twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣ ಇಂತಹ ಪಾತ್ರ ಮಾಡಬೇಕು ಎಂಬುದು ಪಾರ್ವತಮ್ಮ ಅವರ ಕನಸಾಗಿತ್ತು

    By Naveen
    |

    ನಟ ಶಿವರಾಜ್ ಕುಮಾರ್ 115ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನೇಕ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಶಿವಣ್ಣ ಕೆಲ ವಿಶೇಷವಾದ ಪಾತ್ರಗಳನ್ನು ಮಾಡಬೇಕು ಎಂಬ ದೊಡ್ಡ ಆಸೆ ಇತ್ತು.

    ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ತಾಯಿಯನ್ನು ನೆನೆದ ಶಿವಣ್ಣಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ತಾಯಿಯನ್ನು ನೆನೆದ ಶಿವಣ್ಣ

    ಈ ವಿಷಯವನ್ನು ಸ್ವತ ಶಿವಣ್ಣ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 'ತಾಯಿ ಪಾರ್ವತಮ್ಮ ಅವರಿಗೆ ನಾನು ಕೆಲ ವಿಭಿನ್ನ ಸಿನಿಮಾಗಳನ್ನು ಮಾಡಬೇಕು ಎಂಬ ಆಸೆ ಇತ್ತು. ಅಂತಹ ಸಿನಿಮಾ ಮುಂದೆ ಮಾಡುತ್ತೇನೆ.' ಅಂತ ಶಿವಣ್ಣ ಹೇಳಿದ್ದಾರೆ. ಮುಂದೆ ಓದಿ..

    'ಮನಸು ಮಲ್ಲಿಗೆ' ಕಾದಂಬರಿ

    'ಮನಸು ಮಲ್ಲಿಗೆ' ಕಾದಂಬರಿ

    ಶಿವಣ್ಣ ಈಗಾಗಲೇ ಅನೇಕ ಕಾದಂಬರಿ ಆಧಾರಿತ ಸಿನಿಮಾ ಮಾಡಿದ್ದಾರೆ. ಅದೇ ರೀತಿ 'ಮನಸು ಮಲ್ಲಿಗೆ' ಎನ್ನುವ ಒಂದು ಕಾದಂಬರಿಯ ಮೇಲೆ ಸಿನಿಮಾ ಮಾಡಬೇಕು ಎಂಬುದು ಪಾರ್ವತಮ್ಮ ಅವರ ಆಸೆಯಾಗಿತ್ತು.

    'ಭಕ್ತ ಅಂಬರೀಶ'

    'ಭಕ್ತ ಅಂಬರೀಶ'

    ಶಿವಣ್ಣ ಅವರಿಂದ 'ಭಕ್ತ ಅಂಬರೀಶ' ಪಾತ್ರವನ್ನು ಮಾಡಿಸಬೇಕು ಎಂಬುದು ಪಾರ್ವತಮ್ಮ ಅವರ ದೊಡ್ಡ ಕನಸು ಆಗಿತಂತೆ. ಆದರೆ ಈ ಹಿಂದೆಯೇ ಈ ಚಿತ್ರದ ಬಗ್ಗೆ ಸುದ್ದಿ ಹರಿದಾಡಿದರೂ, ಸಿನಿಮಾ ಮಾತ್ರ ಇನ್ನೂ ಸೆಟ್ಟೇರಿಲ್ಲ.

    ಅಮ್ಮನಿಂದ ಸೌಟಿನಲ್ಲಿ ಹೊಡೆಸಿಕೊಂಡಿದ್ದರಂತೆ 'ಪಾರ್ವತಿ' ಪುತ್ರ 'ಶಿವ'ಣ್ಣ.!ಅಮ್ಮನಿಂದ ಸೌಟಿನಲ್ಲಿ ಹೊಡೆಸಿಕೊಂಡಿದ್ದರಂತೆ 'ಪಾರ್ವತಿ' ಪುತ್ರ 'ಶಿವ'ಣ್ಣ.!

    ಆದಷ್ಟು ಬೇಗ ಸಿನಿಮಾ ಮಾಡ್ತಾರೆ

    ಆದಷ್ಟು ಬೇಗ ಸಿನಿಮಾ ಮಾಡ್ತಾರೆ

    ತಾಯಿ ಪಾರ್ವತಮ್ಮ ಅವರ ಆಸೆಯನ್ನು ಶಿವಣ್ಣ ನೆರವೇರಿಸಲಿದ್ದಾರಂತೆ. 'ಭಕ್ತ ಅಂಬರೀಶ' ಸಿನಿಮಾವನ್ನು ಆದಷ್ಟು ಬೇಗ ಶಿವಣ್ಣ ಮಾಡಲಿದ್ದಾರಂತೆ.

    ಸಾಲು ಸಾಲು ಸಿನಿಮಾ

    ಸಾಲು ಸಾಲು ಸಿನಿಮಾ

    ಶಿವಣ್ಣ ಅವರ ಸಿನಿಮಾಗಳ ಲಿಸ್ಟ್ ತುಂಬನೇ ದೊಡ್ಡದಿದೆ. ಸದ್ಯ ಅವರ 'ಮಾಸ್ ಲೀಡರ್' ಮತ್ತು 'ಟಗರು' ಸಿನಿಮಾಗಳು ರಿಲೀಸ್ ಹಂತದಲ್ಲಿದೆ.

    ಅಬ್ಬಾ! ಶಿವಣ್ಣನ ಮುಂದಿನ ಸಿನಿಮಾಗಳ ಲಿಸ್ಟ್ ನೋಡಿದ್ರೆ ಸುಸ್ತಾಗುತ್ತೆ.!ಅಬ್ಬಾ! ಶಿವಣ್ಣನ ಮುಂದಿನ ಸಿನಿಮಾಗಳ ಲಿಸ್ಟ್ ನೋಡಿದ್ರೆ ಸುಸ್ತಾಗುತ್ತೆ.!

    English summary
    Kannada Actor Shiva Rajkumar Spoke About Parvathamma Rajkumar in his recent interview.
    Sunday, July 23, 2017, 14:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X