'ದಿ ವಿಲನ್' ನಾಯಕ ಶಿವಣ್ಣನ ಬಾಯಲ್ಲಿ ಬಂದ 'ವಿಲನ್' ಇವರು
Recommended Video

ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಇಬ್ಬರು 'ದಿ ವಿಲನ್' ಸಿನಿಮಾದ ನಾಯಕರು. ಸೋ, ಈ ಇಬ್ಬರಲ್ಲಿ ವಿಲನ್ ಯಾರು ಎಂಬುದು ಅಭಿಮಾನಿಗಳ ದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಸಿನಿಮಾ ನೋಡಿದಾಗಲೇ ಉತ್ತರ ಸಿಗಲಿದೆ. ಆದರೆ, ಈಗ ಶಿವಣ್ಣನ ಮೆಚ್ಚಿನ ವಿಲನ್ ಯಾರು ಎಂಬುದು ತಿಳಿದಿದೆ.
ಬೆಂಗಳೂರಿನಲ್ಲಿ ನಡೆದ 'ದಿ ವಿಲನ್' ಆಡಿಯೋ ಲಾಂಚ್ ನಲ್ಲಿ ನಿರೂಪಕಿ ಅನುಪಮ ಶಿವಣ್ಣನಿಗೆ ಒಂದು ಪ್ರಶ್ನೆ ಕೇಳಿದರು. ನೀವು ಕಂಡ ಬೆಸ್ಟ್ ವಿಲನ್ ಯಾರು? ಎಂಬ ಪ್ರಶ್ನೆಯನ್ನು ಶಿವರಾಜ್ ಕುಮಾರ್ ಮುಂದೆ ಇಟ್ಟರು.
ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ''ವಜ್ರಮುನಿ ಅವರು ನನ್ನ ನೆಚ್ಚಿನ ವಿಲನ್. ಅವರ ನೋಟದಲ್ಲಿಯೇ ಒಂದು ರೀತಿಯ ಪವರ್ ಇದೆ. ಅವರು ಕಣ್ಣು.. ಉಬ್ಬು ಆಡಿಸುವುದು ತುಂಬ ಟೆರಿಫಿಕ್ ಆಗಿ ಇರುತ್ತದೆ.'' ಎಂದರು.

ಅಂದಹಾಗೆ, ಬೆಂಗಳೂರಿನಲ್ಲಿ ಬಿಡುಗಡೆಯಾದ 'ದಿ ವಿಲನ್' ಆಡಿಯೋ ಕಾರ್ಯಕ್ರಮ ಇಂದು ಸಂಜೆ 7.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ನಿನ್ನೆ ತಾನೇ ದುಬೈನಲ್ಲಿ ಸಹ ಸಿನಿಮಾದ ಅದ್ದೂರಿ ಆಡಿಯೋ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸುದೀಪ್ ಹೊರತು ಪಡಿಸಿ ಇಡೀ ಚಿತ್ರತಂಡ ಭಾಗಿಯಾಗಿತ್ತು.


Click it and Unblock the Notifications











