»   » ಶಿವರಾಜ್ ಕುಮಾರ್ ಅಭಿನಯದ ಮುಂದಿನ ಚಿತ್ರದ ಹೆಸರು 'ಎಸ್.ಆರ್.ಕೆ'

ಶಿವರಾಜ್ ಕುಮಾರ್ ಅಭಿನಯದ ಮುಂದಿನ ಚಿತ್ರದ ಹೆಸರು 'ಎಸ್.ಆರ್.ಕೆ'

Posted By:
Subscribe to Filmibeat Kannada
ಶಿವರಾಜ್ ಕುಮಾರ್ ರವರ ಮುಂದಿನ ಸಿನಿಮಾದ ಹೆಸರು ಎಸ್ ಆರ್ ಕೆ | Filmibeat Kannada

'ಮಂತ್ರಿ ಸ್ಕ್ವೈರ್' ಮಾಲ್ ನಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಸಂಭ್ರಮದ ನಡುವೆಯೇ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ನೂತನ ಚಿತ್ರ 'ಎಸ್.ಆರ್.ಕೆ' ಶೀರ್ಷಿಕೆ ಅನಾವರಣಕ್ಕೆ ವೇದಿಕೆಯಾಯಿತು.

ನಟ ಶಿವರಾಜ್ ಕುಮಾರ್ ಅವರೇ ಚಿತ್ರದ ಪೋಸ್ಟರ್ ನ ಅನಾವರಣಗೊಳಿಸಿದರು. ಇದೇ ಚಿತ್ರದ ಮೂಲಕ ಶಿವಣ್ಣ ಸಂಬಂಧಿ ಲಕ್ಕಿ ಗೋಪಾಲ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

Shiva Rajkumar starrer New Movie is titled as 'SRK'

'ದೊಡ್ಮನೆ'ಯ ದೊಡ್ಡ ಸುದ್ದಿ: ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದ ರಾಜ್ ಕುಟುಂಬದ ಕುಡಿ!

ಆಕರ್ಷಕ, ವೈವಿಧ್ಯ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಸೇರಿದಂತೆ ಶಿವಣ್ಣನ ಕುಟುಂಬದ ಸದಸ್ಯರು ಮತ್ತು ಕನ್ನಡ ಚಲನಚಿತ್ರ ಕ್ಷೇತ್ರದ ಪ್ರಮುಖರು ಹಾಜರಿದ್ದರು. 'ಎಸ್.ಆರ್.ಕೆ' ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈ ಚಿತ್ರವು ಸಾಮಾಜಿಕ ಸಂದೇಶವನ್ನು ಒಳಗೊಳ್ಳಲಿದೆ.

Shiva Rajkumar starrer New Movie is titled as 'SRK'

ಶಿವಣ್ಣನ ಹೊಸ ಚಿತ್ರದ ಮುಹೂರ್ತಕ್ಕೆ 'ದೊಡ್ಮನೆ' ಅತಿಥಿಗಳು.! ಯಾರದು?

ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಚಿತ್ರದ ಶೀರ್ಷಿಕೆಯು ಶಿವರಾಜ್ ಕುಮಾರ್ ಅವರ ಹೆಸರು 'ಎಸ್.ಆರ್.ಕೆ' ಅನ್ನೇ ಬಿಂಬಿಸಲಿದ್ದು, ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

English summary
Shiva Rajkumar starrer New Movie is titled as 'SRK' directed by Lucky Gopal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X