ಸೆಂಚುರಿ ಸ್ಟಾರ್ ಶಿವಣ್ಣನ ಕೈಯಲ್ಲಿ 6 ಸಿನಿಮಾ: ಹೊಸ ಸಿನಿಮಾಗಳ ಪಟ್ಟಿ ಇಲ್ಲಿದೆ!

ನಟ ಶಿವರಾಜ್ ಕುಮಾರ್ ಹುಟ್ಟುಹುಟ್ಟು ಹಬ್ಬದ ಬಗ್ಗೆ ಮಾತನಾಡಬೇಕು ಅಂದರೆ, ಮೊದಲು ಅವರ ವಯಸ್ಸಿನ ಬಗ್ಗೆ ಹೇಳಲೇ ಬೇಕು. ನಟ ಶಿವರಾಜ್‌ಕುಮಾರ್ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ವಯಸ್ಸು 60 ಎಂದರೆ ನಂಬೋದು ಕೊಂಚ ಕಷ್ಟವೇ. ಅಷ್ಟರ ಮಟ್ಟಿಗೆ ಯಂಗ್ ಮತ್ತು ಎನರ್ಜಿಟಿಕ್ ನಮ್ಮ ಶಿವಣ್ಣ.

ಅವರ ಹುಟ್ಟುಹಬ್ಬ ಅಂದರೆ ಅವರ ಅಭಿಮಾನಿಗಳ ಪಾಲಿಗೆ ಅದು ದೊಡ್ಡ ಹಬ್ಬ. ಅಭಿಮಾನಿಗಳೇ ನಮ್ಮ ಮನೆ ದೇವ್ರು ಎಂದು ಕರೆದ ರಾಜ್‌ ಕುಟುಂಬ. ಅಂತೆಯೇ ತಮ್ಮ ಅಭಿಮಾನಿಗಳನ್ನು ಪೂಜ್ಯ ಭಾವದಿಂದ ಕಾಣುತ್ತಾರೆ. ಹಾಗಾಗಿ ಶಿವಣ್ಣನ ಹುಟ್ಟುಹಬ್ಬ ಅವರ ಅಭಿಮಾನಿಗಳೂ ತುಂಬಾನೆ ಸ್ಪೆಷಲ್.

ಇನ್ನು ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಹಲವು ಸಿನಿಮಾಗಳು ಲಾಂಚ್ ಆಗಿವೆ. ಜೊತೆಗೆ ಆ ಎಲ್ಲಾ ಚಿತ್ರಗಳ ಟೈಟಲ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಹಾಗಿದ್ದರೆ ನಟ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾಗಳು ಯಾವುವು ಎನ್ನುವುದನ್ನು ಮುಂದೆ ಓದಿ...

ಶಿವಣ್ಣ 127ನೇ ಸಿನಿಮಾ ಪ್ರಕಟ!

ಶಿವಣ್ಣ 127ನೇ ಸಿನಿಮಾ ಪ್ರಕಟ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 127ನೇ ಸಿನಿಮಾ ಪ್ರಕಟಗೊಂಡಿದೆ. 'ಅವನೇ ಶ್ರೀಮನ್ನಾರಾಯಣ' ನಿರ್ದೇಶಕ ಸಚಿನ್ ಈ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಕನ್ನಡ ಸಿನಿಲೋಕದ ಯಂಗ್ ಅಂಡ್ ಎನರ್ಜಿಟಿಕ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ನಟಿಸಲಿರುವ 127ನೇ ಶಿವಣ್ಣನ 60ನೇ ಹುಟ್ಟುಹಬ್ಬದ ಪ್ರಯುಕ್ತ ಪ್ರಕಟವಾಗಿದೆ. ಇದು ಅಶ್ವತ್ಥಾಮ ಸಾಹಸಗಾಥೆಯನ್ನು ಆಧಾರಿಸಿದ ಸಿನಿಮಾ. ಈ ಸಿನಿಮಾದ ಟೈಟಲ್ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ರಿವೀಲ್ ಆಗಲಿದೆ.

ಅರ್ಜುನ್ ಜನ್ಯ ಸಾರಥ್ಯದಲ್ಲಿ '45'!

ಅರ್ಜುನ್ ಜನ್ಯ ಸಾರಥ್ಯದಲ್ಲಿ '45'!

ನಟ ಶಿವರಾಜ್ ಕುಮಾರ್‌ಗೆ ನಿರ್ದೇಶನ ಮಾಡುವ ಮೂಲಕ ಅರ್ಜುನ್ ಜನ್ಯ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದರೆ. ಈ ಚಿತ್ರಕ್ಕೆ '45' ಎನ್ನುವ ಟೈಟಲ್ ನಿಗಧಿ ಆಗಿದೆ. ಸದ್ಯ ಚಿತ್ರದ ಟೈಟಲ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಶಿವಣ್ಣನ ಹುಟ್ಟು ಹಬ್ಬದ ಪ್ರಯುಕ್ತ '45' ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚು ಮಾಡಿದೆ. ಅರ್ಜುನ್ ಜನ್ಯ ಮೊದಲ ನಿರ್ದೇಶನ ಆದರೂ ಕೂಡ ಪೋಸ್ಟರ್ ಮೂಲಕ ಕುತೂಹಲ ಹುಟ್ಟು ಹಾಕಿದ್ದಾರೆ.

