For Quick Alerts
  ALLOW NOTIFICATIONS  
  For Daily Alerts

  ದಾಖಲೆ ಬೆಲೆಗೆ ಮಾರಾಟವಾದ ಶಿವಣ್ಣನ 'ಕವಚ' ಪ್ರಸಾರ ಹಕ್ಕುಗಳು.!

  |
  ದಾಖಲೆ ಬೆಲೆಗೆ ಮಾರಾಟವಾದ ಶಿವಣ್ಣನ 'ಕವಚ'..! | FILMIBEAT KANNADA

  ''ರೀಮೇಕ್ ಮಾಡಲ್ಲ'' ಎಂದು ಶಪಥ ಮಾಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಏಕಾಏಕಿ ಯೂ-ಟರ್ನ್ ತೆಗೆದುಕೊಂಡಿದ್ದು 'ಕವಚ' ಚಿತ್ರಕ್ಕಾಗಿ.

  2016 ರಲ್ಲಿ ಬಿಡುಗಡೆ ಆಗಿದ್ದ ಮಲಯಾಳಂನ 'ಒಪ್ಪಂ' ಚಿತ್ರವನ್ನ ನೋಡಿ ಮನಸಾರೆ ಮೆಚ್ಚಿದ್ದ ಶಿವರಾಜ್ ಕುಮಾರ್ ಅದರ ಕನ್ನಡ ಅವತರಣಿಕೆ 'ಕವಚ'ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

  ಹೆಸರಿಗೆ 'ಕವಚ' ರೀಮೇಕ್ ಆಗಿರಬಹುದು. ಆದ್ರೆ, 'ಕವಚ' ಚಿತ್ರದ ಬಹುತೇಕ ಭಾಗ ಒರಿಜಿನಲ್ ಆಗಿದೆ. ಅಪ್ಪಟ ಕ್ರೈಂ ಥ್ರಿಲ್ಲರ್ ಚಿತ್ರವಾಗಿರುವ 'ಕವಚ'ದಲ್ಲಿ ಶಿವಣ್ಣ ಕುರುಡನಾಗಿ ಅಭಿನಯಿಸಿದ್ದಾರೆ.

  ಗಾಂಧಿನಗರದಲ್ಲಿ ಕುತೂಹಲ ಕೆರಳಿಸಿರುವ 'ಕವಚ' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿಗೊಂಡಿಲ್ಲ. 2019 ರಲ್ಲಿ ಬಿಡುಗಡೆ ಆಗಲಿರುವ 'ಕವಚ' ಚಿತ್ರದ ಪ್ರಸಾರ ಹಕ್ಕುಗಳು ಮತ್ತು ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟ ಆಗಿದೆ. ಮುಂದೆ ಓದಿರಿ...

  ಸೇಲ್ ಆಯ್ತು 'ಕವಚ' ಸ್ಯಾಟೆಲೈಟ್ ರೈಟ್ಸ್.!

  ಸೇಲ್ ಆಯ್ತು 'ಕವಚ' ಸ್ಯಾಟೆಲೈಟ್ ರೈಟ್ಸ್.!

  'ಕವಚ' ಚಿತ್ರದ ಪ್ರಸಾರ ಹಕ್ಕುಗಳನ್ನು ಸ್ಟಾರ್ ಸುವರ್ಣ ವಾಹಿನಿ ತನ್ನದಾಗಿಸಿಕೊಂಡಿದೆ. ಬರೋಬ್ಬರಿ 3.5 ಕೋಟಿ ರೂಪಾಯಿ ಕೊಟ್ಟು ಸ್ಟಾರ್ ಸುವರ್ಣ ವಾಹಿನಿ 'ಕವಚ' ಪ್ರಸಾರ ಹಕ್ಕುಗಳನ್ನು ಖರೀದಿ ಮಾಡಿದೆ.

  ಶಿವರಾಜ್ ಕುಮಾರ್ 'ಕವಚ' ಚಿತ್ರಕ್ಕೆ ಹೊಸ ನಾಯಕಿಯ ಆಗಮನ

  ಅತಿ ಹೆಚ್ಚು.!

  ಅತಿ ಹೆಚ್ಚು.!

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರ ಇತ್ತೀಚಿನ ಚಿತ್ರಗಳಿಗೆ ಹೋಲಿಸಿದರೆ, 'ಕವಚ' ಚಿತ್ರದ ಪ್ರಸಾರ ಹಕ್ಕುಗಳು ಅತಿ ಹೆಚ್ಚು ಬೆಲೆಗೆ ಮಾರಾಟ ಆಗಿದೆ. ಇದು ಚಿತ್ರದ ಕುರಿತಾಗಿ ಇರುವ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

  ಶಿವಣ್ಣನಿಗೆ ಕೋಪ, ಕಿರಿಕಿರಿ ಯಾಕೆ.? ಕಾರಣ ಇಲ್ಲಿದೆ ಓದಿರಿ..

  ಜೀ ಪಾಲಿಗೆ ಆಡಿಯೋ ಹಕ್ಕು.!

  ಜೀ ಪಾಲಿಗೆ ಆಡಿಯೋ ಹಕ್ಕು.!

  ಇನ್ನೂ 'ಕವಚ' ಚಿತ್ರದ ಆಡಿಯೋ ಹಕ್ಕುಗಳು ಜೀ ಮ್ಯೂಸಿಕ್ ಪಾಲಾಗಿದೆ. 43 ಲಕ್ಷಗಳನ್ನು ಕೊಟ್ಟು 'ಕವಚ' ಆಡಿಯೋ ರೈಟ್ಸ್ ಪಡೆದುಕೊಂಡಿದೆ ಜೀ ಮ್ಯೂಸಿಕ್.

  ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ಶಿವಣ್ಣ 'ಕವಚ' ಚಿತ್ರತಂಡ

  'ಕವಚ' ಕುರಿತು...

  'ಕವಚ' ಕುರಿತು...

  ಮಲಯಾಳಂನ 'ಒಪ್ಪಂ' ಚಿತ್ರದ ರೀಮೇಕ್ ಆಗಿರುವ 'ಕವಚ' ಚಿತ್ರಕ್ಕೆ ಜಿ.ವಿ.ಆರ್.ವಾಸು ಆಕ್ಷನ್ ಕಟ್ ಹೇಳಿದ್ದಾರೆ. ಶಿವರಾಜ್ ಕುಮಾರ್, ಕೃತಿಕಾ ಜಯಕುಮಾರ್, ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ, ವಸಿಷ್ಟ.ಎನ್.ಸಿಂಹ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸತ್ಯನಾರಾಯಣ ಮತ್ತು ಸಂಪತ್ ಬಂಡವಾಳ ಹಾಕಿದ್ದಾರೆ. 2019ರ ಜನವರಿಯಲ್ಲಿ 'ಕವಚ' ಬಿಡುಗಡೆ ಆಗುವ ಸಾಧ್ಯತೆ ಇದೆ.

  English summary
  Kannada Actor Shiva Rajkumar starrer 'Kavacha' satellite rights sold for record price.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X