»   » ನಮ್ ಇಂಡಸ್ಟ್ರಿಯಲ್ಲಿಯೂ 'ಕಾಸ್ಟಿಂಗ್ ಕೌಚ್' ಇದ್ಯಾ? ಇಲ್ಲಿದೆ ಶಿವಣ್ಣನ ನೇರ ಉತ್ತರ

ನಮ್ ಇಂಡಸ್ಟ್ರಿಯಲ್ಲಿಯೂ 'ಕಾಸ್ಟಿಂಗ್ ಕೌಚ್' ಇದ್ಯಾ? ಇಲ್ಲಿದೆ ಶಿವಣ್ಣನ ನೇರ ಉತ್ತರ

Posted By:
Subscribe to Filmibeat Kannada
ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದ ಹ್ಯಾಟ್ರಿಕ್ ಹೀರೋ | Filmibeat Kannada

'ಕಾಸ್ಟಿಂಗ್ ಕೌಚ್' ಎಂಬ ಪದ ಈಗ ಪದೇ ಪದೇ ಕಿವಿಗೆ ಬಂದು ಬೀಳುತ್ತಿದೆ. ತೆಲುಗು ಚಿತ್ರರಂಗದಲ್ಲಂತು ಒಂದು ತಿಂಗಳಿನಿಂದ ಅದೇ ಸುದ್ದಿ. ನಟಿ ಶ್ರೀ ರೆಡ್ಡಿ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ದೊಡ್ಡ ದೊಡ್ಡ ನಟ ಹೆಸರನ್ನು ಕೇಳಿ ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಇತ್ತ ಆ ಬಿಸಿ ಕನ್ನಡದಲ್ಲಿಯೂ ತಟ್ಟಿದೆ.

ಟಾಲಿವುಡ್ ಕರ್ಮಕಾಂಡ ನೋಡಿದ ಮೇಲೆ 'ಕಾಸ್ಟಿಂಗ್ ಕೌಚ್ ಕನ್ನಡ ಚಿತ್ರರಂಗದಲ್ಲಿಯೂ ಇದೆಯಾ?' ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತಿದೆ. ಈ ಹಿಂದೆಯೇ ಕನ್ನಡದ ನಟಿಯರಾದ ಶೃತಿ ಹರಿಹರನ್, ಹರಿಪ್ರಿಯಾ, ರಾಗಿಣಿ ದ್ವಿವೇದಿ, ಹರ್ಷಿಕಾ ಪುಣಚ್ಛ ಸೇರಿದಂತೆ ಕೆಲವು ನಟಿಯರು ಈ ಬಗ್ಗೆ ಮಾತನಾಡಿದ್ದರು. ಇತ್ತೀಚಿಗಷ್ಟೆ ಕೃಷಿ ತಾಪಂಡ ಮತ್ತು ಯುವ ನಟಿ ಖುಷಿ ಸಹ ತಮಗೆ ಆದ ಕೆಟ್ಟ ಅನುಭವನ್ನು ಹೇಳಿಕೊಂಡಿದ್ದರು. ಇದೆಲ್ಲ ಕೇಳಿದ ಮೇಲೆ ಕನ್ನಡ ಚಿತ್ರರಂಗದ ಕೂಡ 'ಕಾಸ್ಟಿಂಗ್ ಕೌಚ್' ನಿಂದ ಹೊರತಾಗಿಲ್ಲ ಅನಿಸಿತ್ತು.

ಅಡ್ಜೆಸ್ಟ್ ಮಾಡಿಕೋ ಎಂದ ನಿರ್ಮಾಪಕನ ಮರ್ಯಾದೆ ಬೀದಿಗೆ ತಂದ ಕನ್ನಡದ ನಟಿ

ಅಂದಹಾಗೆ, ಸದ್ಯ ಹಾಟ್ ಟಾಪಿಕ್ ಆಗಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಇದೀಗ ನಟ ಶಿವರಾಜ್ ಕುಮಾರ್ ಸಹ ಮಾತನಾಡಿದ್ದಾರೆ. 'ನಮ್ಮ ಇಂಡಸ್ಟ್ರಿಯಲ್ಲಿಯೂ ಕಾಸ್ಟಿಂಗ್ ಕೌಚ್ ಇದೆಯಾ?' ಎಂದರೆ ಶಿವಣ್ಣ ಹೀಗೆ ಉತ್ತರ ನೀಡಿದರು.

ಇತ್ತೀಚಿಗಿನ ಸಂದರ್ಶನ

ಇತ್ತೀಚಿಗೆ 'ಟಗರು' ಸಿನಿಮಾದ 50 ದಿನದ ವಿಶೇಷವಾಗಿ ಸುದ್ದಿ ವಾಹಿನಿಯೊಂದರಲ್ಲಿ ಸಂದರ್ಶನ ಮಾಡಲಾಗಿತ್ತು. ಈ ವೇಳೆ ಕಾರ್ಯಕ್ರಮದ ನಿರೂಪಕಿ ''ಶಿವಣ್ಣ ಇತ್ತೀಚಿಗೆ ತುಂಬ ಸುದ್ದಿ ಮಾಡುತ್ತಿರುವ ಸಾಮಾಜಿಕ ವಿಷಯ ಅಂದರೆ ಕಾಸ್ಟಿಂಗ್ ಕೌಚ್, ಬೇರೆ ಇಂಡಸ್ಟ್ರಿಯಲ್ಲಿ ಮತ್ತೆ ನಮ್ಮ ಇಂಡಸ್ಟ್ರಿಯಲ್ಲಿ ಸಹ ಈ ಸುದ್ದಿ ಇದೆ.'' ಎಂದು ಹೇಳಿದರು. ಆಗ ಶಿವಣ್ಣ ನೇರವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

ಇಲ್ಲಿಯೂ ಕೆಲವರು ಮಾತನಾಡಿದ್ದು ನಿಜ

''ನನ್ನ ಪ್ರಕಾರ ನಮ್ಮ ಇಂಡಸ್ಟ್ರಿಯಲ್ಲಿ ಇದುವರೆಗೆ ಆ ರೀತಿಯ ಹೆಚ್ಚು ಘಟನೆ ಕೇಳಿ ಬಂದಿಲ್ಲ. ಇಲ್ಲಿ ಕೆಲವರು ಆ ಬಗ್ಗೆ ಮಾತನಾಡಿದ್ದು ನಿಜ. ಆದರೆ ಅವರು ಯಾವ ದೃಷ್ಟಿಯಿಂದ ಹೇಳಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಪ್ರಕಾರ ಇಲ್ಲಿ ಆ ರೀತಿ ಆಗಿಲ್ಲ. ಇಲ್ಲಿ ದರ್ಶನ್, ಸುದೀಪ್, ಅಪ್ಪು, ಯಶ್, ಗಣೇಶ್, ವಿಜಿ ಯಾರ ಮೇಲೆಯೂ ಆ ರೀತಿಯ ಸುದ್ದಿ ಬಂದಿಲ್ಲ.'' ಎಂದು ಸ್ಪಷ್ಟನೆ ಶಿವಣ್ಣ ನೀಡಿದರು.

ಲೈಂಗಿಕ ಕಿರುಕುಳದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಕೃಷಿ ತಾಪಂಡ

ನ್ಯೂಸ್ ಕೇಳಿ ಶಾಕ್ ಆಯ್ತು

''ನಮ್ಮ ಜೊತೆಗೆ ನಟಿಸಿದ್ದ ಯಾವುದೇ ನಟಿಯರು ಯಾರಿಗೂ ಆ ರೀತಿ ಆಗಿಲ್ಲ. ಬೇರೆ ಇಂಡಸ್ಟ್ರಿ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಇತ್ತೀಚಿಗೆ ನಾನು ನ್ಯೂಸ್ ನೋಡಿದಾಗ ಗೊತ್ತಾಯ್ತು. ತೆಲುಗಿನಲ್ಲಿ ಯಾರಿಗೋ ಆ ರೀತಿ ಆಗಿದೆ ಅಂತ ಸುದ್ದಿ ಬರುತಿತ್ತು. ಆ ಸುದ್ದಿ ನೋಡಿದಾಗ ನಮಗೆ ಸಹ ಶಾಕ್ ಆಯ್ತು.'' - ಶಿವರಾಜ್ ಕುಮಾರ್, ನಟ

ಇಂಡಸ್ಟ್ರಿಯನ್ನು ಕುಟುಂಬ ಅಂತ ತಿಳಿದುಕೊಂಡಿದ್ದೇವೆ

''ನಾವು ಇಂಡಸ್ಟ್ರಿಯನ್ನು ಒಂದು ಕುಟುಂಬ ಅಂತ ತಿಳಿದುಕೊಂಡಿದ್ದೇವೆ. ಸೋ, ಹಾಗೆ ಮಾಡಿದರೆ ನಾವು ಒಬ್ಬರಿಗೆ ಮೋಸ ಮಾಡಿದಂತೆ ಆಗುತ್ತೆ. ಯಾವತ್ತು ನಾವು advantage ತೆಗೆದುಕೊಳ್ಳಬಾರದು. ಯಾರೇ ಆಗಲಿ ಈ ರೀತಿ ಮಾಡುವುದು ಸರಿ ಅಲ್ಲ. ಎಲ್ಲರಿಗೆ ತಾಯಿ, ತಂಗಿ, ಹೆಂಡತಿ, ಮಕ್ಕಳು, ಒಳ್ಳೆಯ ಗೆಳೆಯರು ಇದ್ದಾರೆ. ನಾವು ದ್ರೋಹ ಮಾಡಬಾರದು. ನನಗೆ ಅನಿಸುತ್ತೆ ಆ ರೀತಿ ಆಗಬಾರದು.'' - ಶಿವರಾಜ್ ಕುಮಾರ್, ನಟ

ಇಂದು ಬೆಳಕಿಗೆ ಬಂದ ಘಟನೆ

ಕಾಸ್ಟಿಂಗ್ ಕೌಚ್ ಬಗ್ಗೆ ಇಂದು ಕೂಡ ಒಂದು ಘಟನೆ ಬೆಳಕಿಗೆ ಬಂದಿದೆ. ಕೃತಿ ತಾಪಂಡ ಬಳಿಕ ನಟಿ ಖುಷಿ ಕಾಸ್ಟಿಂಗ್ ಕೌಚ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖುಷಿ ತಮಗೆ ಆದ ಕಿರುಕುಳ ಬಗ್ಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಖುಷಿ ಶೆಟ್ಟಿ ಅವರಿಗೆ ತಮಿಳುನಾಡಿನ ಸಿನಿಮಾರಂಗದ ವ್ಯಕ್ತಿ ಕರೆ ಮಾಡಿ ತಮಿಳು ಚಿತ್ರದಲ್ಲಿ ಅಭಿನಯ ಮಾಡುತ್ತೀರ ಎಂದು ಕೇಳಿದ್ದಾರೆ. ಹೌದು ಅಭಿನಯಿಸುತ್ತೇನೆ ಎಂದಾಗ ನಿಮ್ಮ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಫೋಟೋ ಗಳನ್ನ ಕಳುಹಿಸಿ ಎಂದಿದ್ದಾರೆ. ಫೋಟೋ ಡಿಟೇಲ್ಸ್ ತೆಗೆದುಕೊಂಡ ನಂತರ ನಿರ್ಮಾಪಕರ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಿ ಸಂಭಾವನೆ ಇನ್ನೂ ಹೆಚ್ಚಾಗುತ್ತೆ ಎಂದಿದ್ದಾರೆ. ಇದರಿಂದ ಕೋಪಗೊಂಡ ಖುಷಿ ಶೆಟ್ಟಿ ಶಶಿ ಎನ್ನುವ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ.

English summary
Kannada actor, Hatrick Hero Shiva Rajkumar spoke about casting couch in kannada movie industry in his recent tv interview.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X