ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇರುವ ಮಹಾದಾಸೆ ಏನು?
ಲಂಡನ್ ನಲ್ಲಿ ಇರುವ ಜಗತ್ಪ್ರಸಿದ್ಧ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಹಾಗೂ ಅಲ್ಲಿರುವ ವಿಶ್ವದ ಜನಪ್ರಿಯ ವ್ಯಕ್ತಿಗಳ ಮೇಣದ ಪ್ರತಿಮೆ ಬಗ್ಗೆ ನಿಮಗೆಲ್ಲಾ ಗೊತ್ತಿದೆ ತಾನೆ?
ಇತ್ತೀಚೆಗಷ್ಟೇ ಸನ್ಮಾನ ಸ್ವೀಕರಿಸಲು ಶಿವಣ್ಣ ಲಂಡನ್ ಗೆ ಹೋಗಿದ್ದಾಗ, ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದರು. ಅಲ್ಲಿರುವ, ಜಗದ್ವಿಖ್ಯಾತ ವ್ಯಕ್ತಿಗಳ ಮೇಣದ ಪ್ರತಿಮೆ ನೋಡಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಗೆ ಒಂದು ಆಸೆ ಆಗಿದೆ.[ಚಿತ್ರಗಳು : ಬಸವಣ್ಣಗೆ ನಮಿಸಿದ ಶಿವಣ್ಣಗೆ ಲಂಡನ್ನಿನಲ್ಲಿ ಸನ್ಮಾನ]

''ಅಪ್ಪಾಜಿಯ ಮೇಣದ ಪ್ರತಿಮೆ ಇಲ್ಲಿದ್ರೆ ಚೆನ್ನ'' ಎಂಬ ಬಯಕೆ ಶಿವಣ್ಣನಿಗಾಗಿದೆ. ಕೂಡಲೆ, ಮ್ಯಾಸಿಯಂ ಅಧಿಕಾರಿಗಳ ಜೊತೆ ಶಿವಣ್ಣ ಮಾತುಕತೆ ನಡೆಸಿದ್ದಾರೆ.

''ಡಾ.ರಾಜ್ ಕುಮಾರ್ ಬರೀ ನಟ ಮಾತ್ರ ಅಲ್ಲ. ಸಾಮಾಜಿಕ ಕಳಕಳಿ ಇರುವ ವ್ಯಕ್ತಿ. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ರಾಜಕೀಯ ಶಕ್ತಿ ಇಲ್ಲದೆ ಅವರು ಮಾಡಿರುವ ಹೋರಾಟ ಮರೆಯಲು ಸಾಧ್ಯ ಇಲ್ಲ. ಮ್ಯೂಸಿಯಂ ನಲ್ಲಿ ಅಪ್ಪಾಜಿ ಪ್ರತಿಮೆ ಇಡಲು ಅರ್ಹ'' ಅಂತ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ ಶಿವಣ್ಣ.
ಶಾರುಖ್ ಖಾನ್, ಕರೀನಾ ಕಪೂರ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಸಲ್ಮಾನ್ ಖಾನ್, ಹೃತಿಕ್ ರೋಷನ್ ಸೇರಿದಂತೆ ಕೆಲ ಖ್ಯಾತ ಬಾಲಿವುಡ್ ತಾರೆಯರ ಮೇಣದ ಪ್ರತಿಮೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಮೇಣದ ಪ್ರತಿಮೆ ಕೂಡ ಅನಾವರಣವಾಯ್ತು.


Click it and Unblock the Notifications











