ವಿಜಯ ದೇವರಕೊಂಡಗೆ ಅಭಿಮಾನಿ ಅಂತೆ ಶಿವಣ್ಣ: ಯಾಕ್ ಗೊತ್ತಾ.?
Recommended Video

ಟಾಲಿವುಡ್ ಸ್ಟಾರ್ ನಟ ವಿಜಯ ದೇವರಕೊಂಡ ಈಗ ಸೌತ್ ಇಂಡಸ್ಟ್ರಿಯಲ್ಲಿ ಟಾಕ್ ಆಫ್ ದಿ ಟೌನ್. ತೆಲುಗು ಮಾತ್ರವಲ್ಲದೇ, ತಮಿಳು, ಮಲಯಾಳಂ ಅಷ್ಟೇ ಯಾಕೆ ನಮ್ಮ ಕರ್ನಾಟಕದಲ್ಲೂ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ.
'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ರಾತ್ರೋರಾತ್ರಿ ಸೂಪರ್ ಸ್ಟಾರ್ ಆದ ವಿಜಯ್ ಗೆ ಬಗ್ಗೆ ತೆಲುಗು ಸ್ಟಾರ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ, ಸ್ಯಾಂಡಲ್ ವುಡ್ ಸ್ಟಾರ್ ಗಳು ವಿಜಯ್ ಅಭಿನಯಕ್ಕೆ ಫಿದಾ ಆಗಿದ್ದಾರೆ.
ಇದಕ್ಕೆ ತಾಜಾ ಉದಾಹರಣೆಯಾಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಇತ್ತೀಚಿಗಷ್ಟೆ ಬೆಂಗಳೂರಿಗೆ ಬಂದಿದ್ದ ವಿಜಯ್ ದೇವರಕೊಂಡ ಅವರ ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ವಿಜಯ್ ಎದುರುಗಡೆಯೇ 'ನಾನು ನಿನಗೆ ಅಭಿಮಾನಿ' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ದೇವರಕೊಂಡಗೆ ಯಾವಾಗನಿಂದ ಶಿವಣ್ಣ ಅಭಿಮಾನಿ ಅಂತ ಗೊತ್ತಾ.? ಮುಂದೆ ಓದಿ.....

ಕಮಲ್ ನಂತರ ಇಷ್ಟ ಪಟ್ಟ ನಟ
ಕಮಲ್ ಹಾಸನ್ ನಂತರ ಶಿವರಾಜ್ ಕುಮಾರ್ ಮನಸಾರೆ ಇಷ್ಟ ಪಟ್ಟ ನಟ ವಿಜಯ ದೇವರಕೊಂಡ ಅಂತೆ. ಹೀಗಂತ ಸ್ವತಃ ಶಿವಣ್ಣನೇ ಹೇಳಿಕೊಂಡಿದ್ದಾರೆ. 'ನೋಟಾ' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ವಿಜಯ ದೇವರಕೊಂಡ ಅವರನ್ನ ಕರುನಾಡ ಚಕ್ರವರ್ತಿ ಹಾಡಿ ಹೊಗಳಿದ್ದಾರೆ.

ಅರ್ಜುನ್ ರೆಡ್ಡಿಗೂ ಮುಂಚೆ....
ಅರ್ಜುನ್ ರೆಡ್ಡಿ ಸಿನಿಮಾ ಬಂದ ಮೇಲೆ ವಿಜಯ ಇಷ್ಟವಾಗಿಲ್ಲ. ಅದಕ್ಕೂ ಮುಂಚೆ 'ಪೆಳ್ಳಿ ಚೂಪುಲು' ಎಂಬ ಸಿನಿಮಾ ಮಾಡಿದಾಗಲೇ ತುಂಬಾ ಇಷ್ಟವಾದರು. ಆ ಸಿನಿಮಾವನ್ನ ನೋಡಿದ್ದೆ, ಅರ್ಜುನ್ ರೆಡ್ಡಿನೂ ನೋಡಿದೆ. ತುಂಬಾ ಚೆನ್ನಾಗಿ ಆಕ್ಟ್ ಮಾಡ್ತಾರೆ ಎಂದು ಶಿವಣ್ಣ ಹೇಳಿದ್ರು.

ನನ್ನ ಮಗಳಿಗೂ ಇಷ್ಟ
ವಿಜಯ ದೇವರಕೊಂಡ ಅಂದ್ರೆ ಕೇವಲ ಶಿವರಾಜ್ ಕುಮಾರ್ ಗೆ ಮಾತ್ರವಲ್ಲ, ಶಿವಣ್ಣನ ಮಗಳಿಗೂ ಇಷ್ಟವಂತೆ. ಇದನ್ನ ಕೂಡ ಹ್ಯಾಟ್ರಿಕ್ ಹೀರೋ ದೇವರಕೊಂಡ ಬಳಿ ಹೇಳಿಕೊಂಡ್ರು.

'ನೋಟಾ' ನೋಡುವುದಾಗಿ ಹೇಳಿದ್ರು
ಸದ್ಯ 'ಗೀತಾ ಗೋವಿಂದಂ' ಚಿತ್ರದ ನಂತರ ವಿಜಯ ದೇವರಕೊಂಡ ಅಭಿನಯದ ಸಿನಿಮಾ 'ನೋಟಾ'. 'ಗೀತಾ ಗೋವಿಂದಂ' ಸಿನಿಮಾ ನೋಡೋಕೆ ಆಗಿಲ್ಲ. ನೋಡ್ಬೇಕು ಎಂಬ ಆಸೆ ಇದೆ. ಖಂಡಿತಾ ನೋಡ್ತೀನಿ. ನೋಟಾ ಚಿತ್ರವನ್ನ ಪಕ್ಕಾ ನೋಡ್ತೀನಿ. ವಿಜಯ್ ಗೆ ಒಳ್ಳೆಯದಾಗಲಿ ಎಂದು ಶಿವಣ್ಣ ಶುಭಕೋರಿದ್ರು.

ರಶ್ಮಿಕಾ-ರಕ್ಷಿತ್ ಬಗ್ಗೆ ದೇವರಕೊಂಡ ಏನಂದ್ರು.?
''ರಕ್ಷಿತ್ ಹಾಗೂ ರಶ್ಮಿಕಾ ನಡುವಿನ ಘಟನೆಯ ಬಗ್ಗೆ ಮಾತನಾಡಲು ನಾನು ಮೂರನೇಯ ವ್ಯಕ್ತಿ. ಅವರಿಗೆ ಈ ಸುದ್ದಿಗಳಿಂದ ಎಷ್ಟು ನೋವಾಗುತ್ತದೆ ಎನ್ನುವ ಅರಿವು ನನಗೆ ಇದೆ. ಅವರನ್ನು ಅವರ ಪಾಡಿಗೆ ಸ್ಪಲ್ಪ ಬಿಡಿ. ಅವರ ಭಾವನೆ ಮತ್ತು ನೋವುಗಳು ಬೇರೆಯವರ ಮನರಂಜನೆ ಆಗಬಾರದು.'' - ವಿಜಯ ದೇವರಕೊಂಡ, ನಟ


Click it and Unblock the Notifications











