'ಟಗರು' ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ: ಈಗಲೇ ಬುಕ್ ಮಾಡಿಕೊಳ್ಳಿ...
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರ ಫೆಬ್ರವರಿ 23 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. 'ಟಗರು' ರಿಲೀಸ್ ಆಗಲು ಇನ್ನೂ ಆರು ದಿನ ಟೈಮ್ ಇದೆ. ಆದರೂ, ಈಗಲೇ ಟಿಕೆಟ್ ಬುಕ್ಕಿಂಗ್ ಓಪನ್ ಮಾಡಲಾಗಿದೆ.
ಹೌದು, ಬುಕ್ ಮೈ ಶೋ ವೆಬ್ ತಾಣದಲ್ಲಿ 'ಟಗರು' ಚಿತ್ರದ ಬುಕ್ಕಿಂಗ್ ತೆರೆಯಲಾಗಿದೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್ ನ 'ಟಗರು' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎಂಬ ಆಸೆ ನಿಮಗೆ ಇದ್ದರೆ ಈಗಲೇ ಟಿಕೆಟ್ ಬುಕ್ ಮಾಡಿಬಿಡಿ.
ಇನ್ನೂ ಆರು ದಿನ ಟೈಮ್ ಇದ್ಯಾಲ್ಲ ಅಂತ ನಿರ್ಲಕ್ಷ್ಯ ಮಾಡಿದ್ರೆ, ನಿಮಗೆ ನಿರಾಸೆ ಗ್ಯಾರೆಂಟಿ. ಯಾಕಂದ್ರೆ, 'ಬುಕ್ ಮೈ ಶೋ' ತಾಣದಲ್ಲಿ 'ಟಗರು' ಟಿಕೆಟ್ ಗಳು ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಸೇಲ್ ಆಗ್ತಿದೆ ಕಣ್ರೀ...

'ಟಗರು' ಬುಕ್ಕಿಂಗ್ ಓಪನ್
ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಸಿನಿಮಾ 'ಟಗರು'. ಖಡಕ್ ಪಾತ್ರದಲ್ಲಿ ಶಿವಣ್ಣ ನಟಿಸಿರುವ 'ಟಗರು' ಚಿತ್ರಕ್ಕಾಗಿ ವಾರದ ಮುಂಚೆಯೇ 'ಬುಕ್ ಮೈ ಶೋ' ವೆಬ್ ತಾಣದಲ್ಲಿ ಬುಕ್ಕಿಂಗ್ ಓಪನ್ ಮಾಡಲಾಗಿದೆ.

ಬೆಳಗ್ಗೆ 7 ಗಂಟೆಯಿಂದ ಶೋಗಳು ಶುರು
ಫೆಬ್ರವರಿ 23 ರಂದು ಬೆಳಗ್ಗೆ 7 ಗಂಟೆಯಿಂದಲೇ 'ಟಗರು' ಚಿತ್ರದ ಪ್ರದರ್ಶನ ಆರಂಭ ಆಗಲಿದೆ. ಪರಭಾಷೆಯ ಸಿನಿಮಾಗಳನ್ನೇ ಹೆಚ್ಚಾಗಿ ಪ್ರದರ್ಶನ ಮಾಡುವ ಬ್ರಿಗೇಡ್ ರೋಡ್ ನ ರೆಕ್ಸ್ ನಲ್ಲಿಯೂ ಮುಂಜಾನೆ 7 ಗಂಟೆಯಿಂದಲೇ 'ಟಗರು' ಶೋ ಶುರು ಆಗಲಿದೆ.

ಆಗಲೇ ಫುಲ್ ಆಗುತ್ತಿದೆ ಸ್ವಾಮಿ.!
ಬುಕ್ಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಕಮಲಾ ನಗರದ ವೀರಭದ್ರೇಶ್ವರ ಚಿತ್ರಮಂದಿರ ಹಾಗೂ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರ ಬಹುತೇಕ ಭರ್ತಿ ಆಗಿದೆ. ಅಂದ್ರೆ, ನೀವೇ ಊಹಿಸಿ 'ಟಗರು' ಕ್ರೇಜ್ ಹೇಗಿದೆ ಅಂತ.!

'ಟಗರು' ಚಿತ್ರದ ಕುರಿತು...
'ಟಗರು' ಮೈಯೆಲ್ಲ ಪೊಗರು... ಚಿತ್ರದಲ್ಲಿ ಶಿವರಾಜ್ ಕುಮಾರ್ ಖಡಕ್ ಆಗಿ ಕಾಣಿಸಿಕೊಂಡಿದ್ದರೆ, ವಿಲನ್ ಪಾತ್ರಗಳಲ್ಲಿ ಧನಂಜಯ್, ವಸಿಷ್ಟ ಸಿಂಹ ಅಭಿನಯಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಸೂರಿ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











