ಮಹೇನ್ ಸಿಂಹ. ಈ ಹಿಂದೆ 'ಟಗರು' ಚಿತ್ರದ ಫೋಟೋಶೂಟ್ ಮಾಡಿದ್ದು ಕೂಡ ಇವರೇ.

ಅಂದ್ಹಾಗೆ, ಈ ಚಿತ್ರದಲ್ಲಿ ಶಿವಣ್ಣ ಅವರದ್ದೇನು ಅಂತಹ ವಿಶೇಷ ಪಾತ್ರ ಅಥವಾ ಗೆಟಪ್ ಅಂತ ನೋಡೋದಾದರೇ, ಪೊಲೀಸ್ ಅನ್ನೋದು ಕಾಮನ್. ಈಗಾಗಲೇ ಹಲವು ಚಿತ್ರಗಳಲ್ಲಿ ಶಿವಣ್ಣನನ್ನ ಪೊಲೀಸ್ ಆಗಿ ನೋಡಿ ಆಗಿದೆ. ಈ ಹಿಂದೆ ತೆರೆಕಂಡಿದ್ದ 'ಟಗರು' ಚಿತ್ರದಲ್ಲಿ ಸೆಂಚುರಿಸ್ಟಾರ್ ಪೊಲೀಸ್ ಆಗಿ ಕಾಣಿಸಿಕೊಂಡಿದ್ದರು.

Shiva rajkumar rustum look release

ಅದನ್ನ ಹೊರತು ಪಡಿಸಿದ್ರೆ, ಶಿವಣ್ಣನ ಮೀಸೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಶಿವಣ್ಣ ದೊಡ್ಡದಾಗಿ ಮೀಸೆ ಬಿಡಲ್ಲ. ಟ್ರಿಮ್ ಮಾಡಿ ಸಣ್ಣ ಮೀಸೆಯಲ್ಲೇ ಹೆಚ್ಚು ಕಾಣಿಸಿಕೊಂಡಿರುವುದು. ಆದ್ರೀಗ, ತುಂಬ ದಿನಗಳ ನಂತರ ದಪ್ಪ ಮೀಸೆಯಲ್ಲಿ ಶಿವಣ್ಣ ಎಂಟ್ರಿ ಕೊಟ್ಟಿರುವುದು ವಿಶೇಷ. ಇದೊಂದು ರೀತಿಯಲ್ಲಿ ಶಿವಣ್ಣ, ರಾಜ್ ಕುಮಾರ್ ಅವರಂತೆ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನುಳಿದಂತೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದು, ಚಿತ್ರದಲ್ಲಿ ಮೂರು ಜನ ಖ್ಯಾತ ಖಳನಟರು ನಟಿಸಲಿದ್ದಾರಂತೆ. ಜೊತೆಗೆ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದು, ಪ್ರಮುಖ ಪಾತ್ರದಲ್ಲಿ ಮಯೂರಿ ಕೂಡ ಅಭಿನಯಿಸಲಿದ್ದಾರೆ.

More from Filmibeat

English summary
Hatrick hero shiva rajkumar starrer new movie rustom first look released on rajkumar birthday special. the movie directed by stunt master ravi varma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X