ಮತ್ತೊಮ್ಮೆ ಗುಮ್ಮೋಕೆ ಬಂದ 'ಟಗರು' ಶಿವ
Recommended Video

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಟಗರು' ಯಶಸ್ವಿ 25 ವಾರಗಳನ್ನ ಪೂರೈಸಿ ವರ್ಷದ ಹಿಟ್ ಸಿನಿಮಾ ಎನಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಶಿವಣ್ಣನ 'ದಿ ಬೆಸ್ಟ್' ಸಿನಿಮಾಗಳಲ್ಲಿ ಟಗರು ಟಾಪ್ ನಲ್ಲಿದೆ.
ಈ ಸಿನಿಮಾ ಬಿಡುಗಡೆಯಾಗಿ ಆರೇಳು ತಿಂಗಳು ಕಳೆದಿದೆ. ಈಗಲೂ ಟಗರು ಶಿವನ ಹವಾ ಮಾತ್ರ ಕಮ್ಮಿಯಾಗಿಲ್ಲ. ಟಗರು ಚಿತ್ರದ ಡೈಲಾಗ್ ಮತ್ತು ಹಾಡುಗಳು ಈಗಲೂ ಸದ್ದು ಮಾಡುತ್ತಿವೆ.
ವಿಷ್ಯ ಏನಪ್ಪಾ ಅಂದ್ರೆ, ಈ ಟಗರು ಆಗಾಗ ಗುಮ್ಮೋಕೆ ಬರ್ತಾನೆ ಇದೆ. ಸಮಯ ಸಿಕ್ಕಾಗೆಲ್ಲಾ ಚಿತ್ರಮಂದಿರಗಳಲ್ಲಿ ಟಗರು ಸಿನಿಮಾ ಪ್ರದರ್ಶನ ಮಾಡೋ ಮನಸ್ಸು ಮಾಡ್ತಿದ್ದಾರೆ ಚಿತ್ರಮಂದಿರ ಮಾಲೀಕರು.

ಇತ್ತೀಚಿಗಷ್ಟೆ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಟಗರು ಸಿನಿಮಾವನ್ನ ರೀ ರಿಲೀಸ್ ಮಾಡಿದ್ದರು. ಈಗ ಮೆಜಿಸ್ಟಿಕ್ ನಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಮರು ಬಿಡುಗಡೆಯಾಗಿದೆ. ಇಂದಿನಿಂದ ಪ್ರತಿ ದಿನ ನಾಲ್ಕು ಶೋ ಟಗರು ಸಿನಿಮಾ ಪ್ರದರ್ಶನವಾಗಲಿದೆ.

ಅಂದ್ಹಾಗೆ, ಈ ವಾರ ಕನ್ನಡದಲ್ಲಿ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಹೀಗಾಗಿ, ಟಗರು ಸಿನಿಮಾನ ಪ್ರದರ್ಶನ ಮಾಡುತ್ತಿದ್ದಾರೆ. ಮುಂದಿನ ವಾರ ಸಂತೋಷ್ ಚಿತ್ರಮಂದಿರದಲ್ಲಿ ರಾಗಿಣಿ ಅಭಿನಯದ 'ದಿ ಟೆರರಿಸ್ಟ್' ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನುಳಿದಂತೆ ದುನಿಯಾ ಸೂರಿ ನಿರ್ದೇಶನ ಮಾಡಿದ್ದ ಟಗರು ಚಿತ್ರದಲ್ಲಿ ಶಿವರಾಜ್ ಕುಮಾರ್, ಧನಂಜಯ್, ವಸಿಷ್ಠ ಸಿಂಹ, ಮಾನ್ವಿತಾ ಹರೀಶ್, ಭಾವನಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.


Click it and Unblock the Notifications











