»   » ಹುಶಾರು..ಇದು ಪೊಗರು ತುಂಬಿರೋ 'ಟಗರು'

ಹುಶಾರು..ಇದು ಪೊಗರು ತುಂಬಿರೋ 'ಟಗರು'

Posted By:
Subscribe to Filmibeat Kannada

ನಿರ್ದೇಶಕ ದುನಿಯಾ ಸೂರಿ ಅವರು ಸದ್ಯಕ್ಕೆ 'ದೊಡ್ಮನೆ ಹುಡುಗ' ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿ, ಇದೀಗ 'ಟಗರು-ಮೈಯೆಲ್ಲಾ ಪೊಗರು' ಚಿತ್ರದ ಕೆಲಸಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ.

ಈಗಾಗಲೇ ಚಿತ್ರದ ಮುಹೂರ್ತಕ್ಕೆ ದಿನಗಣನೆ ಶುರುವಾಗಿದೆ. ಭಾನುವಾರ (ಆಗಸ್ಟ್ 21) ದಂದು, ಬೆಳಗ್ಗೆ 9 ಗಂಟೆಗೆ, ಬಂಡೆ ಮಹಾಕಾಳಿ ದೇವಸ್ಥಾನ, ಗವಿಪುರಂ ಗುಟ್ಟವಳ್ಳಿ, ಬಸವನಗುಡಿ ಬೆಂಗಳೂರಿನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.['ದೊಡ್ಮನೆ ಹುಡುಗ' ಬಂದ ತಕ್ಷಣ 'ಟಗರು' ಪಳಗಿಸ್ತಾರಾ ಸೂರಿ.?]


ಅಂದಹಾಗೆ ಈ ಸಿನಿಮಾದಲ್ಲಿ ಹಲವಾರು ವಿಶೇಷತೆಗಳಿವೆ. ಜೊತೆಗೆ ಪ್ರಮುಖ ಘಟಾನುಘಟಿಗಳು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಸಾಥ್ ಕೊಟ್ಟಿದ್ದಾರೆ.


'ಕೆಂಡಸಂಪಿಗೆ' ಬೆಡಗಿ ನಟಿ ಮಾನ್ವಿತ ಹರೀಶ್ ಅವರು ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ನಟ ಧನಂಜಯ್ ಅವರು ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ವಿಲನ್ ಆಗಿ ಮಿಂಚುತ್ತಿದ್ದಾರೆ.


ಧನಂಜಯ್ ಅವರನ್ನು ಇಷ್ಟು ದಿನ ಹೀರೋ ಆಗಿ ನೋಡಿದ್ದ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಅವರ ವಿಲನ್ ಲುಕ್ ಗೆ ಕಾತರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಸೂರಿ ಅವರು ಕೆಲವು ಪೋಸ್ಟರ್ ಗಳನ್ನು ರಿಲೀಸ್ ಮಾಡಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.[ಎಕ್ಸ್ ಕ್ಲ್ಯೂಸಿವ್: ಗುಮ್ಮೋ 'ಟಗರಿಗೆ' ಎದುರಾಗಿ ನಿಂತ ಧನಂಜಯ್]


ಖಳನಟನಾಗಿ ಖ್ಯಾತಿ ಪಡೆದ ವಸಿಷ್ಠ ಎನ್ ಸಿಂಹ, ಧನಂಜಯ್ ಮತ್ತು ಶಿವಣ್ಣ ಅವರ 'ಟಗರು' ಚಿತ್ರದ ಕಲರ್ ಫುಲ್ ಪೋಸ್ಟರ್ ಗಳನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...


ಶಿವಣ್ಣನ ಖಡಕ್ ಲುಕ್

ಈ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಶಿವಣ್ಣ ಅವರ 'ಟಗರು' ಟ್ಯಾಟೂ ತುಂಬಾ ಹೈಲೈಟ್ ಆಗಿದೆ. ತುಂಬಾ ವಿಭಿನ್ನವಾಗಿರುವ ಈ ಪೋಸ್ಟರ್ ನೋಡುತ್ತಿದ್ದರೆ, ಶಿವರಾಜ್ ಕುಮಾರ್ ಅವರು ತುಂಬಾ ಖಡಕ್ ರೋಲ್ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ.[ಸೂರಿ 'ಟಗರಿ'ಗೆ ಟಕ್ಕರ್ ನೀಡಲು ಬಂದ 'ಸಿಂಹ'!]


