»   » ಉಪ್ಪಿಯ 'ಪ್ರಜಾಕೀಯ'ದ ಬಗ್ಗೆ ಶಿವಣ್ಣ ಏನ್ ಹೇಳಿದ್ದಾರೆ ನೋಡಿ..!

ಉಪ್ಪಿಯ 'ಪ್ರಜಾಕೀಯ'ದ ಬಗ್ಗೆ ಶಿವಣ್ಣ ಏನ್ ಹೇಳಿದ್ದಾರೆ ನೋಡಿ..!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯವನ್ನು 'ಪ್ರಜಾಕೀಯ'ವಾಗಿ ಮಾಡುವುದಕ್ಕೆ ಹೊರಟಿದ್ದಾರೆ. ಉಪ್ಪಿ ಅವರ ಈ ನಿರ್ಧಾರದ ಬಗ್ಗೆ ಅನೇಕರು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಈಗ ನಟ ಶಿವರಾಜ್ ಕುಮಾರ್ ಸಹ ಉಪೇಂದ್ರ ಅವರ 'ಪ್ರಜಾಕೀಯ'ದ ಬಗ್ಗೆ ಮಾತನಾಡಿದ್ದಾರೆ.

ಉಪೇಂದ್ರ 'ಮಹಾ ಕನಸಿನ' ಬಗ್ಗೆ ನಟ ಯಶ್ ಮಾಡಿದ ಕಾಮೆಂಟ್ ಇದು.!

ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಒಳ್ಳೆಯ ಸ್ನೇಹಿತರು. ಶಿವಣ್ಣ ಅವರ 'ಓಂ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಉಪ್ಪಿ 'ಪ್ರೀತ್ಸೆ' ಚಿತ್ರದಲ್ಲಿ ಅವರೊಂದಿಗೆ ನಟಿಸಿದ್ದರು. ವಿಶೇಷ ಅಂದ್ರೆ, ಈ ಹಿಂದೆ ಶಿವಣ್ಣ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಇತ್ತು.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಉಪೇಂದ್ರ ಆಡಿರುವ ಮಾತಿದು...

ಇದೆಲ್ಲದರ ನಡುವೆ ಈಗ ಉಪೇಂದ್ರ ಸಿನಿಮಾ ಬಿಟ್ಟು ಸಮಾಜದ ಬದಲಾವಣೆಗೆ ಮುಂದಾಗಿದ್ದು, ಉಪೇಂದ್ರ ಅವರ ಈ ನಿರ್ಧಾರದ ಬಗ್ಗೆ ಶಿವಣ್ಣ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮುಂದೆ ಓದಿ...

ಒಳ್ಳೆಯ ನಿರ್ಧಾರ

''ಉಪೇಂದ್ರ ಅವರು ಪಾಲಿಟಿಕ್ಸ್ ಗೆ ಬರುವ ವಿಷಯವನ್ನು ನಾನು ಕೂಡ ಟಿವಿ ಯಲ್ಲಿ ನೋಡಿದೆ. ಉಪೇಂದ್ರ ಅವರು ಮಾತಾಡಿದ ರೀತಿ ತುಂಬ ಚೆನ್ನಾಗಿತ್ತು. ಅದು ಜನಗಳಿಗೆ ಅರ್ಥ ಆಗಬೇಕು.'' ಎಂದು ನಟ ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಬುದ್ಧಿವಂತ ಉಪ್ಪಿ

''ಉಪ್ಪಿ ತುಂಬ ಬುದ್ಧಿವಂತ.. ಮತ್ತು ಅವರು ತುಂಬ ಉತ್ಸಾಹ ಹೊಂದಿರುವ ವ್ಯಕ್ತಿ. ನಾನು ಅವರಿಗೆ ಶುಭಕೊರುತ್ತೇನೆ... ಒಳ್ಳೆಯದಾಗಲಿ.'' - ಶಿವರಾಜ್ ಕುಮಾರ್, ನಟ

ಜನ ಬದಲಾಗಲಿ...

''ಉಪೇಂದ್ರ ಅವರು ರಾಜಕೀಯಕ್ಕೆ ಬಂದು ವ್ಯವಸ್ಥೆಯನ್ನು ಬದಲಾಯಿಸಲಿ. ಜನ ಕೂಡ ಇದರಿಂದ ಬದಲಾಗಲಿ ಅಂತ ನಾನು ಕೇಳಿಕೊಳ್ಳುತ್ತೇನೆ.'' - ಶಿವರಾಜ್ ಕುಮಾರ್, ನಟ

ಯಶ್ ಕೂಡ ಸಾಥ್ ನೀಡಿದ್ದರು

ಶಿವಣ್ಣ ಅವರ ರೀತಿ ನಟ ಯಶ್ ಕೂಡ ಉಪೇಂದ್ರ ಅವರ ಈ ನಿರ್ಧಾರಕ್ಕೆ ತಮ್ಮ ಸಾಥ್ ನೀಡಿದ್ದರು. ಉಪೇಂದ್ರ ಅವರ ಈ ನಡೆಯನ್ನು ನಾವು ಗೌರವಿಸೊಣ.. ಎಂದು ಯಶ್ ಉಪ್ಪಿಗೆ ವಿಶ್ ಮಾಡಿದ್ದರು.

ದೊಡ್ಡ ಚರ್ಚೆ

ಉಪೇಂದ್ರ 'ಪ್ರಜಾಕೀಯ'ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಅನೇಕರು ಉಪ್ಪಿ ಅವರ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇನ್ನು ಕೆಲವರು ಇದೆಲ್ಲ ವಾಸ್ತವದಲ್ಲಿ ನಡೆಯುತ್ತಾ ಎಂದು ಪ್ರಶ್ನೆ ಹಾಕಿದ್ದಾರೆ.

English summary
Shiva Rajkumar supports Real Star Upendra for his decision of entering into Politics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada