'ಆಪ್ತಮಿತ್ರ' ಚಿತ್ರ ನೆನಪಿಸುವ 'ಆಯುಷ್ಮಾನ್ ಭವ' ಟ್ರೈಲರ್

ತುಂಬು ಕುಟುಂಬ.. ಸಂತೋಷ ತುಂಬಿ ತುಳುಕುತ್ತಿದ್ದರೂ ಮನೆಯ ಹಿರಿಜೀವಕ್ಕೆ ಏನೋ ಒಂದು ಸಂಕಟ.. ಒಂದು ಕೋಣೆ.. ಅಲ್ಲಿನ ನಿಗೂಢ ಜಗತ್ತು.. ನೃತ್ಯ ಮತ್ತು ಸಂಗೀತಾಭ್ಯಾಸ.. ಮಾನಸಿಕ ನ್ಯೂನತೆ... ಈ ಎಲ್ಲದಕ್ಕೂ ಪರಿಹಾರ ಹುಡುಕಲು ಬರುವ ಹೀರೋ.. ಕೊನೆಗೆ ಬಯಲಾಗುವ ರಹಸ್ಯ.. ಇಂತಹ ಎಳೆ ಇಟ್ಟುಕೊಂಡು ಈಗಾಗಲೇ 'ಆಪ್ತಮಿತ್ರ' ಮತ್ತು 'ಆಪ್ತರಕ್ಷಕ' ಚಿತ್ರಗಳು ತೆರೆಗೆ ಬಂದಿವೆ.

'ಆಪ್ತಮಿತ್ರ' ಮತ್ತು 'ಆಪ್ತರಕ್ಷಕ'ದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಪಿ.ವಾಸು ಇದೀಗ 'ಆಯುಷ್ಮಾನ್ ಭವ' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. 'ಆಪ್ತಮಿತ್ರ' ಚಿತ್ರದಲ್ಲಿ ಒಂದಾಗಿದ್ದ ದ್ವಾರಕೀಶ್ ಮತ್ತು ಪಿ.ವಾಸು ಜೋಡಿ ಇದೀಗ 'ಆಯುಷ್ಮಾನ್ ಭವ' ಸಿನಿಮಾಗಾಗಿ ಜೊತೆಯಾಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಆಯುಷ್ಮಾನ್ ಭವ' ಟ್ರೈಲರ್ ಇಂದು ಬಿಡುಗಡೆ ಆಗಿದೆ.

Shiva Rajkumar starrer Ayushmanbhava trailer is released

'ಆಯುಷ್ಮಾನ್ ಭವ' ಟ್ರೈಲರ್ ನೋಡ್ತಿದ್ರೆ, 'ಆಪ್ತಮಿತ್ರ' ಚಿತ್ರ ಖಂಡಿತ ನೆನಪಿಗೆ ಬರುತ್ತೆ. 'ಆಪ್ತಮಿತ್ರ' ಚಿತ್ರದಂತೆ ಇಲ್ಲೂ ಒಂದು ಔಟ್ ಹೌಸ್ ರಹಸ್ಯ ಇದೆ. ಆ ರಹಸ್ಯವನ್ನ ಬಹಿರಂಗ ಪಡಿಸಲು ಪ್ರಳಯಾಂತಹ ಶಿವಣ್ಣ ಎಂಟ್ರಿಕೊಡ್ತಾರೆ.

ಹೇಳಿ ಕೇಳಿ ಇದು ಪಿ.ವಾಸು ಚಿತ್ರ ಆಗಿರೋದ್ರಿಂದ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳಿಗೆ 'ಆಯುಷ್ಮಾನ್ ಭವ' ಕೊರತೆ ಮಾಡುವುದಿಲ್ಲ. ಇನ್ನೂ ಶಿವಣ್ಣ ಇದ್ದ ಮೇಲೆ ಹಾಡು, ಡ್ಯಾನ್ಸ್ ಮತ್ತು ಆಕ್ಷನ್ ಇರಲೇಬೇಕು. ಅವೆಲ್ಲವೂ ಚಿತ್ರದಲ್ಲಿ ಹೇರಳವಾಗಿದೆ ಎಂಬುದಕ್ಕೆ ಇಂದು ರಿಲೀಸ್ ಆಗಿರುವ ಟ್ರೈಲರ್ ಸಾಕ್ಷಿ.

ಇದೀಗಷ್ಟೇ ಬಿಡುಗಡೆ ಆಗಿರುವ 'ಆಯುಷ್ಮಾನ್ ಭವ' ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಶಿವಣ್ಣ, ರಚಿತಾ ರಾಮ್, ಅನಂತ್ ನಾಗ್ ಜೊತೆಗೆ ಸುಹಾಸಿನಿ, ಶಿವಾಜಿ ಪ್ರಭು, ಸಾಧು ಕೋಕಿಲ, ಅವಿನಾಶ್, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಗುರುಕಿರಣ್ ಸಂಗೀತ ಚಿತ್ರಕ್ಕಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಂದ್ರೆ ನವೆಂಬರ್ 1 ರಂದು 'ಆಯುಷ್ಮಾನ್ ಭವ' ನಿಮ್ಮ ಮುಂದೆ ಬರಲಿದೆ. ನೋಡಲು ನೀವು ರೆಡಿನಾ.?

More from Filmibeat

English summary
Kannada Actor Shiva Rajkumar, Rachita Ram starrer Ayushmanbhava trailer is out. The movie is directed by P Vasu, produced by Dwarakish and Yogesh Dwarakish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X