ಧನಂಜಯ್-ವಸಿಷ್ಠ

'ಡೈರೆಕ್ಟರ್ ಸ್ಪೆಷಲ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಧನಂಜಯ್ ಅವರು ತಲೆ ತುಂಬಾ ಗುಂಗುರ ಕೂದಲಿಟ್ಟುಕೊಂಡು ಸ್ಟೈಲಿಷ್ ಲುಕ್ ಮೂಲಕ ಒಂಥರಾ ಚೆಂದ ಕಾಣಿಸುತ್ತಿದ್ದರು. ಇದೀಗ 'ಟಗರು' ಚಿತ್ರದ ವಿಲನ್ ಪಾತ್ರಕ್ಕಾಗಿ ಅವರ ಕೂದಲಿಗೆ ಕತ್ತರಿ ಬಿದ್ದಿದೆ. ಆದರೂ ಒಂಥರಾ ಡಿಫರೆಂಟ್ ಲುಕ್ ನಲ್ಲಿ ಚೆನ್ನಾಗೇ ಕಾಣಿಸುತ್ತಿದ್ದಾರೆ. ಇನ್ನು ವಸಿಷ್ಠ ಅವರು ಎಂದಿನಂತೆ ಕ್ಯೂಟ್ ಲುಕ್ ನಲ್ಲಿದ್ದಾರೆ.


ಲಾಂಗ್ ಹಿಡಿದ ಶಿವಣ್ಣ

'ಜೋಗಿ' ಚಿತ್ರದಲ್ಲಿ ಲಾಂಗ್ ಹಿಡಿದು ಫೇಮಸ್ ಆಗಿದ್ದ ಶಿವಣ್ಣ ಅವರು ಇದೀಗ ಮತ್ತೆ 'ಟಗರು' ಮೂಲಕ ಬೇಡ-ಬೇಡ ಅಂದ್ರೂ ಲಾಂಗ್ ಹಿಡಿಯುತ್ತಿದ್ದಾರೆ.


ಮುದ್ದು ಬೆಡಗಿ ಮಾನ್ವಿತ

'ಕೆಂಡಸಂಪಿಗೆ' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮುದ್ದು ಮುಖದ ಚೆಲುವೆ ಮಾನ್ವಿತ ಹರೀಶ್ ಅವರು ಮತ್ತೆ ಸೂರಿ ಅವರ ಚಿತ್ರದ ಮೂಲಕ ಎರಡನೇ ಪ್ರಾಜೆಕ್ಟ್ ಶುರು ಮಾಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಮಾನ್ವಿತಾ ಅವರು ಶಿವಣ್ಣ ಅವರ ಜೊತೆ ಚೆಸ್ ಆಡುತ್ತಿದ್ದಾರೆ.['ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ]


ಈ ತಿಂಗಳಾಂತ್ಯಕ್ಕೆ ಟಗರಿನ ಪೊಗರು ಶುರು

ಇದೇ ಭಾನುವಾರ ಮುಹೂರ್ತ ನೆರವೇರಿಸಿಕೊಂಡು, ಈ ತಿಂಗಳಾಂತ್ಯದಿಂದ ಟಗರು ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿತ್ರಕ್ಕೆ ಕೆ.ಪಿ ಶ್ರೀಕಾಂತ್ ಅವರು ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.


English summary
Kannada Actor Shiva Rajkumar starrer Kannada Movie ''Tagaru- Maiyella Pogaru" muhurat is scheduled on August 21st at Bande Mahakali temple Gavipuram Bengaluru. The movie features Actor Dhananjay, Actress Manvitha Harish, Kannada Actor Vasishta N.Simha And is directed by Duniya Soori.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada