ಕಬ್ಜದಲ್ಲಿ ಕಿಚ್ಚ, ಉಪ್ಪಿ ಜತೆ ಶಿವಣ್ಣನೂ ಇರಲಿದ್ದಾರೆ! ಟೀಸರ್‌ನಲ್ಲೇ ಒಟ್ಟಿಗೆ ಕಾಣಿಸಿಕೊಂಡಿದ್ರಾ ತ್ರಿಮೂರ್ತಿಗಳು?

ಕಬ್ಜ.. ಈ ವರ್ಷ ಅತಿಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವ ಕನ್ನಡದ ಚಿತ್ರಗಳಲ್ಲಿ ಸದ್ಯ ಮುಂಚೂಣಿಯಲ್ಲಿರುವ ಚಿತ್ರ. ಪರಭಾಷಾ ಸಿನಿ ರಸಿಕರು ಇದ್ಯಾರು ಗುರೂ, ಕೆಜಿಎಫ್ ರೇಂಜಿಗೆ ಸಿನಿಮಾ ಮಾಡಿದ್ದಾರೆ ಎಂದು ಮಾತನಾಡುವಂತೆ ರಿಚ್ ಅಗಿ ಸಿನಿಮಾವನ್ನು ಕಟ್ಟಿದೆ ಕಬ್ಜ ಚಿತ್ರತಂಡ.

ಇನ್ನು ಕಳೆದ ಮೂರು ವರ್ಷಗಳಿಂದಲೂ ನಿರೀಕ್ಷೆಯನ್ನು ಹುಟ್ಟುಹಾಕುತ್ತಾ ಬಂದಿರುವ ಕಬ್ಜ ಚಿತ್ರತಂಡ ತನ್ನ ಪೋಸ್ಟರ್ ಕ್ವಾಲಿಟಿಯಿಂದ ಸಿನಿ ರಸಿಕರು ಚರ್ಚೆಸುವಂತೆ ಮಾಡಿತ್ತು. ಅದರಲ್ಲಿಯೂ ನಾಲ್ಕು ತಿಂಗಳುಗಳ ಹಿಂದೆ ಬಿಡುಗಡೆಯಾದ ಚಿತ್ರದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರದ ಟೀಸರ್ ಕಟ್ ಮಾಡಿದ್ದ ರೀತಿ, ಟೀಸರ್ ಕ್ವಾಲಿಟಿ, ಟೀಸರ್‌ನಲ್ಲಿ ಇದ್ದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಿನಿ ರಸಿಕರಲ್ಲಿದ್ದ ನಿರೀಕ್ಷೆಯನ್ನು ಹೆಚ್ಚಿಸಿತ್ತು.

ಟೀಸರ್ ನೋಡಿದ ಹಲವಾರು ಮಂದಿ ಇದನ್ನು ಬೃಹತ್ ಚಿತ್ರ ಕೆಜಿಎಫ್ ಜತೆ ಹೋಲಿಸಿ ಚರ್ಚಿಸಲು ಆರಂಭಿಸಿದ್ದರು. ಇನ್ನು ಸ್ವತಃ ನಿರ್ದೇಶಕ ಆರ್ ಚಂದ್ರು ಹಲವಾರು ಬಾರಿ ಈ ಚಿತ್ರ ಮಾಡಲು ಕೆಜಿಎಫ್ ಚಿತ್ರವೇ ತನಗೆ ಪ್ರೇರಣೆ ಎಂಬುದನ್ನು ಹೇಳಿಕೊಂಡಿದ್ದರೂ ಸಹ. ಹೀಗೆ ಹಲವಾರು ಅಂಶಗಳಿಂದ ಸುದ್ದಿಯಾಗಿದ್ದ ಈ ಚಿತ್ರದಲ್ಲಿ ನಾಯಕ ರಿಯಲ್ ಸ್ಟಾರ್ ಉಪೇಂದ್ರ ಜತೆಗೆ ಮತ್ತೋರ್ವ ಸ್ಟಾರ್ ನಟ ಕಿಚ್ಚ ಸುದೀಪ್ ನಟಿಸಲಿದ್ದಾರೆ ಎಂಬುದೂ ಸಹ ಎಕ್ಸೈಟ್‌ಮೆಂಟ್ ಅನ್ನು ಹೆಚ್ಚಿಸಿತ್ತು. ಈ ಎಕ್ಸೈಟ್‌ಮೆಂಟ್ ಈಗ ತ್ರಿಬಲ್ ಆಗುವಂತೆ ಮಾಡಿದೆ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಸಹ ನಟಿಸಿದ್ದಾರೆ ಎಂದು ಹರಿದಾಡುತ್ತಿರುವ ವಿಷಯ.

