ಕಪ್ ಒಳಗೆ ಸ್ಪೂನ್ ಹಾಕುವ ಶಿವಣ್ಣನ ಸ್ಟೈಲ್ ಗೆ ಫಿದಾ ಆದ ನೆಟ್ಟಿಗರು.!
Recommended Video
'ಎನರ್ಜಿ' ಎಂದಕೂಡಲೆ ಕನ್ನಡ ಸಿನಿ ಭಕ್ತರಿಗೆ ಥಟ್ ಅಂತ ನೆನಪಾಗುವುದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.! ಯಾಕಂದ್ರೆ, ವಯಸ್ಸು 57 ಆದರೂ ಶಿವಣ್ಣ ಎನರ್ಜಿಯಲ್ಲಿ ಸ್ವಲ್ಪ ಕೂಡ ಕಮ್ಮಿ ಆಗಿಲ್ಲ. ಮೊದಲ ಸಿನಿಮಾದಲ್ಲಿ ಶಿವಣ್ಣ ಎಷ್ಟು ಎನರ್ಜಿಯಿಂದ ಪಾಲ್ಗೊಂಡಿದ್ರೋ, ಈಗಲೂ ಅದನ್ನೇ ಮೇನ್ಟೇನ್ ಮಾಡುತ್ತಿದ್ದಾರೆ.
ಇನ್ನೂ ಸ್ಟೈಲ್ ವಿಷಯದಲ್ಲೂ ಅಷ್ಟೇ. ನಿಜ ಜೀವನದಲ್ಲಿ ಹಾಫ್ ಸೆಂಚುರಿ ಬಾರಿಸಿರುವ ಶಿವಣ್ಣ ಸಿಕ್ಕಾಪಟ್ಟೆ ಸ್ಟೈಲಿಶ್. ಡ್ರೆಸ್ಸಿಂಗ್ ಜೊತೆಗೆ ಮಾಡುವ ಪ್ರತಿಯೊಂದು ಕೆಲಸವನ್ನೂ ಅಣ್ಣಾವ್ರ ಮಗ ಸ್ಟೈಲ್ ನಿಂದಲೇ ಮಾಡ್ತಾರೆ. ಅದಕ್ಕೊಂದು ಲೇಟೆಸ್ಟ್ ಉದಾಹರಣೆ ಇಲ್ಲಿದೆ.
ಟೇಬಲ್ ಮೇಲೆ ಇರುವ ಟೀ ಕಪ್ ಒಳಗೆ ಶಿವಣ್ಣ ಸ್ಟೈಲ್ ಆಗಿ ಸ್ಪೂನ್ ಹಾಕುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋನ ಖುದ್ದು ಶಿವಣ್ಣ ಹಂಚಿಕೊಂಡಿದ್ದರು.

ಅಷ್ಟಕ್ಕೂ, ಕಪ್ ಒಳಗೆ ಈ ರೀತಿ ಸ್ಪೂನ್ ಹಾಕುವ ಚಾಲೆಂಜ್ ನ ಗಣೇಶ್ ನಡೆಸಿಕೊಡುತ್ತಿದ್ದ 'ಸೂಪರ್ ಮಿನಿಟ್' ಶೋನಲ್ಲಿ ನೀವು ನೋಡಿರಬಹುದು. ಎಷ್ಟೋ ಮಂದಿ ಒಂದು ನಿಮಿಷದಲ್ಲಿ ಕಪ್ ಒಳಗೆ ಸ್ಪೂನ್ ಹಾಕಲು ಆಗದೆ ಔಟ್ ಆಗಿದ್ದರು.
ಆದರಿಲ್ಲಿ, ಪಕ್ಕಾ ಗುರಿಯಿಟ್ಟು ಒಂದೇ ಏಟಿಗೆ ಕಪ್ ಒಳಗೆ ಸ್ಪೂನ್ ಹಾಕಿದ್ದಾರೆ ಶಿವಣ್ಣ.! ಇದನ್ನ ನೋಡಿ ನೆಟ್ಟಿಗರಂತೂ ಫಿದಾ ಆಗಿದ್ದಾರೆ.


Click it and Unblock the Notifications











