Shiva Rajkumar: ತೊಟ್ಟಿಲಲ್ಲಿ ಮಲಗಿ ಮಗುವಾದ ಶಿವಣ್ಣ

ಶಿವರಾಜ್ ಕುಮಾರ್ ವಯಸ್ಸು 60 ಕ್ಕೆ ಸನಿಹದಲ್ಲಿದೆ. ಆದರೆ ಅವರ ಮನಸ್ಸು ಮಗುವಿನಂಥಹದ್ದು. 60 ವಯಸ್ಸಾದರೂ ಯುವಕನಂತೆ ದೈಹಿಕ ಕ್ಷಮತೆ ಉಳಿಸಿಕೊಂಡಿರುವ ಶಿವಣ್ಣ, ಮಗುವಿನಂಥಹಾ ಮನಸ್ಸನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ಅವರನ್ನು ಹತ್ತಿರದಿಂದ ಬಲ್ಲ ಗೆಲೆಯರೆಲ್ಲರೂ ಹೇಳುವುದು ಅದೇ ಶಿವಣ್ಣನದ್ದು ಮಗುವಿನಂಥಹಾ ಮನಸ್ಸೆಂದು. ಅದಕ್ಕೆ ಮತ್ತೊಂದು ಸಾಕ್ಷಿಯಾಗಿ ಕೆಲವು ಚಿತ್ರಗಳು ಹರಿದಾಡುತ್ತಿವೆ. ಚಿತ್ರಗಳಲ್ಲಿ ಶಿವರಾಜ್ ಕುಮಾರ್ ಅವರು ತೊಟ್ಟಿಲಲ್ಲಿ ಮಲಗಿಕೊಂಡಿದ್ದಾರೆ.

ಹೌದು, ಶಿವರಾಜ್ ಕುಮಾರ್ ಅವರು ತೊಟ್ಟಿಲಲ್ಲಿ ಹಾಯಾಗಿ ಮಲಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಶಿವಣ್ಣ ಅಭಿಮಾನಿಗಳು ಮಾತ್ರವಲ್ಲ ಬೇರೆ ನಟರ ಅಭಿಮಾನಿಗಳು ಸಹ ಈ ಅಪರೂಪದ ಚಿತ್ರಗಳನ್ನು ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

Recommended Video

Shivarajkumar | ಮಕ್ಕಳ ಜೊತೆ ಮಗುವಾದ ಶಿವಣ್ಣ | Puneeth Rajkumar | Filmibeat Kannada

Shiva Rajkumar Sleeping In Cradle With Babies, Pic Goes Viral

ಶಿವರಾಜ್ ಕುಮಾರ್ ಅವರ ಹತ್ತಿರದ ಗೆಳೆಯರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಅಲ್ಲಿ ಮಕ್ಕಳಿಗೆಂದು ಹಾಕಲಾಗಿದ್ದ ತೊಟ್ಟಿಲಲ್ಲಿ ಮಲಗಿದ್ದಾರೆ. ತಾವು ತೊಟ್ಟಿಲಲ್ಲಿ ಮಲಗಿ ಇಬ್ಬರು ಮಕ್ಕಳನ್ನು ತಮ್ಮ ಮೇಲೆ ಮಲಗಿಸಿಕೊಂಡು ಮುದ್ದಿಸುತ್ತಿರುವ ಚಿತ್ರವಂತೂ ಬಹಳ ಮುದ್ದಾಗಿದೆ.

40 ರ ವಯಸ್ಸು ದಾಟುತ್ತಿದ್ದಂತೆ ಜೀವನದ ಮೇಲೆ ಆಸೆಯೇ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಶಿವಣ್ಣ ತಮ್ಮೊಳಗಿನ ಯುವಕನನ್ನು, ಮಗುವನ್ನು ಸದಾ ಜಾಗೃತವಾಗಿಡುತ್ತಿರುವ ರೀತಿಯೇ ಆಶ್ಚರ್ಯ ಹುಟ್ಟಿಸುತ್ತದೆ. ನಡುವ ವಯಸ್ಸಿನವರು ಸಹ ಇರಲಾರದ ರೀತಿ ಸದಾ ಸಕ್ರಿಯವಾಗಿರುತ್ತಾರೆ ಶಿವರಾಜ್ ಕುಮಾರ್.

ಅಪ್ಪು ಅಗಲಿಕೆಯ ಬಳಿಕ ಶಕ್ತಿಧಾಮದ ಕಡೆಗೆ ಹೆಚ್ಚಾಗಿ ವಾಲಿರುವ ಶಿವರಾಜ್ ಕುಮಾರ್ ಅಲ್ಲಿಯೂ ಆ ಮಕ್ಕಳೊಡನೆ ಆತ್ಮೀಯವಾಗಿ ಬೆಸೆದುಕೊಂಡಿದ್ದಾರೆ. ತಿಂಗಳಿಗೆ ಕನಿಷ್ಟ ಒಮ್ಮೆಯಾದರೂ ಶಕ್ತಿಧಾಮಕ್ಕೆ ಭೇಟಿ ನೀಡುವ ಶಿವರಾಜ್ ಕುಮಾರ್ ಅಲ್ಲಿ ಮಕ್ಕಳೊಡನೆ ಆಟವಾಡುವುದು, ಅವರನ್ನು ಡ್ರೈವ್‌ಗೆ ಕರೆದೊಯ್ಯುವುದು ಮಾಡುತ್ತಿರುತ್ತಾರೆ.

ಶಿವರಾಜ್ ಕುಮಾರ್ ಈಗ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟೊಟ್ಟಿಗೆ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಶಿವಣ್ಣ, ಜೊತೆ-ಜೊತೆಗೆ ಹಲವು ಸಿನಿಮಾ ಕಾರ್ಯಕ್ರಮಗಳು, ಇತರ ನಟರ ಕಾರ್ಯಕ್ರಮಗಳು, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಬೆಳಿಗ್ಗಿನಿಂದ ರಾತ್ರಿ ವರೆಗೂ ಬಹುತೇಕ ಬ್ಯುಸಿಯಾಗಿಯೇ ಇರುವ ಶಿವಣ್ಣ ಸದಾ ಉತ್ಸಾಹದಿಂದಲೇ ಇರುತ್ತಾರೆ.

ಶಿವರಾಜ್ ಕುಮಾರ್ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ 'ಬೈರಾಗಿ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಹರ್ಷ ನಿರ್ದೇಶನದ 'ವೇದಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಯೋಗರಾಜ್ ಭಟ್ ಹೇಳಿರುವ ಕತೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಭುದೇವಾ ಸಹ ಇರಲಿದ್ದಾರೆ. ಪ್ರೇಮಕತಾ ಸಿನಿಮಾ 'ನೀ ಸಿಗೊವರೆಗೆ' ಸಿನಿಮಾದ ಚಿತ್ರೀಕರಣ ಬಹತೇಕ ಮುಗಿಸಿದ್ದಾರೆ. ತೆಲುಗು ನಿರ್ದೇಶಕರೊಬ್ಬರು ಹೇಳಿರುವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಕಂಬಳದ ಕತೆ ಹೊಂದಿದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗೆ ಹಲವು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ.

More from Filmibeat

English summary
Shiva Rajkumar sleeping in cradle with babies, pic went viral on social media. Shiva Rajkumar few months away from 60 age and he still has heart of a child.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X