»   » ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ 'ಕರುನಾಡ ಚಕ್ರವರ್ತಿ'

ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ 'ಕರುನಾಡ ಚಕ್ರವರ್ತಿ'

Posted By:
Subscribe to Filmibeat Kannada
ಟಗರು ಟೀಸರ್ ಲಾಂಚ್ : ಅಭಿಮಾನಿಗಳ ಬಗ್ಗೆ ಮಾತನಾಡಿದ ಶಿವಣ್ಣ | Filmibeat Kannada

ಒಬ್ಬ ನಟ ಸ್ಟಾರ್ ಆಗಬೇಕಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅದಕ್ಕೆ ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಅಂತಹ ನಟರು 'ಅಭಿಮಾನಿಗಳೇ ನಮ್ಮ ದೇವ್ರು', 'ಅಭಿಮಾನಿಗಳೇ ನಮ್ಮ ಪ್ರಾಣ' ಎನ್ನುತ್ತಿದ್ದರು.

ಈಗ ಇದೇ ಮಾತನ್ನ ಡಾ.ಶಿವರಾಜ್ ಕುಮಾರ್ ಹೇಳಿದ್ದಾರೆ. 'ಟಗರು' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಂಚುರಿ ಸ್ಟಾರ್ ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ್ದಾರೆ.

ಹಾಗಿದ್ರೆ, ಸ್ಯಾಂಡಲ್ ವುಡ್ ಅಭಿಮಾನಿಗಳ ಬಗ್ಗೆ ಶಿವಣ್ಣ ಏನಂದ್ರು? ನಟರು ಹೇಗಿರಬೇಕು ಎಂದು ಕಿವಿಮಾತು ಹೇಳಿದ್ರು ಎಂದು ಮುಂದೆ ಓದಿ.....

ಅಭಿಮಾನಿಗಳಿಗೋಸ್ಕರ ನಾವು

''ಅಭಿಮಾನಿಗಳಿಗೋಸ್ಕರ ನಾವು ಏನು ಬೇಕಾದ್ರೆ ಮಾಡುವುದಕ್ಕೆ ರೆಡಿಯಾಗಿದ್ದೀವಿ. ಅವರ ಪ್ರೋತ್ಸಾಹವೇ ನಾವು ಇಷ್ಟರ ಮಟ್ಟಿಗೆ ಬೆಳೆಯುವುದಕ್ಕೆ ಕಾರಣ'' - ಶಿವರಾಜ್ ಕುಮಾರ್, ನಟ

ಹುಷಾರು... ಈ 'ಟಗರು'ಗೆ ಮೈ ತುಂಬ ಸಿಕ್ಕಾಪಟ್ಟೆ ಪೋಗರು

ಅಭಿಮಾನಿಗಳನ್ನ ಮರೆಯಬಾರದು

''ನಾವು ಮಾತ್ರವಲ್ಲ ಇಂಡಸ್ಟ್ರಿಯಲ್ಲಿರುವ ಎಲ್ಲರೂ ಅಷ್ಟೇ ಅಭಿಮಾನಿಗಳನ್ನ ಮರೆತರೇ ಅವರು ಗೋವಿಂದ. ಯಾವತ್ತು ಅವರನ್ನ ಮರೆಯಬಾರದು. ಸ್ನೇಹಿತರ ರೀತಿ ಇರಬೇಕು'' - ಶಿವರಾಜ್ ಕುಮಾರ್, ನಟ

'ಟಗರು' ಕಾರ್ಯಕ್ರಮಕ್ಕೆ ಬಂದಿದ್ದ ಅಲ್ಲು ಅರ್ಜುನ್ ಸಹೋದರನ ಆಸೆ ಏನು?

ಅಭಿಮಾನಿಗಳು ಪ್ರೀತಿಯಿಂದ ಇರಬೇಕು

''ಅಭಿಮಾನಿ ಕೂಡ ಅಷ್ಟೇ ಓವರ್ ಪವರ್ ಮಾಡೋಕೆ ಹೋಗಬಾರದು. ಪ್ರೀತಿಯಿಂದ ಇರಬೇಕು. ಪ್ರಮಾಣಿಕರಾಗಿರಬೇಕು. ತುಂಬ ಸ್ಟ್ರೈಟ್ ಫಾವಾರ್ಡ್. ಮನಸ್ಸಿನಲ್ಲಿ ಏನಿದ್ರು ಹೇಳ್ತಿನಿ. ಯಾವುದು ಮುಚ್ಚಿಡಲ್ಲ'' - ಶಿವರಾಜ್ ಕುಮಾರ್, ನಟ

'ಟಗರು' ಚಿತ್ರದ ಬಗ್ಗೆ ಶಿವಣ್ಣ ಹೇಳಿದ್ದೇನು?

''ಟಗರು' ಸಿನಿಮಾ ತುಂಬಾ ವಿಭಿನ್ನವಾಗಿದೆ ಎಂಬ ಕುತೂಹಲ ನನಗೂ ಇದೆ. ನಾನು ಕೂಡ ಈ ಸಿನಿಮಾಗಾಗಿ ಕಾಯ್ತಿದ್ದೀನಿ. ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಜನವರಿಗೆ ಸಿನಿಮಾ ತೆರೆಗೆ ಬರಬಹುದು ಎಂಬ ನಿರೀಕ್ಷೆ ಇದೆ. ನಿರ್ದೇಶಕರು ಹೇಳಬೇಕು'' ಎಂದು ಹ್ಯಾಟ್ರಿಕ್ ಹೀರೋ ಮಾತನಾಡಿದರು.

ಧನಂಜಯ್ 'ಕಿಲ್ಲಿಂಗ್' ಲುಕ್ ಗೆ ಅಭಿಮಾನಿಗಳಿಂದ 'ಡೆಡ್ಲಿ' ಕಾಮೆಂಟ್ಸ್.!

English summary
Hatiric Hero, Kannada Actor Shiva rajKumar Speak about his Fans in Tagru Teaser Release Programme.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada