twitter
    For Quick Alerts
    ALLOW NOTIFICATIONS  
    For Daily Alerts

    ಘೋಸ್ಟ್ ಚಿತ್ರದ ಶಿವಣ್ಣನ ವಿಂಟೇಜ್ ಪೋಸ್ಟರ್ 1983ರ ಅಮೆರಿಕನ್ ಚಿತ್ರದ ಕಾಪಿ!

    |

    ನಟ ಹಾಗೂ ನಿರ್ದೇಶಕವೂ ಸಹ ಆಗಿರುವ ಎಂಜಿ ಶ್ರೀನಿವಾಸ್ ನಿರ್ದೇಶನದ ಮುಂದಿನ ಚಿತ್ರ ಘೋಸ್ಟ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಹೈಪ್ ಹೆಚ್ಚಿಸುತ್ತಿದೆ. ಸಂದೇಶ್ ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ವೇದ ಚಿತ್ರದ ಅಲೆಯಲ್ಲಿರುವ ಶಿವ ರಾಜ್‌ಕುಮಾರ್ ನಟನೆಯ ಈ ಘೋಸ್ಟ್ ಚಿತ್ರವೂ ಸಹ ಗೆಲ್ಲಲಿದೆ ಎಂಬ ಅಭಿಪ್ರಾಯವನ್ನು ಸಿನಿ ರಸಿಕರು ವ್ಯಕ್ತಪಡಿಸುತ್ತಿದ್ದಾರೆ.

    ಅದರಲ್ಲೂ ಈ ಚಿತ್ರದ ಪೋಸ್ಟರ್ ಹಾಗೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗುವಂತೆ ಮಾಡಿತ್ತು. ವಿಶೇಷವಾಗಿ ಚಿತ್ರತಂಡ ಬಿಡುಗಡೆಗೊಳಿಸಿದ್ದ 'ಒನ್ಸ್ ಎ ಗ್ಯಾಂಗ್‌ಸ್ಟರ್ ಆಲ್‌ವೇಸ್ ಎ ಗ್ಯಾಂಗ್‌ಸ್ಟರ್' ಎಂಬ ಪೋಸ್ಟರ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಶಿವ ರಾಜ್‌ಕುಮಾರ್ ರಣರಂಗ ಚಿತ್ರದ ಕಾಲದಲ್ಲಿದ್ದ ಹೇರ್‌ಸ್ಟೈಲ್‌ನಲ್ಲಿ ಸಿಗರೇಟ್ ಸೇದುತ್ತಾ ಕೋಟ್ ಧರಿಸಿ ಸೊಂಟದ ಮೇಲೆ ಕೈ ಇಟ್ಟು ಖಡಕ್ ಆಗಿ ಕಾಣಿಸಿಕೊಂಡ ಎಡಿಟೆಟ್ ಪೋಸ್ಟರ್ ಇದಾಗಿತ್ತು.

    ಅರವತ್ತರ ಎನರ್ಜಿಟಿಕ್ ಹೀರೊ ಶಿವ ರಾಜ್‌ಕುಮಾರ್ ಅವರ ಈ ವಿಂಟೇಜ್ ಲುಕ್ ಪೋಸ್ಟರ್ ಕಂಡ ಸಿನಿ ರಸಿಕರು ಚಿತ್ರತಂಡವನ್ನು ಹಾಗೂ ಎಡಿಟ್ ಮಾಡಿದವರನ್ನು ಹಾಡಿ ಹೊಗಳಿದ್ದರು. ಅಬ್ಬಬ್ಬಾ ಪೋಸ್ಟರ್ ಎಂದರೆ ಹೀಗಿರಬೇಕು ಎಂದು ಮೆಚ್ಚಿಕೊಂಡಿದ್ದರು. ಈ ಒಂದೇ ಒಂದು ಪೋಸ್ಟರ್ ಮೂಲಕ ಸಿಕ್ಕಾಪಟ್ಟೆ ಹೈಪ್ ಹುಟ್ಟುಹಾಕಿದ್ದ ಘೋಸ್ಟ್ ಚಿತ್ರತಂಡ ಈಗ ಇದೇ ಪೋಸ್ಟರ್ ಕಾರಣದಿಂದಾಗಿ ಟ್ರೋಲ್‌ಗೆ ಒಳಗಾಗಿದೆ. ಹೌದು, ಈ ಪೋಸ್ಟರ್ ಕಾಪಿ ಎಂಬುದನ್ನು ನೆಟ್ಟಿಗರು ಟ್ವೀಟ್ ಮಾಡಿ ತಿಳಿಸಿದ್ದು, ಇದಕ್ಕೆ ಚಿತ್ರದ ನಿರ್ದೇಶಕ ಎಂಜಿ ಶ್ರೀನಿವಾಸ್ ಸಹ ಸ್ಪಂದಿಸಿದ್ದಾರೆ.

    1983ರ ಅಮೆರಿಕನ್ ಚಿತ್ರದ ಕಾಪಿ

    1983ರ ಅಮೆರಿಕನ್ ಚಿತ್ರದ ಕಾಪಿ

    ವೈರಲ್ ಆಗಿದ್ದ ಘೋಸ್ಟ್ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿರುವ ನೆಟ್ಟಿಗನೋರ್ವ ಈ ಪೋಸ್ಟರ್ 1983ರಲ್ಲಿ ತೆರೆಕಂಡಿದ್ದ ಚಿತ್ರ ಸ್ಕಾರ್‌ಫೇಸ್‌ನ ಕಾಪಿ ಎಂದು ಟ್ವೀಟ್ ಮಾಡಿದ್ದಾರೆ. ಹೌದು, ಶಿವಣ್ಣನ ಈ ವಿಶಿಷ್ಟ ಪೋಸ್ಟರ್‌ಗೆ ಬಳಸಲಾಗಿರುವ ಫೋಟೊ 1983ರಲ್ಲಿ ಬಿಡುಗಡೆಯಾಗಿದ್ದ ಸ್ಕಾರ್‌ಫೇಸ್ ಚಿತ್ರದಲ್ಲಿ ಅಲ್ ಫೆಸಿನೊ ಎಂಬ ನಟ ನಿರ್ವಹಿಸಿದ್ದ ಟೋನಿ ಮೊಂಟಾನಾ ಎಂಬ ಪಾತ್ರದ ಫೋಟೊವಾಗಿದೆ. ಈ ಫೋಟೊವನ್ನು ಎಡಿಟ್ ಮಾಡಿ ಅದಕ್ಕೆ ಶಿವ ರಾಜ್‌ಕುಮಾರ್ ಅವರ ತಲೆಯನ್ನು ಸೇರಿಸಿರುವುದನ್ನು ಎರಡೂ ಫೋಟೊಗಳ ನಡುವೆ ಹೋಲಿಕೆ ಮಾಡಿದರೆ ಕಾಣಬಹುದಾಗಿದೆ.

    ನಿರ್ದೇಶಕ ಹೇಳಿದ್ದಿಷ್ಟು

    ನಿರ್ದೇಶಕ ಹೇಳಿದ್ದಿಷ್ಟು

    ಹೀಗೆ ನೆಟ್ಟಿಗನೋರ್ವ ಘೋಸ್ಟ್ ಚಿತ್ರದ ಪೋಸ್ಟರ್ ಸ್ಕಾರ್‌ಫೇಸ್ ಚಿತ್ರದ ಕಾಪಿ ಎಂದಿದ್ದು, ಇದಕ್ಕೆ ಘೋಸ್ಟ್ ಚಿತ್ರದ ನಿರ್ದೇಶಕ ಎಂಜಿ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ತಪ್ಪನ್ನು ತನ್ನ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ ತಿಳಿಸಿದ ಎಂಜಿ ಶ್ರೀನಿವಾಸ್ ಇದು ಲುಕ್‌ ಟೆಸ್ಟ್‌ಗಾಗಿ ಯತೀಶ್ ಎಂಬ ಎಡಿಟರ್ ಚಿತ್ರ ಬಿಡಿಸಿ, ಹಲವು ತಂತ್ರಜ್ಙಾನ ಬಳಸಿ ತಯಾರಿಸಿದ ಪೋಸ್ಟರ್ ಆಗಿದೆ, ಆದರೆ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಾಗದಿರುವ ಹಾಗೆ ಎಚ್ಚರವಹಿಸಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಶ್ರೀನಿ ಪ್ರತಿಕ್ರಿಯೆಗೆ ಮೆಚ್ಚುಗೆ

    ಶ್ರೀನಿ ಪ್ರತಿಕ್ರಿಯೆಗೆ ಮೆಚ್ಚುಗೆ

    ಸದ್ಯ ನಿರ್ದೇಶಕ ಶ್ರೀನಿ ನೀಡಿರುವ ಪ್ರತಿಕ್ರಿಯೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿ ರಸಿಕರು ತಪ್ಪನ್ನು ಹುಡುಕಿದಾಗ ಅದನ್ನು ಒಪ್ಪಿಕೊಳ್ಳದೇ ತಾವು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ತಾವು ಯಾರನ್ನೂ ಕಾಪಿ ಮಾಡಿಲ್ಲ, ನಮ್ಮ ಕೆಲಸಕ್ಕೂ ನೀವು ಆರೋಪಿಸುತ್ತಿರುವ ಕೆಲಸಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ವಾದಿಸುವ ನಿರ್ದೇಶಕರ ನಡುವೆ ಈ ರೀತಿ ಮುಂದೆ ಈ ರೀತಿಯ ತಪ್ಪಾಗದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸುವ ನಿರ್ದೇಶಕರು ಸಿಗುವುದು ಬಲು ವಿರಳ, ಇಂತಹ ಮನಸ್ಥಿತಿ ಎಲ್ಲರಲ್ಲೂ ಇರಬೇಕು ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

    English summary
    Shiva Rajkumar starrer Ghost movie poster is copy of Scarface hollywood film. Read on
    Wednesday, February 1, 2023, 13:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X