»   » 'ಮಾಸ್ ಲೀಡರ್' ಚಿತ್ರದ ನೈಜಕಥೆ ಬಹಿರಂಗ!

'ಮಾಸ್ ಲೀಡರ್' ಚಿತ್ರದ ನೈಜಕಥೆ ಬಹಿರಂಗ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರ ಭರ್ಜರಿ ಆಗಿ ಶೂಟಿಂಗ್ ಮುಗಿಸಿ ಈಗ ಸಾಂಗ್ ಮೇಕಿಂಗ್ ನಲ್ಲಿ ತೊಡಗಿಕೊಂಡಿದೆ.

ರೋಸ್ ಖ್ಯಾತಿಯ ಸಹನಾ ಮೂರ್ತಿ (ನರಸಿಂಹ) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹಲವು ಸರ್ಪ್ರೈಸ್ ಗಳೊಂದಿಗೆ ಚಿತ್ರವನ್ನ ತಯಾರು ಮಾಡುತ್ತಿದ್ದಾರೆ. 'ಮಾಸ್ ಲೀಡರ್' ಚಿತ್ರದ ಕಥೆ ಏನು ಎಂಬುದನ್ನ ಎಲ್ಲೂ ಬಿಟ್ಟುಕೊಡದ ಚಿತ್ರತಂಡ, ಶಿವಣ್ಣನ ಹಲವು ಗೆಟಪ್ ಗಳಿಂದ ಸುದ್ದಿ ಮಾಡುತ್ತಿದೆ. ಆರ್ಮಿ ಆಫೀಸರ್ ಆಗಿ ಕಾಶ್ಮೀರದಲ್ಲಿ ಅಬ್ಬರಿಸಿರುವ ಶಿವಣ್ಣ ಮತ್ತೊಂದೆಡೆ ಗನ್ ಹಿಡಿದು ಡಾನ್ ಶೇಡ್ ನಲ್ಲಿ ಘರ್ಜಿಸಿದ್ದಾರೆ.

ಶಿವಣ್ಣನ 'ಲೀಡರ್' ಚಿತ್ರದ ಫಸ್ಟ್‌ ಲುಕ್ ರಿಲೀಸ್

ನಿಜಕ್ಕೂ 'ಮಾಸ್ ಲೀಡರ್' ಚಿತ್ರದಲ್ಲಿ ಶಿವಣ್ಣನ ಪಾತ್ರವೇನು? ಚಿತ್ರದ ಅಸಲಿ ಕಥೆ ಏನು ಎಂಬುದು ಕುತೂಹಲ ಹುಟ್ಟಿಸಿರುವ ಸಂಗಂತಿ. ಅದಕ್ಕೆಲ್ಲಾ ಉತ್ತರ ಸಿಕ್ಕಿದ್ದು, 'ಮಾಸ್ ಲೀಡರ್' ನ ರಿಯಲ್ ಕಥೆ ಮುಂದೆ ಓದಿ.....

ಶಿವಣ್ಣ ಆರ್ಮಿ ಆಫೀಸರ್

'ಮಾಸ್ ಲೀಡರ್' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೀರಯೋಧನ ಪಾತ್ರವನ್ನ ನಿರ್ವಹಿಸಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.

'ಲೀಡರ್' ನಲ್ಲಿ ಶಿವಣ್ಣ ನ ಪಾತ್ರ ಏನು ಗೊತ್ತೇ?

ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಕಥೆ

'ಮಾಸ್ ಲೀಡರ್' ಚಿತ್ರದ ಪ್ರಧಾನ ಕಥಾವಸ್ತು ಡ್ರಗ್ಸ್ ಮಾಫಿಯಾ. ಈ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ನಾಯಕನಾಗಿ ಶಿವಣ್ಣ ಅಬ್ಬರಿಸಿದ್ದಾರೆ.

ಕಾಶ್ಮೀರದಲ್ಲಿ ಶಿವಣ್ಣನ 'ಲೀಡರ್' ಚಿತ್ರೀಕರಣ

ವಿದೇಶಗಳಲ್ಲಿ ಕಥೆ ಸಾಗುತ್ತೆ

ಬಾಂಗ್ಲಾದೇಶದಿಂದ ವಲಸೆ ಬಂದವರು ಭಾರತದಲ್ಲಿ ಡ್ರಗ್ಸ್ ಮಾಫಿಯಾ ನಡೆಸುತ್ತಾರೆ. ಅದರ ವಿರುದ್ಧ 'ಲೀಡರ್' ಸಮರ ಸಾರುತ್ತಾನೆ. ಕೊಲ್ಕತ್ತಾ, ಕತಾರ್, ಕಾಶ್ಮೀರದಲ್ಲಿ ಚಿತ್ರದ ಕಥೆ ಸಾಗುತ್ತೆ.

'ಕತಾರ್'ನಲ್ಲಿ ಪ್ರಣಿತಾ ಜೊತೆ ಹ್ಯಾಟ್ರಿಕ್ ಹೀರೋ ಡ್ಯುಯೆಟ್

ದೇಶಪ್ರೇಮದ ನೆರಳಿದೆ

ಅಂದ್ಹಾಗೆ, ಇದು ಕೇವಲ ಡ್ರಗ್ಸ್ ಮಾಫಿಯಾ ದಂಧೆಯ ಕುರಿತು ಮಾತ್ರ ಮಾಡಿರುವ ಸಿನಿಮಾವಲ್ಲ. ಇದರಲ್ಲಿ ದೇಶಪ್ರೇಮದ ಸಾರಂಶ ಕೂಡ ಹೊಂದಿದೆಯಂತೆ.

ಹಾಡಿನ ಚಿತ್ರೀಕರಣ

ಸದ್ಯ, 'ಮಾಸ್ ಲೀಡರ್' ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಮಿನರ್ವ್ ಮಿಲ್ ನಲ್ಲಿ ಚಿತ್ರದ ಇಂಟ್ರೊಡಕ್ಷನ್ ಹಾಡನ್ನ ಚಿತ್ರೀಕರಿಸುತ್ತಿದೆ. ಈ ಹಾಡಿನಲ್ಲಿ ಶಿವಣ್ಣ ಸಖತ್ ಸ್ಟೈಲಿಶ್ ಹಾಗೂ ಡಿಫ್ರೆಂಟ್ ಆಗಿ ಕಾಣಿಸಿಕೊಂಡಿದ್ದು, ಈ ಹಿಂದಿನ ಇಂಟ್ರೊಡಕ್ಷನ್ ಹಾಡುಗಳಿಗಿಂತ ಇದು ಹೊಸತನದಿಂದ ಕೂಡಿದೆಯಂತೆ.

'ಲೀಡರ್' ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್

ದೊಡ್ಡ ತಾರಬಳಗ

ಶಿವರಾಜ್ ಕುಮಾರ್ ಗೆ ಚಿತ್ರದಲ್ಲಿ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ನಾಯಕಿಯಾಗಿದ್ದಾರೆ. ಉಳಿದಂತೆ ಲೂಸ್ ಮಾದ ಯೋಗೀಶ್, ವಿಜಯ ರಾಘವೇಂದ್ರ, ಗುರು ಜಗ್ಗೇಶ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ತರುಣ್ ಶಿವಪ್ಪ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

English summary
Kannada Actor Shiva Rajkumar Starrer Kannada Movie 'Maas Leader' Story is Revealed. Read the article to know 'Maas Leader' Movie story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada