ಶಿವಣ್ಣ 'ಲೀಡರ್' ಅವತಾರ ತಾಳುವುದು ಯಾವಾಗ.?
ವಯಸ್ಸು 54 ಆಗಿದ್ರೂ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರಿಗೆ ಇರುವ ಖದರ್ ಕೊಂಚ ಕೂಡ ಕಮ್ಮಿ ಆಗಿಲ್ಲ. ಶಿವಣ್ಣಗೆ ಇರುವಷ್ಟು ಬಿಜಿ ಶೆಡ್ಯೂಲ್ ಬೇರೆ ಯಾರಿಗೂ ಇಲ್ಲ.
'ಶ್ರೀಕಂಠ', 'ಬಂಗಾರು, s/o ಬಂಗಾರದ ಮನುಷ್ಯ', 'ಟಗರು', ಖದರ್', ದಿ ವಿಲನ್' ಸೇರಿದಂತೆ ಸಾಲು ಸಾಲು ಚಿತ್ರಗಳು ಶಿವಣ್ಣನ ಕೈಯಲ್ಲಿವೆ. [ಡಾ.ಶಿವಣ್ಣ ಈಗ 'ದಿ ಲಿಡರ್' ಆಫ್ ಸ್ಯಾಂಡಲ್ ವುಡ್]
ಇವೆಲ್ಲದರ ನಡುವೆ ಅಣ್ಣಾವ್ರ ಸುಪುತ್ರ 'ಲೀಡರ್' ಆಗಲು ಹೊರಟಿದ್ದಾರೆ. ಶೀರ್ಷಿಕೆ ವಿವಾದದಿಂದ ಹೊರ ಬಂದಿರುವ 'ಲೀಡರ್' ಚಿತ್ರ ಸೆಟ್ಟೇರುವುದಕ್ಕೆ ದಿನಗಣನೆ ಶುರುವಾಗಿದೆ. ಮುಂದೆ ಓದಿ....

'ಲೀಡರ್' ಮುಹೂರ್ತ ಯಾವಾಗ.?
ಗಾಂಧಿನಗರದಲ್ಲಿ ಬಹು ನಿರೀಕ್ಷೆ ಹುಟ್ಟು ಹಾಕಿರುವ 'ಲೀಡರ್' ಚಿತ್ರ ಆಗಸ್ಟ್ 18 ರಂದು ಸೆಟ್ಟೇರಲಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ 'ಲೀಡರ್' ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭ ನಡೆಯಲಿದೆ. [ಶಿವಣ್ಣ 'ಲೀಡರ್' ಆದರು.! ಅವರಿಗೆ 'ನಾಯಕಿ' ಯಾರು.?]

'ಲೀಡರ್' ಜೊತೆ ಹೊಸ ಬೆಡಗಿ.!
'ಲೀಡರ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ಪ್ರಣೀತಾ ನಾಯಕಿ ಎಂಬ ಸುದ್ದಿ ನಿಮಗೆ ಗೊತ್ತು. ಇದೀಗ 'ಲೀಡರ್' ಚಿತ್ರಕ್ಕೆ ಹೊಸ ಬೆಡಗಿ ಎಂಟ್ರಿ ಕೊಟ್ಟಿದ್ದಾರೆ. ಅದು ಯಾರು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಪತ್ರಕರ್ತೆ ಆಗಿ ದೀಪಿಕಾ ಕಾಮಯ್ಯ.!
'ಲೀಡರ್' ಚಿತ್ರದಲ್ಲಿ ಪತ್ರಕರ್ತೆ ಆಗಿ 'ಚಿಂಗಾರಿ' ಬೆಡಗಿ ದೀಪಿಕಾ ಕಾಮಯ್ಯ ಕಾಣಿಸಿಕೊಳ್ಳಲಿದ್ದಾರೆ.

'ಲೀಡರ್' ಚಿತ್ರದಲ್ಲಿ ದೊಡ್ಡ 'ತಾರಾ' ಬಳಗ
ಲೂಸ್ ಮಾದ ಯೋಗಿ, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ವಂಶಿ ಕೃಷ್ಣ ಸೇರಿದಂತೆ 'ಲೀಡರ್' ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇದೆ. [ಸತತ ಸೋಲಿನಿಂದ ಕಂಗೆಟ್ಟ ಯೋಗಿ ಕೈ ಹಿಡಿದ 'ಲೀಡರ್'.!]

ಶಿವಣ್ಣನ ಪುತ್ರಿ ಆಗಿ ಕಿಟ್ಟಿ ಪುತ್ರಿ
ಶ್ರೀನಗರ ಕಿಟ್ಟಿ-ಭಾವನಾ ಪುತ್ರಿ ಪರಿಣಿತಾ 'ಲೀಡರ್' ಚಿತ್ರದಲ್ಲಿ ಶಿವಣ್ಣನ ಮಗಳ ಪಾತ್ರ ನಿರ್ವಹಿಸಲಿದ್ದಾರೆ.

'ಲೀಡರ್' ಕುರಿತು....
ಇಂಟ್ರೆಸ್ಟಿಂಗ್ ಕಥಾಹಂದರ ಹೊಂದಿರುವ 'ಲೀಡರ್' ಚಿತ್ರಕ್ಕೆ 'ರೋಸ್' ಖ್ಯಾತಿಯ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳಲಿದ್ದಾರೆ. ತರುಣ್ ಶಿವಣ್ಣ ಬಂಡವಾಳ ಹೂಡಲಿದ್ದಾರೆ.


Click it and Unblock the Notifications











