twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗಿನಲ್ಲಿ ಜಲ್ಸಾ, ತಮಿಳಿನಲ್ಲಿ ಬಾ‍ಷಾ, ಕನ್ನಡದಲ್ಲಿ ಮರುಬಿಡುಗಡೆಯಾಗಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಯಾವುದು?

    |

    ತೆಲುಗಿನಲ್ಲಿ ಇತ್ತೀಚೆಗಷ್ಟೆ ರಿ ರಿಲೀಸ್ ಟ್ರೆಂಡ್ ಆರಂಭಗೊಂಡಿದೆ. ಹೀಗಾಗಿ ಅಲ್ಲಿನ ಸ್ಟಾರ್ ನಟರ ಹಳೆಯ ಹಿಟ್ ಚಿತ್ರಗಳನ್ನು ಈಗಿನ 4K ರೆಸೆಲ್ಯೂಶನ್‌ಗೆ ಅಪ್‌ಡೇಟ್ ಮಾಡಿ ಮರು ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಹೇಳಿ ಕೇಳಿ ಟಾಲಿವುಡ್‌ನಲ್ಲಿ ಸಿನಿಮಾ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಿದ್ದು ಅಭಿಮಾನಿಗಳು ತಮ್ಮ ನೆಚ್ಚಿನ ನಟರ ವಿಂಟೇಜ್ ಅವತಾರಗಳನ್ನು ಈಗಿನ ತಂತ್ರಜ್ಙಾನದಲ್ಲಿ ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ.

    ಈ ಹಿಂದೆ ತೆಲುಗು ಸ್ಟಾರ್ ನಟರ ಹಳೆ ಚಿತ್ರಗಳನ್ನು ಅವರ ಹುಟ್ಟುಹಬ್ಬದ ಅಂಗವಾಗಿ ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ಪ್ರವೃತ್ತಿ ಇದೀಗ ದೊಡ್ಡ ಮಟ್ಟಕ್ಕೆ ತಿರುಗಿದ್ದು, ಆಗಸ್ಟ್ 9ರಂದು ಮಹೇಶ್ ಬಾಬು ಹುಟ್ಟುಹಬ್ಬದ ಅಂಗವಾಗಿ ಪೋಕಿರಿ ಸಿನಿಮಾವನ್ನು 370 ಪರದೆಗಳಲ್ಲಿ ಮರುಬಿಡುಗಡೆ ಮಾಡಲಾಗಿತ್ತು ಹಾಗೂ ಸೆಪ್ಟೆಂಬರ್ 2ರಂದು ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬದ ಅಂಗವಾಗಿ ಜಲ್ಸಾ ಚಿತ್ರವನ್ನು 700ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿ ರಿಲೀಸ್ ಮಾಡಲಾಗಿತ್ತು.

    ಜೂ.ಎನ್‌ಟಿಆರ್ 30ನೇ ಸಿನಿಮಾಗೆ ಬರ್ತಾರಂತೆ ಮಾಜಿ ಸ್ಟಾರ್ ಹೀರೊಯಿನ್: ಯಾರವರು? ಜೂ.ಎನ್‌ಟಿಆರ್ 30ನೇ ಸಿನಿಮಾಗೆ ಬರ್ತಾರಂತೆ ಮಾಜಿ ಸ್ಟಾರ್ ಹೀರೊಯಿನ್: ಯಾರವರು?

