ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಶಿವಣ್ಣ ಆತ್ಮವಿಶ್ವಾಸದ ಮಾತು

ಪುನೀತ್ ರಾಜ್‌ಕುಮಾರ್ ಸಾವಿನಿಂದ ಬಹುದೊಡ್ಡ ನಿರ್ವಾತ ಚಿತ್ರರಂಗದಲ್ಲಿ ನಿರ್ಮಾಣವಾಗಿದೆ. ಪುನೀತ್ ಅವರು ನಟಿಸಬೇಕಿದ್ದ, ನಿರ್ಮಿಸಬೇಕಿದ್ದ ಹಲವು ಸಿನಿಮಾಗಳು ಹಾಗೆಯೇ ಉಳಿದು ಹೋಗಿವೆ. ಅವರ ಕೈಯಿಂದ ಆಗಬೇಕಾಗಿದ್ದ ಸಮಾಜ ಸೇವೆಯೂ ಉಳಿದು ಹೋಗಿದೆ. ಆದರೆ ಪುನೀತ್ ಕನಸನ್ನು ತಾವು ಮುಂದುವರೆಸುವುದಾಗಿ ಪತ್ನಿ ಅಶ್ವಿನಿ ಮುಂದೆ ಬಂದಿದ್ದಾರೆ.

ಪುನೀತ್ ಅಗಲಿಕೆಯ ದಿನದಿಂದ ಈಗಿನವರೆಗೆ ಗಂಭೀರವಾಗಿ ನಡೆದುಕೊಂಡು ತಾವು 'ದೊಡ್ಮನೆ ಸೊಸೆ' ಎಂಬುದನ್ನು ತಮ್ಮ ಗಾಂಭೀರ್ಯದಿಂದಲೇ ಅಶ್ವಿನಿ ನಿರೂಪಿಸಿದ್ದಾರೆ. ಆದರೆ ಅವರ ಮೇಲೆ ಬಹಳ ದೊಡ್ಡ ಜವಾಬ್ದಾರಿಯಿದೆ. ಇಬ್ಬರು ಹೆಣ್ಣು ಮಕ್ಕಳನ್ನನು ಜತನದಿಂದ ಬೆಳೆಸುವ ಜೊತೆಗೆ ಪುನೀತ್ ಅವರು ಕಂಡ ಕನಸುಗಳನ್ನು ನೆರವೇರಿಸಬೇಕಿದೆ.

ಅಶ್ವಿನಿ ಅವರಿಗೆ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಬೆಂಬಲ ಇದ್ದೇ ಇದೆ. ಶಿವಣ್ಣ-ರಾಘಣ್ಣ, ಅಶ್ವಿನಿಗೆ ಬೆಂಬಲ ನೀಡುವ ಜೊತೆಗೆ ಅವರ ಮೇಲೆ ಅಪಾರವಾದ ನಂಬಿಕೆಯನ್ನು ಗೌರವವನ್ನು ಇರಿಸಿಕೊಂಡಿದ್ದಾರೆ. ಇಂದು ಪುನೀತ್ ರಾಜ್‌ಕುಮಾರ್ ಅವರ ಕನಸಿಕ ಪ್ರಾಜೆಕ್ಟ್ 'ಗಂಧದ ಗುಡಿ' ಟೀಸರ್ ಬಿಡುಗಡೆ ಆದ ಬೆನ್ನಲ್ಲೆ ಮಾತನಾಡಿದ ಶಿವರಾಜ್ ಕುಮಾರ್, ಅಶ್ವಿನಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಅಶ್ವಿನಿ ಅವರಿಗೆ 'ಪವರ್' ಇದೆ: ಶಿವರಾಜ್ ಕುಮಾರ್

ಅಶ್ವಿನಿ ಅವರಿಗೆ 'ಪವರ್' ಇದೆ: ಶಿವರಾಜ್ ಕುಮಾರ್

''ಅಶ್ವಿನಿ ಅವರ ಜೊತೆ ನಾವು ಯಾವಾಗಲೂ ಇರುತ್ತೇವೆ. ಅಶ್ವಿನಿ ಅವರಿಗೆ ಪವರ್‌ ಇದೆ. ಅವರ ಮದುವೆ ಆಗಿರುವುದೇ ಪವರ್‌ ಸ್ಟಾರ್ ಅನ್ನು. ಅಶ್ವಿನಿ ಹಾಗೂ ಅಪ್ಪು ಗಂಡ-ಹೆಂಡತಿ ಥರಹ ಇದ್ದವರಲ್ಲ ಅವರು ಒಳ್ಳೆಯ ಸ್ನೇಹಿತರಂತೆ ಇದ್ದರು. ಅಶ್ವಿನಿಯನ್ನು ಮದುವೆಗೆ ಮುಂಚಿನಿಂದಲೂ ನಾನು ನೋಡಿದ್ದೇನೆ. ಪುನೀತ್ ಹಾಗೂ ಅಶ್ವಿನಿ ಪ್ರೀತಿಸುವ ಕಾಲದಿಂದಲೂ ನಾನು ಅವರನ್ನು ಬಲ್ಲೆ'' ಎಂದು ಹೇಳಿದರು ಶಿವಣ್ಣ.

