twitter
    For Quick Alerts
    ALLOW NOTIFICATIONS  
    For Daily Alerts

    ಮೂರು ದಿನ 'ಗೃಹಬಂಧನ'ದ ಬಗ್ಗೆ 'ಸಿಂಹದ ಮರಿ' ಹೇಳಿದ್ದೇನು?

    |

    56ನೇ ವಯಸ್ಸಿನಲ್ಲೂ ಶಿವಣ್ಣ ಎನರ್ಜಿ ನೋಡಿ ಇಂದಿನ ಯುವ ಜನಾಂಗ ವಾಹ್ ಅಂತಾರೆ. ಸದಾ ಆಕ್ಟೀವ್ ಆಗಿರುವ ಹ್ಯಾಟ್ರಿಕ್ ಹೀರೋ, ಪ್ರತಿದಿನದ ದಿನಚರಿ ಜೊತೆಗೆ ಸತತ ಶೂಟಿಂಗ್, ಕುಟುಂಬದೊಂದಿಗೆ ಸಮಯ ಕಳೆಯುವುದು, ಹೊಸಬರ ಸಿನಿಮಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹೀಗೆ ಸಿಕ್ಕಾಪಟ್ಟೆ ಬ್ಯುಸಿ ಇರ್ತಿದ್ರು.

    ಆದ್ರೆ, ಗುರುವಾರ ಬೆಳ್ಳಂಬೆಳಗ್ಗೆ ಆದ ಐಟಿ ರೇಡ್, ಸೆಂಚುರಿ ಸ್ಟಾರ್ ಗೆ ಶಾಕ್ ನೀಡಿತ್ತು. ಸತತ ಎರಡೂವರೆ ದಿನಕ್ಕೂ ಅಧಿಕ ಕಾಲ ಗೃಹಬಂಧನಲ್ಲಿರುವಂತೆ ಮಾಡಿತು.

    ರೆಗ್ಯುಲರ್ ಆಗಿ ಇರಲು ಸಾಧ್ಯವಾಗದೇ ಸ್ವಲ್ಪ ಟೆನ್ಷನ್ ಮಾಡಿಕೊಂಡಿದ್ದಂತೂ ಸುಳ್ಳಲ್ಲ. ಈ ಮೂರು ದಿನ ಮನೆವಾಸದ ಬಗ್ಗೆ ಸ್ವತಃ ಶಿವಣ್ಣ ಮಾತನಾಡಿದ್ದಾರೆ. ಹೇಗಿತ್ತು ಆ ಅನುಭವ ಎಂದು ಹೇಳಿಕೊಂಡಿದ್ದಾರೆ.? ಮುಂದೆ ಓದಿ....

    ಗುರುವಾರ ವಿಶ್ರಾಂತಿಯಲ್ಲಿದ್ದ ಶಿವಣ್ಣ

    ಗುರುವಾರ ವಿಶ್ರಾಂತಿಯಲ್ಲಿದ್ದ ಶಿವಣ್ಣ

    ಗುರುವಾರ ಬೆಳಿಗ್ಗೆ ಶಿವರಾಜ್ ಕುಮಾರ್ ವಾಕಿಂಗ್ ಹೋಗಬೇಕಿತ್ತು. ಆದ್ರೆ, ಆ ದಿನ ಅದ್ಯಾಕೋ ಶಿವಣ್ಣ ಹೋಗಿಲ್ಲ. ಸ್ವಲ್ಪ ವಿಶ್ರಾಂತಿ ಪಡೆಯೋಣ, ಲೇಟ್ ಆಗಿ ಎದ್ದೇಳೋಣ ಅಂತ ಸುಮ್ಮನಾದರಂತೆ. ಬಟ್, ಅದೇ ವೇಳೆಯಲ್ಲಿ ಐಟಿ ಅಧಿಕಾರಿಗಳು ನಾಗವಾರದಲ್ಲಿದ್ದ ಶಿವಣ್ಣ ಮನೆ ಪ್ರವೇಶ ಮಾಡಿದರಂತೆ.

    ವಾಕಿಂಗ್ ಮಾಡಲಿಲ್ಲ

    ವಾಕಿಂಗ್ ಮಾಡಲಿಲ್ಲ

    ಗುರುವಾರ ವಾಕಿಂಗ್ ಮಾಡಲಿಲ್ಲ, ಶುಕ್ರವಾರವೂ ವಾಕಿಂಗ್ ಮಾಡಲಿಲ್ಲ. ಹಾಗಾಗಿ, ಮನೆಯ ಬಾಲ್ಕನಿಯಲ್ಲೇ ಹ್ಯಾಟ್ರಿಕ್ ಹೀರೋ ವಾಕಿಂಗ್ ಮಾಡಬೇಕಾಯಿತು. ಪತ್ನಿ ಗೀತಾ ಮತ್ತು ಮಗಳ ಜೊತೆ ಹೆಜ್ಜೆಯಿಟ್ಟರು. ಇದು ಸಾಮಾನ್ಯವಾಗಿ ಸ್ವಲ್ಪ ಕಿರಿಕಿರಿಯಾಗಿತ್ತಂತೆ..

    ರೇಡ್ ವೇಳೆ ಬೇಜಾರಾಗಿತ್ತು

    ರೇಡ್ ವೇಳೆ ಬೇಜಾರಾಗಿತ್ತು

    ಎರಡ್ಮೂರು ದಿನ ಈ ರೀತಿ ತನಿಖೆ, ಪರಿಶೀಲನೆ ಸಾಮಾನ್ಯವಾಗಿ ಬೇಜಾರು ತರಿಸುತ್ತೆ. ಶಿವಣ್ಣನಿಗೂ ಬೇಜಾರು ಆಯ್ತಂತೆ, ಕೆಲವು ಕಡೆ ಕಿರಿಕಿರಿ ಕೂಡ ಉಂಟಾಯಿತಂತೆ. ಬಟ್, ಅಂತಿಮವಾಗಿ ಅವರ ಕೆಲಸ ಮಾಡುತ್ತಿದ್ದರು. ಅದಕ್ಕೆ ನಾವು ಸಹಕರಿಸುತ್ತಿದ್ದೀವಿ ಅಷ್ಟೇ. ಅದನ್ನ ಬಿಟ್ಟರೇ ಯಾವ ತೊಂದರೆಯೂ ಆಗಿಲ್ಲ ಎಂದು ಸೆಂಚುರಿ ಸ್ಟಾರ್ ಹೇಳಿಕೊಂಡರು.

    3 ದಿನಕ್ಕೆ ಕಾರ್ಯಕ್ರಮ ಏನಿತ್ತು?

    3 ದಿನಕ್ಕೆ ಕಾರ್ಯಕ್ರಮ ಏನಿತ್ತು?

    ಮೂರು ದಿನ ಚಿತ್ರೀಕರಣ ನಿಲ್ಲಿಸಿದ್ರಾ ಎಂಬ ಕುತೂಹಲಕ್ಕೆ ಶಿವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ರು. ಆ ರೀತಿ ಯಾವ ಕಾರ್ಯಕ್ರಮವೂ ನಿಗದಿಯಾಗಿರಲಿಲ್ಲ. ''ಈ ಎರಡ್ಮೂರು ದಿನದಲ್ಲಿ ಸಾಮಾನ್ಯವಾಗಿ ಗೀತಾ ಜೊತೆ ಡ್ರೈವ್ ಹೋಗ್ತಿದ್ದೆ, ಇಲ್ಲವಾದಲ್ಲಿ ಯಾವುದಾದರೂ ಸಿನಿಮಾ ನೋಡುತ್ತಿದ್ದೆ'' ಎಂದು ಶಿವಣ್ಣ ತಿಳಿಸಿದರು.

    English summary
    After 46 hours, IT Raid at Kannada Actor Shiva Rajkumar house ends. Shivanna react on IT raid.
    Saturday, January 5, 2019, 15:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X