    ಹೀಗೆ ಮರು ಬಿಡುಗಡೆಗೊಂಡ ಈ ಎರಡೂ ಚಿತ್ರಗಳೂ ಸಹ ಭರ್ಜರಿ ಕಲೆಕ್ಷನ್ ಮಾಡಿದ್ದು, ಸದ್ಯ ಈ ವಿಚಾರವಾಗಿಯೂ ಸಹ ಹೋಲಿಕೆಗಳು ಶುರುವಾಗಿವೆ. ಮೊದಲಿಗೆ ರಿ ರಿಲೀಸ್ ಆದ ಪೋಕಿರಿ 1.76 ಕೋಟಿ ಗಳಿಸಿದರೆ, ಪವನ್ ಕಲ್ಯಾಣ್ ನಟನೆಯ ಜಲ್ಸಾ 3.20 ಕೋಟಿ ಗಳಿಸಿತು. ಇನ್ನು ಪೋಕಿರಿ ಸಿನಿಮಾಗಿಂತ ಜಲ್ಸಾ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಕಾರಣ ದೊಡ್ಡ ಕಲೆಕ್ಷನ್ ಮಾಡಿತು ಎನ್ನುವುದು ಸತ್ಯವಾದರೂ ಸಹ ಸದ್ಯ ರಿರಿಲೀಸ್ ಆಗಿ ಅತಿಹೆಚ್ಚು ಗಳಿಸಿದ ತೆಲುಗು ಸಿನಿಮಾ ಎಂಬ ದಾಖಲೆಯನ್ನು ನಿರ್ಮಿಸಿದೆ. ಇನ್ನು ಈ ರಿ ರಿಲೀಸ್ ತೆಲುಗಿನವರಿಗೆ ತುಸು ಹೊಸತಿರುಬಹುದು, ಆದರೆ ಕನ್ನಡಿಗರಿಗೆ ಮತ್ತು ತಮಿಳು ಸಿನಿ ಪ್ರೇಕ್ಷಕರಿಗೆ ಇದೊಂದು ಅತಿಹಳೆಯ ಟ್ರೆಂಡ್ ಆಗಿದೆ.

    ತಮಿಳಿನಲ್ಲಿ ರಜಿನಿ 'ಬಾಷಾ' ರಿ ರಿಲೀಸ್

    ತಮಿಳಿನಲ್ಲಿ ರಜಿನಿ 'ಬಾಷಾ' ರಿ ರಿಲೀಸ್

    ರಜಿನಿಕಾಂತ್ ಅಭಿನಯದ ಬಾಷಾ 1995ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ಚಿತ್ರ. ರಜಿನಿ ಸಿನಿ ಜೀವನದಲ್ಲಿ ಆ ಸಮಯಕ್ಕೆ ಬೃಹತ್ ಹಿಟ್ ಆಗಿದ್ದ ಈ ಬಾಷಾ ನಂತರ ಕನ್ನಡಕ್ಕೂ ಸಹ ರಿಮೇಕ್ ಆಯಿತು. ರಜಿನಿ ಹುಟ್ಟುಹಬ್ಬ ಹಾಗೂ ಕೆಲ ವಿಶೇಷ ಸಂದರ್ಭಗಳಲ್ಲಿ ಬಾಷಾ ಚಿತ್ರವನ್ನು ರಿ ರಿಲೀಸ್ ಮಾಡಿದ್ದಿದೆ. ಬಾಷಾ ಅನೇಕ ಬಾರಿ ರಿ ರಿಲೀಸ್ ಅಗಿದ್ದು, ಮರುಬಿಡುಗಡೆ ವೇಳೆಯೂ ಸಹ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ. ಈ ಮೂಲಕ ತಮಿಳಿನಲ್ಲಿ ಬಾಷಾ ಸಿನಿಮಾ ಮರುಬಿಡುಗಡೆಯಾಗಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ.

    ಕನ್ನಡದಲ್ಲಿ ರಿ ರಿಲೀಸ್ ಆಗಿ ಅತಿಹೆಚ್ಚು ಹಣ ಬಾಚಿದ ಸಿನಿಮಾ ಯಾವುದು?

    ಕನ್ನಡದಲ್ಲಿ ರಿ ರಿಲೀಸ್ ಆಗಿ ಅತಿಹೆಚ್ಚು ಹಣ ಬಾಚಿದ ಸಿನಿಮಾ ಯಾವುದು?

