ಹಳೇದು ಬಿಡಿ, ಶಿವಣ್ಣ ಕೈಯಲ್ಲಿರೋ ಹೊಸ ಚಿತ್ರಗಳ ಪಟ್ಟಿ ನೋಡಿ

By Bharath Kumar

Recommended Video

ಶಿವಣ್ಣ ಇನ್ಮುಂದೆ ಫುಲ್ ಬ್ಯುಸಿ ಗುರೂ...!! | Filmibeat Kannada

ಹ್ಯಾಟ್ರಿಕ್ ಹೀರೋ, ಸೆಂಚುರಿಸ್ಟಾರ್, ಕರುನಾಡು ಚಕ್ರವರ್ತಿ ಸ್ವಲ್ಪನೂ ವಿರಾಮವೇ ಇಲ್ಲದೇ ಸತತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಒಂದು ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ಮತ್ತೊಂದು ಸಿನಿಮಾ ಟೇಕ್ ಆನ್ ಮಾಡುವ ಶಿವಣ್ಣ ಮತ್ತಷ್ಟು ಹೊಸ ಚಿತ್ರಗಳಿಗೆ ಅಸ್ತು ಎಂದಿದ್ದಾರೆ.

ಈಗ ಕೈಯಲ್ಲಿರೋ ಚಿತ್ರಗಳಿಗೆ ಕಾಲ್ ಶೀಟ್ ಹೇಗೆ ಕೊಡ್ತಾರೆ ಎಂಬ ಕುತೂಹಲ ಅವರ ಆಪ್ತರು, ಅಭಿಮಾನಿಗಳಲ್ಲಿ ಕಾಡುತ್ತಿದೆ. ಹೀಗುರುವಾಗ ಹೊಸ ಹೊಸ ಸಿನಿಮಾಗಳನ್ನ ಘೋಷಣೆ ಮಾಡ್ತಾನೆ ಇದ್ದಾರೆ. ಹಾಗಿದ್ರೆ, ಶಿವರಾಜ್ ಕುಮಾರ್ ಈಗ ಮಾಡುತ್ತಿರುವ ಸಿನಿಮಾಗಳನ್ನ ಬಿಟ್ಟು ಹೊಸದಾಗಿ ಯಾವ ಪ್ರಾಜೆಕ್ಟ್ ಗೆ ಜೈ ಎಂದಿದ್ದಾರೆ ಎಂಬುದರ ಪಟ್ಟಿ ಮುಂದೆ ಓದಿ.....

ದ್ವಾರಕೀಶ್ ಬ್ಯಾನರ್ ನಲ್ಲೊಂದು ಚಿತ್ರ

ದ್ವಾರಕೀಶ್ ಬ್ಯಾನರ್ ನಲ್ಲೊಂದು ಚಿತ್ರ

ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿರುವ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆಪ್ತಮಿತ್ರ, ಆಪ್ತರಕ್ಷಕ, ದೃಶ್ಯ, ಶಿವಲಿಂಗ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪಿ.ವಾಸು ಈ ಸಿನಿಮಾವನ್ನ ಡೈರೆಕ್ಟ್ ಮಾಡಲಿದ್ದಾರೆ.

ಭಟ್ ಜೊತೆ ಸಿನಿಮಾ

ಭಟ್ ಜೊತೆ ಸಿನಿಮಾ

ನಿರ್ದೇಶಕ ಯೋಗರಾಜ್ ಭಟ್ ಅವರ ಜೊತೆ ಶಿವಣ್ಣ ಒಂದು ಸಿನಿಮಾ ಮಾಡಲಿ ಅಥವಾ ಮಾಡ್ತಾರೆ ಎನ್ನುತ್ತಿದ್ದವರಿಗೆ ಗುಡ್ ನ್ಯೂಸ್. ನಿರೀಕ್ಷೆಯಂತೆ ಇವರಿಬ್ಬರ ಜೋಡಿಯಲ್ಲಿ ಸಿನಿಮಾ ಅನೌನ್ಸ್ ಆಗಿದೆ. ಭಾಸ್ಕರ್ ರಾಶಿ ನಿರ್ಮಾಣದಲ್ಲಿ ಸೆಟ್ಟೇರಲಿರುವ ಈ ಚಿತ್ರದ ಟೈಟಲ್ ಆಗಸ್ಟ್ 1ಕ್ಕೆ ಲಾಂಚ್ ಆಗುತ್ತಿದೆ. ಭಟ್ಟರ ಜೊತೆ ಇದು ಶಿವಣ್ಣಂಗೆ ಮೊದಲ ಸಿನಿಮಾ.

ನಾಗಾಭರಣ ಸಿನಿಮಾ

ನಾಗಾಭರಣ ಸಿನಿಮಾ

'ಜನುಮದ ಜೋಡಿ', 'ಚಿಗುರಿದ ಕನಸು' ಅಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ್ದ ನಾಗಾಭರಣ ಅವರ ಜೊತೆ ಮತ್ತೊಂದು ಚಿತ್ರವನ್ನ ಶಿವಣ್ಣ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನ ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡಲಿದ್ದಾರೆ. ಇದು ಕಾದಂಬರಿ ಆಧರಿತ ಸಿನಿಮಾ ಎಂಬುದು ವಿಶೇಷ.

ರಥಾವರ ನಿರ್ದೇಶಕನ ಸಿನಿಮಾ

ರಥಾವರ ನಿರ್ದೇಶಕನ ಸಿನಿಮಾ

'ರಥಾವರ' ಸಿನಿಮಾ ಮಾಡಿದ್ದ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಜೈ ಎಂದಿದ್ದಾರೆ. ಈ ಚಿತ್ರಕ್ಕೆ ವೈರಮುಡಿ ಎಂದು ಟೈಟಲ್ ಇಟ್ಟಿದ್ದು ಬಿ.ಎನ್.ಸ್ವಾಮಿ ಎಂಬುವರು ಈ ಸಿನಿಮಾ ಮಾಡ್ತಿದ್ದಾರೆ.

ಶೂಟಿಂಗ್ ನಡೆಯುತ್ತಿರುವ ಚಿತ್ರಗಳು

ಶೂಟಿಂಗ್ ನಡೆಯುತ್ತಿರುವ ಚಿತ್ರಗಳು

ಇದಲ್ಲದೇ, ಪ್ರೇಮ್ ನಿರ್ದೇಶನ 'ದಿ ವಿಲನ್' ಮುಗಿದಿದೆ, 'ಕವಚ' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಸಾಹಸ ನಿರ್ದೇಶಕ ರವಿವರ್ಮ ಜೊತೆ 'ರುಸ್ತುಂ' ಸಿನಿಮಾ ಮಾಡ್ತಿದ್ದಾರೆ. ಈ ಮಧ್ಯೆ ಲಕ್ಕಿ ಗೋಪಾಲ್ ನಿರ್ದೇಶನದ ಎಸ್.ಆರ್.ಕೆ, ಸೂರಿ ಜೊತೆ 'ಟಗರು 2' ಹಾಗೂ 'ದ್ರೋಣ' ಎಂಬ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.

More from Filmibeat

English summary
Kannada actor hatric hero shiva rajkumar's 4 new movie announced for his 56th birthday special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X