'ಭಜರಂಗಿ 2' ಬಿಡುಗಡೆ ದಿನಾಂಕ ಪ್ರಕಟ: ವಿಶೇಷತೆ ಏನು?

By ಫಿಲ್ಮಿಬೀಟ್ ಡೆಸ್ಕ್

ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ 'ಭಜರಂಗಿ 2' ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಈ ಸಿನಿಮಾ ಬಿಡುಗಡೆಗೆ ಹಲವು ತಿಂಗಳುಗಳಿಂದಲೂ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದರು.

'ಭಜರಂಗಿ 2' ಸಿನಿಮಾದ ಚಿತ್ರೀಕರಣ ಮುಗಿದು ಹಲವು ತಿಂಗಳುಗಳೇ ಆಗಿದ್ದರು ಬಿಡುಗಡೆ ಆಗಿರಲಿಲ್ಲ. ಇದೀಗ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು ಜೊತೆಗೆ ಸಿನಿಮಾದ ಟ್ರೇಲರ್‌ ಬಿಡುಗಡೆ ಯಾವಾಗ ಆಗಲಿದೆ ಎಂಬ ಬಗ್ಗೆಯೂ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಶಿವರಾಜ್ ಕುಮಾರ್ ಜೊತೆಗೆ ಹಲವು ಪ್ರತಿಭಾನ್ವಿತ, ಯುವ ಹಾಗೂ ಹಿರಿಯ ನಟರು ನಟಿಸಿರುವ 'ಭಜರಂಗಿ 2' ಸಿನಿಮಾವು ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿಲ್ಲ. ಇದೀಗ ಹೊಸ ದಿನಾಂಕವನ್ನು ಚಿತ್ರತಂಡ ನೀಡಿದೆ. 'ಭಜರಂಗಿ 2' ಸಿನಿಮಾ ಬಿಡುಗಡೆ ಆಗಲಿದೆ ಎಂಬ ಕಾರಣಕ್ಕೆ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಸಲಗ' ಸಿನಿಮಾದ ಬಿಡುಗಡೆ ಮುಂದಕ್ಕೆ ಹಾಕಿಕೊಳ್ಳಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.

'ಭಜರಂಗಿ 2' ಸಿನಿಮಾವು ಸೆಪ್ಟೆಂಬರ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದ್ದು, ಸಿನಿಮಾವನ್ನು ಎಲ್ಲರೂ ಚಿತ್ರಮಂದಿರಗಳಲ್ಲಿಯೇ ನೋಡಿ ಹರಿಸಿರಿ ಎಂದು ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 10 ಗಣೇಶ ಚತುರ್ಥಿ ಹಬ್ಬವಾಗಿದ್ದು ಹಬ್ಬದ ಸಂಭ್ರಮದ ದುಪ್ಪಟ್ಟುಗೊಳಿಸುವ ಉದ್ದೇಶದಲ್ಲಿ ಚಿತ್ರಮಂದಿರಕ್ಕೆ ಸಿನಿಮಾ ದಾಂಗುಡಿ ಇಡಲಿದೆ.

ಸಿನಿಮಾದ ಟ್ರೈಲರ್ ಸೆಪ್ಟೆಂಬರ್ 1ಕ್ಕೆ ಬಿಡುಗಡೆ

ಸಿನಿಮಾದ ಟ್ರೈಲರ್ ಸೆಪ್ಟೆಂಬರ್ 1ಕ್ಕೆ ಬಿಡುಗಡೆ

'ಭಜರಂಗಿ 2' ಸಿನಿಮಾದ ಟ್ರೇಲರ್‌ ಸೆಪ್ಟೆಂಬರ್ 1ನೇ ತಾರೀಖಿನಂದು ಬಿಡುಗಡೆ ಆಗಲಿದೆ. ಕೆಲವು ತಿಂಗಳ ಹಿಂದೆಯೇ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ಭಾರಿ ಕುತೂಹಲ ಕೆರಳಿಸಿತ್ತು. ಟೀಸರ್‌ನಲ್ಲಿ ದೊಡ್ಡ ಸೆಟ್‌ಗಳು, ಮಾಯಾ ಲೋಕ ಜೊತೆಗೆ ನಟಿ ಶ್ರುತಿ ಪಾತ್ರ ಸಖತ್ ಹೈಲೆಟ್ ಆಗಿದ್ದು ವಿಶೇಷ. ಸಿನಿಮಾದ ಹಾಡೊಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಸಿದ್ ಶ್ರೀರಾಮ್ ಹಾಡಿರುವ 'ನೀ ಸಿಗೊವರೆಗೂ' ಹಾಡು ಬಹಳ ಹಿಟ್ ಆಗಿದೆ.

