ಭಜರಂಗಿ 2 ಮೋಷನ್ ಪೋಸ್ಟರ್: ದುಷ್ಟ ಶಕ್ತಿಗಳ ಲೋಕದಲ್ಲಿ ಶಿವಣ್ಣ
ಶಿವರಾಜ್ ಕುಮಾರ್ ನಟಿಸಿರುವ 'ಭಜರಂಗಿ 2' ಸಿನಿಮಾ ಬಿಡುಗಡೆಗೆ ಬಹುತೇಕ ತಯಾರಾಗಿದೆ. ಈ ಮಧ್ಯೆ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ ಚಿತ್ರತಂಡ.
Recommended Video
ಕಳೆದ ಜುಲೈ ತಿಂಗಳಲ್ಲಿ ಟೀಸರ್ ಬಿಡುಗಡೆ ಮಾಡಿ ಹುಚ್ಚೆಬ್ಬಿಸಿದ್ದ 'ಭಜರಂಗಿ 2' ತಂಡ ಇದೀಗ ಮೋಷನ್ ಪೋಸ್ಟರ್ ಮೂಲಕ ಮತ್ತೆ ಹುಬ್ಬೇರಿಸುವಂತೆ ಮಾಡಿದೆ.
ದುಷ್ಟ ಶಕ್ತಿಗಳ ಕೂಟದ ಒಳಗೆ ಶಿವಣ್ಣ ನುಗ್ಗಲಿದ್ದಾರೆ. ಆ ದುಷ್ಟಶಕ್ತಿಗಳ ಕೂಟ ಕನ್ನಡ ಸಿನಿಮಾದಲ್ಲಿ ಹಿಂದೆಂದೂ ನೊಡದಷ್ಟು ಭಯಾನಕವಾಗಿರಲಿದೆ ಎಂಬುದು ಮೋಷನ್ ಪೋಸ್ಟರ್ ನೋಡಿದವರಿಗೆ ಸುಲಭಕ್ಕೆ ಅರ್ಥವಾಗುತ್ತಿದೆ.

ರಕ್ತಿ ಪಿಪಾಸು ಕಾಡು ಜನರು, ರುಂಡಗಳೇ ತುಂಬಿರುವ ಗುಹೆ, ರಕ್ತದ ಅಭಿಷೇಕ ಬೇಡುತ್ತಿರುವ ಕಾಳಿ ಮಾತೆ, ರೋಷವೇ ಮೊದಲಾಗಿರುವ ಮಹಾ ಮಾಂತ್ರಿಕ ಇವರೆಲ್ಲರುಗಳ ನಡುವೆ ಶಿವಣ್ಣನ ಆ ಹಸಿರು ಕಣ್ಣುಗಳು ಸಿನಿಮಾ ನೋಡಲೇಬೇಕೆಂಬ ಹಂಬಲ ಮೂಡಿಸುತ್ತಿವೆ.
2013 ರಲ್ಲಿ 'ಭಜರಂಗಿ' ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಈಗ ಎಂಟು ವರ್ಷಗಳ ನಂತರ 'ಭಜರಂಗಿ 2' ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಭಾವನಾ ನಾಯಕಿಯಾಗಿದ್ದಾರೆ. ಸೌರವ್ ಲೋಕೇಶ್ ಇದ್ದಾರೆ, ನಟಿ ಶ್ರುತಿ ಅವರು ಋಣಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆಯೇ ಎಂಬ ಅನುಮಾನ ಟೀಸರ್ ನೋಡಿದರೆ ಏಳುತ್ತಿದೆ.
ಸಿನಿಮಾವನ್ನು ಹರ್ಷ ನಿರ್ದೇಶಿಸಿದ್ದಾರೆ, ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಜಯಣ್ಣ-ಭೋಗೇಂದ್ರ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