'ಘೋಸ್ಟ್' ಚಿತ್ರದಲ್ಲಿ ಶಿವರಾಜ್ ಕುಮಾರ್!

'ಘೋಸ್ಟ್' ಚಿತ್ರದಲ್ಲಿ ಶಿವರಾಜ್ ಕುಮಾರ್!

ನಟ ಶಿವರಾಜ್ ಕುಮಾರ್ ಅಭಿನಯಿಸಲಿರುವ ಮತ್ತೊಂದು ಸಿನಿಮಾ 'ಘೋಸ್ಟ್'. ಈ ಚಿತ್ರದ ಹೆಸರೇ 'ಘೋಸ್ಟ್'. ಹಾಗಾಗಿ ಇದರಲ್ಲಿ ಹಾರರ್ ಎಫೆಕ್ಟ್ ಇದ್ದೇ ಇರುತ್ತೆ. ಅಥವಾ ನಿರ್ದೇಶಕ ಶ್ರೀನಿ ಬೇರೆ ಏನನ್ಮನೋ ಹೇಳ ಹೊರಿದ್ದಾ ಎನ್ನುವು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಸದ್ಯ ಈ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ ನಟ ಕಿಚ್ಚ ಸುದೀಪ್. ಪೋಸ್ಟರ್‌ನಲ್ಲಿ ಒಂದಷ್ಟು ಹಾರರ್ ಎಫೆಕ್ಟ್ ಜೊತೆಗೆ ಕಾರು, ಬೈಕ್, ಗನ್ ಇರುವು ಕುತೂಹಲ ಹೆಚ್ಚಿಸಿದೆ.

ಶಿವಣ್ಣ, ಯೋಗರಾಜ್ ಭಟ್ ಸಿನಿಮಾ!

ಶಿವಣ್ಣ, ಯೋಗರಾಜ್ ಭಟ್ ಸಿನಿಮಾ!

ನಟ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಒಟ್ಟಾಗಿ ಸಿನಿಮಾ ಮಾಡುತಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ಯೋಗರಾಜ್ ಭಟ್ ಡೈರೆಕ್ಷನ್ ಮಾಡ್ತಿದ್ದಾರೆ. ಅಧಿಕೃತವಾಗಿ ಸಿನಿಮಾ ಪ್ರಕಟವಾಗಿದೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ಇವರ ಕಾಂಬಿನೇಷನ್ ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಗಿದೆ. ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಇಬ್ಬರೂ ಡಾನ್ಸ್ ಮಾಡೋದ್ರಲ್ಲಿ ಪಂಟರು. ಹಾಗಾಗಿ ಈ ಚಿತ್ರದಲ್ಲಿ ಇವರ ನೃತ್ಯದ ಹಬ್ಬವು ಇರಲಿದೆ.

ಶಿವಣ್ಣ, ರಜನಿಕಾಂತ್ ಸಿನಿಮಾ!

ಶಿವಣ್ಣ, ರಜನಿಕಾಂತ್ ಸಿನಿಮಾ!

ಕನ್ನಡದ ಸೂಪರ್ ಸ್ಟಾರ್ ಶಿವರಾಜ್ ಕುಮಾರ್, ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್ ಜೊತೆಗೆ ಅಭಿನಯಿಸುತ್ತಿದ್ದಾರೆ. ರಜನಿಕಾಂತ್ ಮುಂದಿನ ಚಿತ್ರವನ್ನು ನಿರ್ದೇಶಕ ನೆಲ್ಸನ್ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ಇನ್ನು ಈ ಚಿತ್ರಕ್ಕೆ ತಾತ್ಕಾಲಿಕವಾಗಿ ತಲೈವ 169 ಎಂದು ಹೆಸರಿಸಲಾಗಿದೆ. ಈ ವಿಚಾರವನ್ನು ಶಿವಣ್ಣ ಖಚಿತ ಪಡಿಸಿದ್ದಾರೆ.

'ವೇದ' ಚಿತ್ರದ ನಿರೀಕ್ಷೆಯಲ್ಲಿ!

'ವೇದ' ಚಿತ್ರದ ನಿರೀಕ್ಷೆಯಲ್ಲಿ!

ಸದ್ಯ ಶಿವರಾಜ್ ಕುಮಾರ್ ಅಭಿನಯದ 'ಬೈರಾಗಿ' ಸಿನಿಮಾ ರಿಲೀಸ್ ಆಗಿದೆ. ಇನ್ನು ಅವರ ಮುಂದಿನ ಸಿನಿಮಾ 'ವೇದ'. ನಿರ್ದೇಶಕ ಎ.ಹರ್ಷ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ವೇದ ಚಿತ್ರ ಬಹುತೇಕ ಮುಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಆದ ಬಳಿಕ, ಚಿತ್ರದ ಮುಂದಿನ ಅಪ್ಡೇಟ್ ಕೊಡಲಿದೆ ಚಿತ್ರತಂಡ. ವೇದ ಬಳಿಕ, ಸಚಿನ್ ಜೊತೆ ಶಿವರಾಜ್ ಕುಮಾರ್ ಸಿನಿಮಾ ಸೆಟ್ಟೇರಲಿದೆ.

More from Filmibeat

English summary
Shiva Rajkumar's Upcoming Movies List, Which Launched On His Birthday , Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X