'ದಿ ವಿಲನ್' ಚಿತ್ರದ 'ನಂಬರ್ 1' ವಿವಾದದ ಬಗ್ಗೆ ಶಿವಣ್ಣ ಕೊಟ್ಟ ಹೇಳಿಕೆ

By Naveen

Recommended Video

ಇಲ್ಲಿ ಬಾಸ್ ಯಾರು ಅಂತ ಶಿವಣ್ಣ ಹೇಳ್ತಾರೆ ನೋಡಿ..! | Filmibeat Kannada

ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ವಿವಾದ ಶುರುವಾಗಿದೆ. 'ಹವಾ', 'ಬಾಸ್', 'ಪೈಲ್ವಾನ್' ನಂತರ 'ದಿ ವಿಲನ್' ಸಿನಿಮಾದ ಒಂದು ಹಾಡಿನ ಸಾಹಿತ್ಯ ಸದ್ದು ಮಾಡುತ್ತಿದೆ.

ನಿರ್ದೇಶಕ ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ದಿ ವಿಲನ್' ಹಾಡಿನ ಬಗ್ಗೆ ಬರೆದುಕೊಂಡಿದ್ದರು. ಈ ಹಾಡಿನ ಸಾಹಿತ್ಯ 'ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಎಂದು ಇತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ನಟರ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.

ಆದರೆ ಈಗ ಈ ವಿವಾದದ ಬಗ್ಗೆ ಸ್ವತಃ ನಟ ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ. ಮುಂದೆ ಓದಿ...

ವಿವಾದದ ಬಗ್ಗೆ ಗೊತ್ತಿಲ್ಲ

ವಿವಾದದ ಬಗ್ಗೆ ಗೊತ್ತಿಲ್ಲ

ಇಂದು ಶಿವರಾಜ್ ಕುಮಾರ್ ನಟನೆಯ 'ದ್ರೋಣ' ಸಿನಿಮಾದ ಮುಹೂರ್ತ ನಡೆಯಿತು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಿವಣ್ಣ ''ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಹಾಡಿನ ವಿವಾದ ನನಗೆ ಗೊತ್ತಿಲ್ಲ.'' ಎಂದು ಹೇಳಿದ್ದಾರೆ.

ಎಲ್ಲಾ ನಟರೂ 'ಬಾಸ್'

ಎಲ್ಲಾ ನಟರೂ 'ಬಾಸ್'

''ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಹಾಡಿನ ವಿವಾದ ನನಗೆ ತಿಳಿದಿಲ್ಲ., ಆದರೆ ಕನ್ನಡ ಚಿತ್ರರಂಗದಲ್ಲಿ ಇರುವ ನಾವೆಲ್ಲರೂ ಒಂದೇ. ನನ್ನ ಪ್ರಕಾರ ಚಿತ್ರರಂಗದಲ್ಲಿ ಎಲ್ಲಾ ನಟರೂ 'ಬಾಸ್'' ಎಂದು ಹೇಳಿ ವಿವಾದದ ಬಗ್ಗೆ ವಿವರವನ್ನು ಶಿವಣ್ಣ ನೀಡಿದ್ದಾರೆ.

'ಬಾಸ್' ಎಂದು ಯಾರಿಗೆ ಕರೆದರು ಖುಷಿನೇ

'ಬಾಸ್' ಎಂದು ಯಾರಿಗೆ ಕರೆದರು ಖುಷಿನೇ

''ದರ್ಶನ್ ಗೆ ಬಾಸ್ ಅಂತ ಕರೆದರು ಖುಷಿನೇ. ಯಶ್ ಗೆ ಬಾಸ್ ಅಂತ ಕರೆದರು ಖುಷಿನೇ. ಎಲ್ಲರೂ ಕೂಡ ಅವರವರ ಮನೆಗೆ ಅವರವರೇ ಬಾಸ್. ಇಂತಹ ವಿಚಾರಗಳ ಬಗ್ಗೆ ನಾವು ಯಾರೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರ ಸಿನಿಮಾನ ಎಲ್ಲರೂ ನೋಡಬೇಕು. ಕನ್ನಡ ಚಿತ್ರರಂಗ ಬೆಳೆಯಬೇಕು ಅನ್ನೋದಷ್ಟೇ ನಮ್ಮ ಆಸೆ'' ಎಂದು ಉತ್ತರ ನೀಡಿದ್ದಾರೆ ಸೆಂಚುರಿ ಸ್ಟಾರ್.

ಏನಿದು ವಿವಾದ?

ಏನಿದು ವಿವಾದ?

ನಿರ್ದೇಶಕ ಪ್ರೇಮ್ ನಿನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ದಿ ವಿಲನ್' ಸಿನಿಮಾದ ಹಾಡಿನ ಮೇಕಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆ ಹಾಡಿನ ಸಾಹಿತ್ಯದ ಮೊದಲ ಸಾಲನ್ನು ಬರೆದುಕೊಂಡಿದ್ದಾರೆ. 'ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಎಂಬುದು ಈ ಮಾಸ್ ಹಾಡಿನ ಸಾಹಿತ್ಯ ಆಗಿದೆ. ಸದ್ಯ ಕನ್ನಡದಲ್ಲಿ 'ಬಾಸ್' ಯಾರು ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿತ್ತು. ಅದೇ ಟೈಂ ನಲ್ಲಿ ಈ ಸಾಲು ಬಂದಿದೆ. ಇದು ಮತ್ತೊಂದು ವಿವಾದ ಆಗುವಂತೆ ಮಾಡಿದೆ. ಈ ಸಾಲು ಉಳಿದ ನಟರ ಅಭಿಮಾನಿಗಳಿಗೆ ಬೇಸರ ತಂದಿದೆ.

More from Filmibeat

English summary
Kannada actor Prem's spoke about 'The Villain' movie lyrics controversy. 'The Villain' is a kannada movie starring actor Sudeep and Shivarajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X