ಕೊರೊನಾ ಕಾರಣಕ್ಕೆ ಬಿಡುಗಡೆ ಆಗಿರಲಿಲ್ಲ

ಕೊರೊನಾ ಕಾರಣಕ್ಕೆ ಬಿಡುಗಡೆ ಆಗಿರಲಿಲ್ಲ

'ಭಜರಂಗಿ 2' ಸಿನಿಮಾ ಬಿಡುಗಡೆಗೆ ತಯಾರಾಗಿ ವರ್ಷವಾಗುತ್ತಾ ಬಂತು. ಆದರೆ ಕೊರೊನಾ ಕಾರಣಕ್ಕೆ ಬಿಡುಗಡೆ ತಡವಾಗುತ್ತಲೇ ಇತ್ತು. ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನಲಾಗಿತ್ತು ಆದರೆ ಈಗ ಗಣೇಶ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆದಿವೆಯಾದರೂ ಪೂರ್ಣ ಪ್ರಮಾಣದ ಸೀಟು ಲಭ್ಯತೆ ಇಲ್ಲ. ಬದಲಿಗೆ 50% ಪ್ರೇಕ್ಷಕರಷ್ಟೆ ಒಮ್ಮೆ ಸಿನಿಮಾ ನೋಡಬಹುದು. ಸೆಪ್ಟೆಂಬರ್ 10ರ ವೇಳೆಗೆ ಸರ್ಕಾರವು ಚಿತ್ರಮಂದಿರಗಳ ಮೇಲೆ ಹೇರಿರುವ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕುತ್ತದೆಯೇ ಕಾದು ನೋಡಬೇಕು.

2013 ರಲ್ಲಿ ಬಿಡುಗಡೆ ಆಗಿದ್ದ 'ಭಜರಂಗಿ' ಸಿನಿಮಾ

2013 ರಲ್ಲಿ ಬಿಡುಗಡೆ ಆಗಿದ್ದ 'ಭಜರಂಗಿ' ಸಿನಿಮಾ

'ಭಜರಂಗಿ 2' ಸಿನಿಮಾವು 2013 ರಲ್ಲಿ ಬಿಡುಗಡೆ ಆಗಿದ್ದ 'ಭಜರಂಗಿ' ಸಿನಿಮಾದ ಮುಂದುವರೆದ ಭಾಗವಾಗಿದೆ. 2013 ರ 'ಭಜರಂಗಿ' ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ಪಿ.ಹರ್ಷಾ ಅವರೇ 'ಭಜರಂಗಿ 2' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್‌ಗೆ ನಾಯಕಿಯಾಗಿ ಮಲಯಾಳಂ ಸುಂದರಿ ಭಾವನಾ ನಟಿಸಿದ್ದಾರೆ. ನಟಿ ಶ್ರುತಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2013 ರ 'ಭಜರಂಗಿ' ಸಿನಿಮಾದಲ್ಲಿ ಗಮನ ಸೆಳೆದಿದ್ದ ಸೌರವ್ ಲೋಕೇಶ್ ಈ ಸಿನಿಮಾದಲ್ಲಿಯೂ ಇದ್ದಾರೆ. ಶಿವರಾಜ್ ಕೆ.ಆರ್.ಪೇಟೆ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದು, ನಿರ್ಮಾಣವನ್ನು ಜಯಣ್ಣ-ಭೋಗೇಂದ್ರ ಮಾಡಿದ್ದಾರೆ.

ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ

ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ

ಇನ್ನು ಶಿವರಾಜ್ ಕುಮಾರ್ ನಟನೆಯ 'ಭೈರವ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾವನ್ನು ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದು, ಡಾಲಿ ಧನಂಜಯ್, ಪೃಥ್ವಿ ಅಂಬರ್ ಅವರುಗಳು ಸಿನಿಮಾದಲ್ಲಿದ್ದಾರೆ. 'ನೀ ಸಿಗೊವರೆಗೆ' ಹೆಸರಿನ ಹೊಸ ಸಿನಿಮಾಕ್ಕೆ ಸಹಿ ಹಾಕಿರುವ ಶಿವಣ್ಣ, ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಹಾಗೂ ಹೊಸ ನಿರ್ದೇಶಕರೊಬ್ಬರ 'ಸತ್ಯಮಂಗಲ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Shiva Rajkumar starrer Bhajrangi 2 movie release date announced. Movie will release on September 10 all over Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X