»   » ಮತ್ತೆ ತೆರೆ ಮೇಲೆ ಬರುತ್ತಿದೆ ಶಿವಣ್ಣನ 'ಮುತ್ತಣ್ಣ' ಸಿನಿಮಾ

ಮತ್ತೆ ತೆರೆ ಮೇಲೆ ಬರುತ್ತಿದೆ ಶಿವಣ್ಣನ 'ಮುತ್ತಣ್ಣ' ಸಿನಿಮಾ

Posted By:
Subscribe to Filmibeat Kannada
Shiva Rajkumar's Mutthanna, Kannada movie to re released on September 22nd

'ಮುತ್ತಣ್ಣ ಪೀಪಿ ಊದುವ...' ಈ ಹಾಡನ್ನು ಯಾರು ತಾನೇ ಮರೆಯುವುದಕ್ಕೆ ಆಗುತ್ತದೆ ಹೇಳಿ. 'ಮುತ್ತಣ್ಣ' ಸಿನಿಮಾದ ಈ ಹಾಡಿನ ಸದ್ದು ಮತ್ತೆ ಈಗ ಜೋರಾಗುತ್ತಿದೆ. ಕಾರಣ ಈಗ ಮತ್ತೆ 'ಮುತ್ತಣ್ಣ' ಸಿನಿಮಾ ತೆರೆ ಮೇಲೆ ಬರುತ್ತಿದೆ.

ಹೊಸ ಪ್ರಯೋಗಕ್ಕೆ ಮುಂದಾದ ಶಿವರಾಜ್ ಕುಮಾರ್!

'ಓಂ' ಸೇರಿದಂತೆ ಶಿವರಾಜ್ ಕುಮಾರ್ ಅವರ ಅನೇಕ ಸಿನಿಮಾಗಳು ಈಗಾಗಲೇ ರಿರಿಲೀಸ್ ಆಗಿವೆ. ಈಗ 'ಮುತ್ತಣ್ಣ' ಸಿನಿಮಾ ಕೂಡ ಮತ್ತೆ ಬಿಡುಗಡೆಯಾಗುತ್ತಿದೆ. 1994 ರಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಈಗ ಮತ್ತೆ ಮೋಡಿ ಮಾಡುವುದಕ್ಕೆ ಬರುತ್ತಿದೆ. 2K ರೆಸೊಲ್ಯೂಷನ್ ಮತ್ತು 7.1 ಸೌಂಡ್ ನೊಂದಿಗೆ ಹೊಸ ವರ್ಷನ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

Shiva Rajkumar's 'Muthanna' movie to be re released on september 22.

ಶಿವಣ್ಣನ ಕೆರಿಯರ್ ನಲ್ಲಿ 'ಮುತ್ತಣ್ಣ' ತುಂಬ ಪ್ರಮುಖ ಸಿನಿಮಾ. ಕಾರಣ ಇದು ಅವರ ಮೊದಲ ದ್ವಿಪಾತ್ರದ ಸಿನಿಮಾ, ಜೊತೆಗೆ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಣ್ಣನಾಗಿ ಕಾಣಿಸಿಕೊಂಡಿದ್ದರು. ಎಂ.ಎಸ್.ರಾಜಶೇಖರ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅಂದಹಾಗೆ, ಇಂತಹ ಸೂಪರ್ ಹಿಟ್ ಸಿನಿಮಾ ಈಗ ಮತ್ತೆ ತೆರೆ ಮೇಲೆ ಬರುತ್ತಿದೆ. 'ಮುತ್ತಣ್ಣ' ಸಿನಿಮಾ ಇದೇ ತಿಂಗಳ 22ಕ್ಕೆ ಮರುಬಿಡುಗಡೆಯಾಗುತ್ತಿದೆ.

English summary
Actor Shiva Rajkumar's 'Muthanna' movie to be re released in new version on september 22.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada