twitter
    For Quick Alerts
    ALLOW NOTIFICATIONS  
    For Daily Alerts

    ಊರ್ವಶಿ ಚಿತ್ರಮಂದಿರದಲ್ಲಿ ಟ್ರೆಂಡ್ ಬದಲಿಸಿದ ಟಗರು

    By Bharath Kumar
    |

    Recommended Video

    ಊರ್ವಿಶಿ ಚಿತ್ರಮಂದಿರದ ಟ್ರೆಂಡ್ ಬದಲಿಸಿದ ಟಗರು | Filmibeat Kannada

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ನಾಳೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹೀಗಾಗಿ, ಗಾಂಧಿನಗರದ ಯಾವುದೇ ಮೂಲೆಗೆ ಹೋದ್ರು ಟಗರು ಹವಾ ಜೋರಾಗಿದೆ. ಟಗರು ಪೋಸ್ಟರ್ ಗಳು ಮತ್ತು ಕಟೌಟ್ ಗಳು ಚಿತ್ರಮಂದಿರಗಳ ಬಳಿ ರಾರಾಜಿಸುತ್ತಿದೆ.

    ಹೀಗೆ, ರಿಲೀಸ್ ಗೂ ಮೊದಲೇ ಇಷ್ಟೆಲ್ಲಾ ಅಬ್ಬರ ಇಡುತ್ತಿರುವ 'ಟಗರು' ಲಾಲ್ ಬಾಗ್ ರಸ್ತೆಯಲ್ಲಿರುವ ಊರ್ವಶಿ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ಈ ಹಿನ್ನೆಲೆ ಊರ್ವಶಿ ಚಿತ್ರಮಂದಿರ ಸಂಪೂರ್ಣವಾಗಿ ಶಿವಣ್ಣನ ಕಟೌಟ್ ಗಳಿಂದ ಶೃಂಗಾರಗೊಂಡಿದೆ. ಡಾ ರಾಜ್ ಕುಮಾರ್ ಅವರ ಪೋಸ್ಟರ್ ಕೂಡ ಚಿತ್ರಮಂದಿರದ ಎದುರಲ್ಲೇ ಹಾಕಲಾಗಿದೆ. ಇದು ಒಂದು ರೀತಿಯಲ್ಲಿ ಸ್ಯಾಂಡಲ್ ವುಡ್ ಮಂದಿ ಖುಷಿ ಪಡುವ ವಿಚಾರ.

    ಟಗರು ದರ್ಶನಕ್ಕೆ ಮುಂಚೆ 'ಕಾಕ್ರೋಚ್', 'ಡಾಲಿ', 'ಚಿಟ್ಟೆ'ಯ ಹಿಸ್ಟರಿ ತಿಳಿದುಕೊಳ್ಳಿಟಗರು ದರ್ಶನಕ್ಕೆ ಮುಂಚೆ 'ಕಾಕ್ರೋಚ್', 'ಡಾಲಿ', 'ಚಿಟ್ಟೆ'ಯ ಹಿಸ್ಟರಿ ತಿಳಿದುಕೊಳ್ಳಿ

    ಯಾಕಂದ್ರೆ, ಊರ್ವಶಿ ಥಿಯೇಟರ್ ನಲ್ಲಿ ತುಂಬ ವಿರಳವಾಗಿ ಕನ್ನಡ ಸಿನಿಮಾಗಳು ಪ್ರದರ್ಶನವಾಗುತ್ತೆ. ತಮಿಳು ನಟ ರಜನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ವಿಜಯ್ ಸಿನಿಮಾಗಳಿಗೆ ಇಲ್ಲಿ ಬೇಡಿಕೆ ಹೆಚ್ಚಿದೆ. ಇವರು ಸಿನಿಮಾಗಳ ಬಂದ್ರೆ ಇಡೀ ಸಿನಿಮಾ ಮಂದಿರ ಮತ್ತು ಸುತ್ತಮುತ್ತಲಿನ ಕಟ್ಟಡಗಳು ಕೂಡ ಪೋಸ್ಟರ್ ಗಳಿಂದ ತುಂಬುತ್ತವೆ.

    Shiva rajkumar tagaru releasing in urvashi theater

    ಇದೀಗ, ಟಗರು ಚಿತ್ರದಿಂದ ಊರ್ವಶಿ ಚಿತ್ರಮಂದಿರದ ಬಳಿ ಕನ್ನಡ ಚಿತ್ರಕ್ಕೂ ಅದೇ ರೀತಿ ಟ್ರೆಂಡ್ ಆರಂಭವಾಗಿರುವುದು ನಿಜಕ್ಕೂ ಸಂತಸ ತಂದಿದೆ. ಸದ್ಯಕ್ಕೆ, ಇನ್ನು ಪೋಸ್ಟರ್ ಮತ್ತು ಕಟೌಟ್ ಗಳನ್ನ ಹಾಕಲಾಗುತ್ತಿದೆ. ಬಹುಶಃ ನಾಳೆ ಬೆಳಿಗ್ಗೆ ಊರ್ವಶಿ ಚಿತ್ರಮಂದಿರ ನೋಡೋಕೆ ಶಿವರಾಜ್ ಕುಮಾರ್ ಉತ್ಸವ ರೀತಿ ಶೃಂಗಾರವಾಗಿರಲಿದೆ.

    ಶಿವಣ್ಣನ 'ಟಗರು' ನೋಡೋಕು ಮುಂಚೆ ಈ 7 ಸಂಗತಿ ತಿಳಿದಿರಿಶಿವಣ್ಣನ 'ಟಗರು' ನೋಡೋಕು ಮುಂಚೆ ಈ 7 ಸಂಗತಿ ತಿಳಿದಿರಿ

    English summary
    Kannada actor Shiva Rajkumar's 'Tagaru' movie will be releasing in urvashi theater. The movie is directed by Duniya Suri.
    Thursday, February 22, 2018, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X