    ಇನ್ನು ರಿ ರಿಲೀಸ್ ಮೂಲಕ ಅತಿಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಶಿವರಾಜ್ ಕುಮಾರ್ ಅಭಿನಯದ, ಉಪೇಂದ್ರ ನಿರ್ದೇಶನದ ಓಂ. 500ಕ್ಕೂ ಹೆಚ್ಚು ಬಾರಿ ರಿ ರಿಲೀಸ್ ಆಗಿರುವ ಓಂ ಅತಿಹೆಚ್ಚು ಬಾರಿ ಮರುಬಿಡುಗಡೆಯಾದ ಚಿತ್ರ ಎಂಬ ದಾಖಲೆಯನ್ನು ಹೊಂದಿದೆ. ಬಿಡುಗಡೆಯಾಗಿ ಎರಡು ದಶಕದ ನಂತರ ಕಿರುತೆರೆಯಲ್ಲಿ ಪ್ರಸಾರವಾದ ಓಂ ಅಲ್ಲಿಯವರೆಗೂ ಹಲವಾರು ಬಾರಿ ತೆರೆಗಪ್ಪಳಿಸಿದೆ. ಓಂ ಚಿತ್ರ ಮರುಬಿಡುಗಡೆಯಾದಾಗಲೆಲ್ಲಾ ಎಷ್ಟರ ಮಟ್ಟಿಗೆ ಜನ ಮುಗಿಬಿದ್ದು ವೀಕ್ಷಿಸುತ್ತಿದ್ದರು ಹಾಗೂ ಕ್ರೇಜ್ ಹೇಗಿತ್ತು ಎಂಬುದನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಹೀಗೆ 500ಕ್ಕಿಂತ ಹೆಚ್ಚು ಬಾರಿ ಮರುಬಿಡುಗಡೆಯಾಗಿರುವ ಓಂ ರಿರಿಲೀಸ್ ಮೂಲಕ ಅತಿಹೆಚ್ಚು ಹಣ ಬಾಚಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ.

    ಹೊಸ ಕ್ವಾಲಿಟಿಯಲ್ಲಿ ಬಿಡುಗಡೆಯಾದಾಗ ಅರ್ಧಶತಕ

    ಹೊಸ ಕ್ವಾಲಿಟಿಯಲ್ಲಿ ಬಿಡುಗಡೆಯಾದಾಗ ಅರ್ಧಶತಕ

    ಓಂ ಚಿತ್ರವನ್ನು ಹೊಸ ತಂತ್ರಜ್ಙಾನದೊಂದಿಗೆ ಡಿಟಿಎಸ್ ಸೌಂಡ್ ಕ್ವಾಲಿಟಿಯಲ್ಲಿ 2015ರ ಮಾರ್ಚ್ 12ರಂದು ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಓಂ ಸಿನಿಮಾ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿತ್ತು. ಇಷ್ಟರ ಮಟ್ಟಿಗಿನ ಕ್ರೇಜ್ ಇದ್ದ ಓಂ ಮರುಬಿಡುಗಡೆಯಾದಾಗಲೆಲ್ಲಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ.

    ಬಿಡುಗಡೆಯಾಗಿ ಇಪ್ಪತ್ತು ವರ್ಷಗಳ ನಂತರ ಟಿವಿ ಪ್ರೀಮಿಯರ್

    ಬಿಡುಗಡೆಯಾಗಿ ಇಪ್ಪತ್ತು ವರ್ಷಗಳ ನಂತರ ಟಿವಿ ಪ್ರೀಮಿಯರ್

    ಬೆಳ್ಳಿ ತೆರೆಯಲ್ಲಿ ಕೋಟಿ ಕೋಟಿ ಬಾಚಿದ್ದ ಓಂ ಸಿನಿಮಾ ಬರೋಬ್ಬರಿ ಇಪ್ಪತ್ತು ವರ್ಷಗಳ ನಂತರ ಟಿವಿಯಲ್ಲಿ ಪ್ರಸಾರವಾಯಿತು. ಹತ್ತು ಕೋಟಿಗೆ ಓಂ ಸಿನಿಮಾದ ಟಿವಿ ಹಕ್ಕನ್ನು ಸನ್ ನೆಟ್‌ವರ್ಕ್ ಖರೀದಿಸಿತ್ತು. ಬಿಡುಗಡೆಯಾಗಿ ಇಪ್ಪತ್ತು ವರ್ಷಗಳ ನಂತರವೂ ಭರ್ಜರಿ ಮೊತ್ತಕ್ಕೆ ಮಾರಾಟವಾದ ಚಿತ್ರ ಎಂಬ ಹೆಗ್ಗಳಿಕೆ ಕೂಡ ಓಂ ಚಿತ್ರಕ್ಕಿದೆ.

    English summary
    Shiva Rajkumar's Om has hold the highest grossed movie record when re released. Read on
    Wednesday, September 7, 2022, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X