ಈ ಹೇಳಿಕೆ ನೀಡಿದ್ರು ಪ್ರಿಯಾಂಕಾ ಉಪೇಂದ್ರ

ಈ ಹೇಳಿಕೆ ನೀಡಿದ್ರು ಪ್ರಿಯಾಂಕಾ ಉಪೇಂದ್ರ

ಕಬ್ಜ ಚಿತ್ರದಲ್ಲಿ ನಟ ಶಿವ ರಾಜ್‌ಕುಮಾರ್ ಸಹ ನಟಿಸಿದ್ದಾರೆ ಎಂಬ ವಿಷಯವನ್ನು ಮೊದಲು ಬಹಿರಂಗಪಡಿಸಿದ್ದೇ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ. ಹೌದು, ಜೀ ಕನ್ನಡ ವಾಹಿನಿಯೊಂದಿಗೆ ಮಾತನಾಡಿದ್ದ ಪ್ರಿಯಾಂಕಾ ಉಪೇಂದ್ರ ಕಬ್ಜ ಚಿತ್ರದ ಕೆಲ ದೃಶ್ಯಗಳನ್ನು ನೋಡಿದೆ, ಇದರಲ್ಲಿ ಎಲ್ಲರೂ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ, ಉಪೇಂದ್ರ ಅವರು, ಸುದೀಪ್ ಅವರು ಹಾಗೂ ಶಿವ ರಾಜ್‌ಕುಮಾರ್ ಸಹ ಇದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ರು. ಈ ಹೇಳಿಕೆ ಗೊಂದಲ ಮೂಡಿಸಿತ್ತು. ಅರೇ ಇದೇನಪ್ಪ ಕಬ್ಜ ಚಿತ್ರದಲ್ಲಿ ಶಿವಣ್ಣ ಇದ್ದಾರೆ ಅಂತ ಹೇಳ್ತಾ ಇದ್ದಾರಲ್ಲ ಎಂದು ಗೊಂದಲಕ್ಕೊಳಗಾದ ಸಿನಿ ರಸಿಕರಲ್ಲಿ ನಿರೀಕ್ಷೆ ಸಹ ಹೆಚ್ಚಾಗಿತ್ತು.

ಟೀಸರ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರಾ ತ್ರಿಮೂರ್ತಿಗಳು?

ಟೀಸರ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರಾ ತ್ರಿಮೂರ್ತಿಗಳು?

ಇನ್ನು ಪ್ರಿಯಾಂಕಾ ಉಪೇಂದ್ರ ಅವರ ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಚಿತ್ರದ ಟೀಸರ್‌ನಲ್ಲಿನ ದೃಶ್ಯವೊಂದರ ಕಡೆ ಸಿನಿ ರಸಿಕರು ಗಮನ ಹರಿಸಿದ್ದು, ಪ್ರಿಯಾಂಕಾ ಅವರ ಹೇಳಿಕೆ ನಿಜ ಎಂದು ಮಾತನಾಡಿಕೊಳ್ತಿದ್ದಾರೆ. ಹೌದು, ಟೀಸರ್‌ನಲ್ಲಿ ಉಪೇಂದ್ರ ಅಕ್ಕಪಕ್ಕ ಇಬ್ಬರು ನಡೆದುಕೊಂಡು ಹೋಗುವ ದೃಶ್ಯದ ಹಿಂಬದಿಯ ಚಿತ್ರಣವಿದೆ. ಇದರಲ್ಲಿ ಉಪೇಂದ್ರ ಎಡಭಾಗದಲ್ಲಿ ಇರುವ ವ್ತಕ್ತಿ ಸುದೀಪ್ ರೀತಿ ಇದ್ದು, ಬಲಭಾಗದಲ್ಲಿರುವ ವ್ಯಕ್ತಿ ಶಿವ ರಾಜ್‌ಕುಮಾರ್ ರೀತಿ ಇದ್ದಾರೆ. ಈ ದೃಶ್ಯವನ್ನು ಈಗ ಗಮನಿಸಿರುವ ಸಿನಿ ರಸಿಕರು ತ್ರಿಮೂರ್ತಿಗಳು ಒಟ್ಟಿಗೆ ಕಾಣಿಸಿಕೊಂಡಿದ್ರಾ ಎಂದು ಅನುಮಾನ ಹೊರಹಾಕಿದ್ದಾರೆ.

ಈ ವಿಷಯ ನಿಜವಾದ್ರೆ ಚಿತ್ರಮಂದಿರಗಳು ಸ್ಟೇಡಿಯಂ ಆಗುವುದು ಪಕ್ಕಾ!

ಈ ವಿಷಯ ನಿಜವಾದ್ರೆ ಚಿತ್ರಮಂದಿರಗಳು ಸ್ಟೇಡಿಯಂ ಆಗುವುದು ಪಕ್ಕಾ!

ಹೀಗೆ ಈ ಮೂವರು ಸ್ಟಾರ್ ನಟರು ಒಟ್ಟಿಗೆ ನಟಿಸಿದ್ದಾರೆ ಎಂಬ ಅನುಮಾನ ಹೆಚ್ಚಾಗಿದ್ದು, ಒಂದುವೇಳೆ ಈ ಸುದ್ದಿ ನಿಜವಾಗಿ ಮೂವರೂ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡರೆ ಚಿತ್ರಮಂದಿರಗಳು ಕ್ರಿಕೆಟ್ ಮೈದಾನವಾಗುವುದಂತೂ ಪಕ್ಕಾ. ಈ ಹಿಂದೆ ಶಿವಣ್ಣ - ಸುದೀಪ್ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಶಿವಣ್ಣ - ಉಪ್ಪಿ ಸಹ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಉಪ್ಪಿ - ಕಿಚ್ಚ ಸಹ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮೂವರೂ ಒಂದೇ ಚಿತ್ರದಲ್ಲಿ ನಟಿಸಿರಲಿಲ್ಲ. ಈ ಮಹಾ ಸಂಗಮ ಕಬ್ಜ ಮೂಲಕ ನಡೆದರೆ ಆ ಅಂಶ ಚಿತ್ರಕ್ಕೆ ಮತ್ತಷ್ಟು ಹೈಪ್ ನೀಡುವುದಂತೂ ಖಚಿತ.

More from Filmibeat

English summary
Shiva Rajkumar, Sudeep and Upendra likely to share screen together in Kabzaa film. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X