'ಬೈರಾಗಿ' ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಮಾತು: ಇದು ಪ್ಯಾನ್ ಇಂಡಿಯಾ ಸಿನಿಮಾನ?

ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಾಯಕ ನಟ ಯಾರಾದರೂ ಇದ್ದರೆ ಅದು ಶಿವರಾಜ್ ಕುಮಾರ್. ಯಾರ ಬಳಿಯೂ ಇಲ್ಲದಷ್ಟು ಸಿನಿಮಾ ಪ್ರಾಜೆಕ್ಟ್‌ಗಳು ಶಿವರಾಜ್ ಕುಮಾರ್ ಅವರನ್ನು ಅರಸಿ ಬರುತ್ತವೆ, ಪ್ರತಿದಿನ ಒಬ್ಬರಾದರೂ ಶಿವಣ್ಣನಿಗೆ ಕತೆ ಹೇಳಲು ಕಾಯುತ್ತಿರುತ್ತಾರಂತೆ. ಅಷ್ಟು ಬ್ಯುಸಿ ಶಿವರಾಜ್ ಕುಮಾರ್.

ಕಳೆದ ವರ್ಷ ಅಕ್ಟೋಬರ್ 29 ರಂದು ಬಿಡುಗಡೆ ಆದ 'ಭಜರಂಗಿ 2' ಸಿನಿಮಾದ ಬಳಿಕ ಶಿವಣ್ಣನ ಇನ್ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. 'ಭಜರಂಗಿ 2' ಸಿನಿಮಾ ಬಿಡುಗಡೆ ಆದ ದಿನವೇ ಪುನೀತ್ ರಾಜ್‌ಕುಮಾರ್ ಕಾಲವಾದ ಕಾರಣ ಆ ಸಿನಿಮಾ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಂಡಿರಲಿಲ್ಲ. ಹಾಗಾಗಿ ಶಿವಣ್ಣನ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಇದೀಗ ಶಿವರಾಜ್ ಕುಮಾರ್ ನಟನೆಯ 'ಬೈರಾಗಿ' ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ತಮಿಳಿನ ನಿರ್ದೇಶಕ ನಿರ್ದೇಶನ ಮಾಡಿರುವ ಈ ಸಿನಿಮಾದ ಬಗ್ಗೆ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ತಮ್ಮ ಸಿನಿಮಾ ಬಗ್ಗೆ ಶಿವಣ್ಣ ಸಹ ಖುಷಿಯಿಂದಲೇ ಮಾತನಾಡಿದ್ದಾರೆ.

'ಬೈರಾಗಿ' ಪ್ಯಾನ್ ಇಂಡಿಯಾ ಸಿನಿಮಾನ?

'ಬೈರಾಗಿ' ಪ್ಯಾನ್ ಇಂಡಿಯಾ ಸಿನಿಮಾನ?

ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್, ''ನನ್ನ ಮುಂದಿನ ಸಿನಿಮಾ 'ಬೈರಾಗಿ' ಎಂದಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಶಿವರಾಜ್ ಕುಮಾರ್, 'ಇಲ್ಲ ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಅಪ್ಪಟ ಕನ್ನಡದ ಸಿನಿಮಾ ಅಷ್ಟೆ'' ಎಂದಿದ್ದಾರೆ.

ಹುಲಿ ವೇಷ ಹಾಕುವವನ ಕತೆ 'ಬೈರಾಗಿ'

ಹುಲಿ ವೇಷ ಹಾಕುವವನ ಕತೆ 'ಬೈರಾಗಿ'

''ಬೈರಾಗಿ' ಹುಲಿ ವೇಷ ಹಾಕುವ ವ್ಯಕ್ತಿಯೊಬ್ಬನ ಕತೆ. ಜೊತೆಗೆ ಸಾಕಷ್ಟು ಭಾವನೆಗಳು ತುಂಬಿರುವ ಕತೆ. ಸಿನಿಮಾದಲ್ಲಿ ಹಲವು ಪಾತ್ರಗಳಿದ್ದು, ಎಲ್ಲ ಪಾತ್ರಗಳ ಭಾವನೆಯನ್ನು ಹೇಗೆ ನಾಯಕ ನಟ ತೂಗಿಸಿಕೊಂಡು, ಬೇರೊಬ್ಬರ ಭಾವನೆಗಳ ಜೊತೆಗೆ ಬದುಕುತ್ತಾ ಸಾಗುತ್ತಾನೆ. ಹಾಗೂ ನಾಯಕ ನಟನ ಭಾವನೆ ಏನಾಗಿರುತ್ತದೆ ಎಂಬುದು ಸಿನಿಮಾದ ಕತೆ'' ಎಂದಿದ್ದಾರೆ ಶಿವರಾಜ್ ಕುಮಾರ್.

ಬಹುತಾರಾಗಣದ 'ಬೈರಾಗಿ'

ಬಹುತಾರಾಗಣದ 'ಬೈರಾಗಿ'

'ಬೈರಾಗಿ' ಬಹು ತಾರಾಗಣ ಇರುವ ಸಿನಿಮಾ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಡಾಲಿ ಧನಂಜಯ್ ಹಾಗೂ 'ದಿಯಾ' ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಶಿವಣ್ಣ ಭಿನ್ನ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹುಲಿ ವೇಷ ಧಾರಿಯಾಗಿ, ಕಾಲೇಜು ಹುಡುಗನ ಅವತಾರದಲ್ಲಿ, ಜೈಲಿನಲ್ಲಿ ಖೈದಿಯಾಗಿ ಹೀಗೆ ಹಲವು ಅವತಾರಗಳು ಶಿವಣ್ಣನಿಗೆ ಈ ಸಿನಿಮಾದಲ್ಲಿದೆ. ಸಿನಿಮಾವನ್ನು ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದಾರೆ.

ಶಿವರಾಜ್ ಕುಮಾರ್ ಮುಂಬರುವ ಸಿನಿಮಾಗಳು

ಶಿವರಾಜ್ ಕುಮಾರ್ ಮುಂಬರುವ ಸಿನಿಮಾಗಳು

ಇನ್ನು ಶಿವರಾಜ್ ಕುಮಾರ್ ಕೈಯಲ್ಲಿ ಹಲವಾರು ಸಿನಿಮಾಗಳಿವೆ. 'ಬೈರಾಗಿ' ಬಿಡುಗಡೆ ಆದ ಬಳಿಕ ಶಿವಣ್ಣನ ಹೋಮ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ 'ವೇದ' ಬಿಡುಗಡೆ ಆಗಲಿದೆ. ಅದರ ಬಳಿಕ, 'ನೀ ಸಿಗೊವರೆಗೂ' ಸಿನಿಮಾ ತೆರೆಗೆ ಬರಲಿದೆ. ಇವುಗಳ ಜೊತೆಗೆ ಶಿವಣ್ಣನಿಗಾಗಿ ರಿಷಬ್ ಶೆಟ್ಟಿ ಸಿನಿಮಾ ಒಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಪನ್ನಗಾಭರಣ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ನಿರ್ದೇಶಕನೊಬ್ಬ ಶಿವಣ್ಣನಿಗಾಗಿ ಸಿನಿಮಾ ಮಾಡುತ್ತಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನಿರ್ದೇಶಿಸಿದ್ದ ಸಚಿನ್ ರವಿ, ಶಿವಣ್ಣನಿಗಾಗಿ ಸೂಪರ್ ಮ್ಯಾನ್ ಕತೆಯುಳ್ಳ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.

More from Filmibeat

English summary
Shiva Rajkumar talked about his upcoming movie Bairagi. He said it is not a pan India movie. but movie has many emotions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X