ಅಶ್ವಿನಿ ಕರೆ ಮಾಡಿ ಕಣ್ಣೀರು ಹಾಕಿದರು: ಶಿವರಾಜ್ ಕುಮಾರ್

ಅಶ್ವಿನಿ ಕರೆ ಮಾಡಿ ಕಣ್ಣೀರು ಹಾಕಿದರು: ಶಿವರಾಜ್ ಕುಮಾರ್

''ಅಶ್ವಿನಿ ಮೊನ್ನೆ ಕರೆ ಮಾಡಿದ್ದರು ನಾನು ಪಿಆರ್‌ಕೆ ಕಚೇರಿಗೆ ಹೋಗಬೇಕು ಎಂದುಕೊಂಡಿದ್ದೇನೆ ಎಂದರು. ನಾನು ಹೇಳಿದೆ ನಾವೆಲ್ಲ ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಹೇಳಿದೆ. ಗೊತ್ತಿದೆ ಶಿವಣ್ಣ ಆದರೆ ನಿಮಗೆ ಒಂದು ಮಾತು ಹೇಳೋಣ ಅಂದುಕೊಂಡು ಮಾಡಿದೆ ಎಂದರು. ಅವರಿಗೆ ಬೇಸರವಾಯ್ತು, ಕಣ್ಣೀರು ಹಾಕಿದರು. ನನಗೂ ಬೇಸರವಾಯ್ತು. ನಮ್ಮ ಬೆಂಬಲ ಅಶ್ವಿನಿಗೆ ಬೇಕಾಗದೆಯೂ ಇರಬಹುದು, ಆದರೂ ನೈತಿಕವಾಗಿ ನಾವೆಲ್ಲರೂ ಅಶ್ವಿನಿಗೆ ಬೆಂಬಲವಾಗಿ ಇದ್ದೇ ಇರುತ್ತೀವಿ'' ಎಂದರು ಶಿವರಾಜ್ ಕುಮಾರ್.

ಟೀಸರ್ ನೋಡಿ ಖುಷಿ ಪಟ್ಟ ಶಿವರಾಜ್ ಕುಮಾರ್

ಟೀಸರ್ ನೋಡಿ ಖುಷಿ ಪಟ್ಟ ಶಿವರಾಜ್ ಕುಮಾರ್

ಇನ್ನು ಇಂದು ಬಿಡುಗಡೆ ಆದ 'ಗಂಧದ ಗುಡಿ' ಟೀಸರ್‌ ಬಗ್ಗೆ ಮಾತನಾಡಿದ ಶಿವಣ್ಣ, ''ಗಂಧದ ಗುಡಿ' ಟೀಸರ್ ಬಗ್ಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ''ಟೀಸರ್‌ ನೋಡಿ ಬಹಳ ಶಾಕ್ ಆಯಿತು ಜೊತೆಗೆ ಬೇಜಾರು ಸಹ ಆಯಿತು. ಏಕೆಂದರೆ ತೆಗೆದ ಮನುಷ್ಯ ಅಪ್ಪುನೇ ಇಲ್ಲ ಎಂಬುದು ಬಹಳ ನೋವಿನ ವಿಷಯ. ಟೀಸರ್‌ನಲ್ಲಿನ ಅಪ್ಪು ಅವರ ಲುಕ್ಸ್, ಸ್ಮೈಲ್ ಬಹಳವಾಗಿ ಕಾಡುತ್ತೆ. ಆದರೆ ಪುನೀತ್‌ರ ಪ್ರಯತ್ನ ಇದೆಯಲ್ಲ ಅದು ಅದ್ಭುತ'' ಎಂದರು.

ಪುನೀತ್ ಕನಸುಗಳನ್ನು ಈಡೇರಿಸಲು ಹೊರಟ ಅಶ್ವಿನಿ

ಪುನೀತ್ ಕನಸುಗಳನ್ನು ಈಡೇರಿಸಲು ಹೊರಟ ಅಶ್ವಿನಿ

ಪುನೀತ್ ರಾಜ್‌ಕುಮಾರ್ ಸ್ಥಾಪಿಸಿದ್ದ ಪಿಆರ್‌ಕೆ ಪ್ರೊಡಕ್ಷನ್ಸ್‌ ಹಾಗೂ ಪಿಆರ್‌ಕೆ ಆಡಿಯೋ ಸಂಸ್ಥೆಯು ಹಲವು ಯೋಜನೆಗಳನ್ನು ತಮ್ಮನ್ನು ತೊಡಗಿಸಿಕೊಂಡಿದೆ. ಪಿಆರ್‌ಕೆ ಪ್ರೊಡಕ್ಷನ್‌ ಹೌಸ್‌ನ ಸುಮಾರು ನಾಲ್ಕು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದೆ. ಈಗಾಗಲೇ ಚಿತ್ರೀಕರಣ ಆಗಿರುವ 'ಮ್ಯಾನ್ ಆಫ್‌ ದಿ ಮ್ಯಾಚ್' ಹಾಗೂ 'ಗಂಧದ ಗುಡಿ' ಬಿಡುಗಡೆ ಆಗಬೇಕಿದೆ. ಇನ್ನು ಮುಂದೆ ಇವುಗಳ ಜವಾಬ್ದಾರಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರದ್ದು. ಪುನೀತ್ ಅರ್ಧಕ್ಕೆ ಬಿಟ್ಟು ಹೊರಟ ಯೋಜನೆಗಳನ್ನು, ಕನಸುಗಳನ್ನು ತಾವು ಪೂರ್ಣ ಮಾಡುವುದಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈಗಾಗಲೇ ಹೇಳಿದ್ದಾರೆ.

More from Filmibeat

English summary
Shiva Rajkumar talks about Ashwini Puneeth Rajkumar and said She has power she will continue the work which Puneeth left behind.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X