ಶಿವಣ್ಣ, ಶ್ರೀಮುರಳಿ ಮೆಚ್ಚಿದ '3 ಗಂಟೆ 30 ದಿನ 30 ಸೆಕೆಂಡ್'

By Bharath Kumar

ಅರುಣ್ ಗೌಡ ಮತ್ತು ಕಾವ್ಯ ಶೆಟ್ಟಿ ಅಭಿನಯದ '3 ಗಂಟೆ 30 ದಿನ 30 ಸೆಕೆಂಡ್' ಸಿನಿಮಾ ಇದೇ ವಾರ ಅಂದ್ರೆ, ಜನವರಿ 19 ರಂದು ಬಿಡುಗಡೆಯಾಗುತ್ತಿದೆ. ರಾಜ್ಯಾದ್ಯಂತ 80ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಇದೀಗ, '3 ಗಂಟೆ 30 ದಿನ 30 ಸೆಕೆಂಡ್' ಚಿತ್ರದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿದ್ದು, ಚಿತ್ರಕ್ಕೆ ಶುಭಹಾರೈಸಿದ್ದಾರೆ.

shiva rajkumar speak about 3 gante 30 dina 30 second

ಶಿವರಾಜ್ ಕುಮಾರ್

'3 ಗಂಟೆ 30 ದಿನ 30 ಸೆಕೆಂಡ್' ಟೈಟಲ್ ಕೇಳಿದ್ರೆ ಸಸ್ಪೆನ್ಸ್ ಸಿನಿಮಾ ಎನ್ನಬಹುದು. ಆದ್ರೆ, ಇದೊಂದು ರೊಮ್ಯಾಂಟಿಕ್ ಚಿತ್ರ. ರೊಮ್ಯಾನ್ಸ್ ಜೊತೆಗೆ ಸಸ್ಪೆನ್ಸ್ ಕೂಡ ಇದೆ. ಸ್ವಮೇಕ್ ಕನ್ನಡ ಸಿನಿಮಾ ಎನ್ನುವುದು ಖುಷಿಯ ವಿಚಾರ. ಟ್ರೈಲರ್ ನೋಡಿದೆ, ವಿಶ್ಯೂಲ್, ಮೇಕಿಂಗ್ ಚೆನ್ನಾಗಿದೆ. ಈ ಸಿನಿಮಾ ಕನ್ನಡದಲ್ಲಿ ಭರವಸೆ ಮೂಡಿಸಲಿದೆ'' - ಶಿವರಾಜ್ ಕುಮಾರ್, ನಟ

ಶ್ರೀಮುರಳಿ

'3 ಗಂಟೆ 30 ದಿನ 30 ಸೆಕೆಂಡ್' ಚಿತ್ರದ 'ಬಿಟ್ಟಿ ಬಿಲ್ಡಪ್' ಹಾಡು ನೋಡಿದೆ. ತುಂಬ ಕ್ಯೂಟ್ ಆಗಿದೆ. ಡ್ಯಾನ್ಸ್ ಚೆನ್ನಾಗಿದೆ. ಲವ್ ಇದೆ, ಡ್ರಾಮಾ ಇದೆ, ಹೀರೋ ಮತ್ತು ನಾಯಕಿ ಕಾವ್ಯ ಶೆಟ್ಟಿ ಚೆನ್ನಾಗಿ ಕಾಣ್ತಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯದಾಗಲಿ'' - ಶ್ರೀಮರಳಿ, ನಟ

shiva rajkumar speak about 3 gante 30 dina 30 second

ವಿ.ಮನೋಹರ್

'3 ಗಂಟೆ 30 ದಿನ 30 ಸೆಕೆಂಡ್' ಈ ಟೈಟಲ್ ಕೇಳಿದಾಗ ಏನೋ ಇದೆ ಅನ್ಸುತ್ತೆ. ಹೆಜ್ಜೆ ಹೆಜ್ಜೆಗೂ ಏನಾಗುತ್ತೆ ಎಂಬ ಕುತೂಹಲ ಇದೆ. ಈ ಸಿನಿಮಾದಲ್ಲಿ ತುಂಬಾ ವಿಚಾರಗಳಿದೆ. ಸಿನಿಮಾ ನೋಡಿ ಹಾರೈಸಿ'' ವಿ.ಮನೋಹರ್, ಸಂಗೀತ ನಿರ್ದೇಶಕ

ಯೋಗರಾಜ್ ಭಟ್

'3 ಗಂಟೆ 30 ದಿನ 30 ಸೆಕೆಂಡ್' ಟ್ರೈಲರ್ ನೋಡಿದಾಗ ತುಂಬ ಇಂಟ್ರೆಸ್ಟಿಂಗ್ ಆಗಿದೆ. ತುಂಬ ಶ್ರದ್ಧೆಯಿಂದ, ಬುದ್ದಿಯಿಂದ ಮಾಡಿರುವ ಸಿನಿಮಾ. ಎಲ್ಲರು ಒಳ್ಳೆಯದಾಗಲಿ'' - ಯೋಗರಾಜ್ ಭಟ್, ನಿರ್ದೇಶಕ

ಹಲವು ವರ್ಷಗಳಿಂದ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಮಧುಸೂದನ್‌ ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದು, ಚಂದ್ರಶೇಖರ್ ಆರ್. ಪದ್ಮಶಾಲಿ ನಿರ್ಮಾಣ ಮಾಡಿದ್ದಾರೆ. ನಟ ಅರುಣ್ ಗೌಡ ಮತ್ತು ಕಾವ್ಯ ಶೆಟ್ಟಿ ಚಿತ್ರದ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಡೈನಾಮಿಕ್ ಹೀರೋ ದೇವರಾಜ್, ಸುಧಾರಾಣಿ, ಸುಂದರ್, ಯಮುನಾ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಚಿತ್ರಕ್ಕಿದ್ದು, ಒಟ್ಟು 6 ಹಾಡುಗಳಿವೆ.

More from Filmibeat

English summary
kannada actor arun gowda and actress kavya shetty starrer '3 gante 30 dina 30 second' movie will releasing on january 19th all over world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X