ಅಭಿಮಾನಿಗಳಿಗೆ ಕ್ಷಮೆ ಕೇಳಿದ ಶಿವರಾಜ್ ಕುಮಾರ್
Recommended Video
ಕನ್ನಡ ರಾಜ್ಯೋತ್ಸವಕ್ಕೆ 'ಆಯುಷ್ಮಾನ್ ಭವ' ಸಿನಿಮಾ ಬಿಡುಗಡೆ ಆಗಬೇಕಾಗಿತ್ತು. ಆದರೆ, ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ವಿಷಯದ ಬಗ್ಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾ ಬರುವುದು ತಡ ಆಗಿದ್ದು, ಅಭಿಮಾನಿಗಳಿಗೆ ಶಿವಣ್ಣ ಕ್ಷಮೆ ಕೇಳಿದ್ದಾರೆ. ಸೆನ್ಸಾರ್ ಕಾರಣದಿಂದ ಸಿನಿಮಾ ಮುಂದಕ್ಕೆ ಹೋಗಿದೆಯಂತೆ. ಸಿಜಿಯಲ್ಲಿ ಹುಲಿಯ ದೃಶ್ಯಗಳನ್ನು ಮಾಡಲಾಗಿದ್ದು, ಆದರೂ, ಸಮಸ್ಯೆ ಆಗಿದೆ ಎಂದು ಶಿವಣ್ಣ ತಿಳಿಸಿದ್ದಾರೆ.
ಬಿಡುಗಡೆ ದಿನಾಂಕ ಬೇಗ ಘೋಷಣೆ ಮಾಡಬೇಕು, ಹೀಗೆ ಮಾಡುವ ಮೂಲಕ ಜನರಿಗೆ ಕುತೂಹಲ ಹುಟ್ಟಿಸಬೇಕು ಎನ್ನುವುದು ನಮ್ಮ ಯೋಜನೆ ಆಗಿತ್ತು. ಆದರೆ, ಸೆನ್ಸಾರ್ ನಿಂದ ಸಿನಿಮಾಗೆ ಸ್ವಲ್ಪ ತೊಂದರೆ ಆಗಿದೆ. ಬೇರೆ ಭಾಷೆಗಳಲ್ಲಿ ಹೀಗೆಲ್ಲ ಇಲ್ಲ ಎಂದಿದ್ದಾರೆ.

ನವೆಂಬರ್ 1 ರಂದು ಸಿನಿಮಾ ಬಿಡುಗಡೆ ಆಗದೆ ಇದ್ದರೂ, ನವೆಂಬರ್ ನಲ್ಲಿಯೇ ಖಂಡಿತ ರಿಲೀಸ್ ಆಗುತ್ತದೆಯಂತೆ. ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟಟೈನಿಂಗ್ ಆಗಿದ್ದು, ಯಾವುದೇ ಅಶ್ಲೀಲ ದೃಶ್ಯಗಳು, ರಕ್ತಪಾತದ ದೃಶ್ಯಗಳು ಇಲ್ಲವಂತೆ.
ಅಂದಹಾಗೆ, 'ಆಯುಷ್ಮಾನ್ ಭವ' ದ್ವಾರಕೀಶ್ ಬ್ಯಾನರ್ ನಲ್ಲಿ ಬರುತ್ತಿರುವ ಸಿನಿಮಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅನಂತ್ ನಾಗ್, ಸುಹಾಸಿನಿ, ಅವಿನಾಶ್, ರಂಗಾಯಣ ರಘು ಸಿನಿಮಾದಲ್ಲಿ ನಟಿಸಿದ್ದಾರೆ. ಪಿ ವಾಸು ಸಿನಿಮಾದ ನಿರ್ದೇಶನ ಮಾಡಿದ್ದು, ಗುರುಕಿರಣ್ ಸಂಗೀತದ 100ನೇ ಸಿನಿಮಾ ಇದಾಗಿದೆ.


Click it and Unblock the Notifications











