twitter
    For Quick Alerts
    ALLOW NOTIFICATIONS  
    For Daily Alerts

    ಆಂಧ್ರದಲ್ಲಿ ಅಪ್ಪು ಪೋಸ್ಟರ್ ತೆರವು: ಶಿವಣ್ಣ ಪ್ರತಿಕ್ರಿಯಿಸಿದ್ದು ಹೀಗೆ

    |

    ಆಂಧ್ರಪ್ರದೇಶದಲ್ಲಿ ಕಾರುಗಳ ಮೇಲಿದ್ದ ಪುನೀತ್ ರಾಜ್‌ಕುಮಾರ್ ಚಿತ್ರಗಳನ್ನು ತೆರವು ಮಾಡಿರುವ ಆಂಧ್ರ ಪೊಲೀಸರ ಕ್ರಮಕ್ಕೆ ತೀವ್ರ ವಿರೋಧ ಕರ್ನಾಟಕದಲ್ಲಿ ವ್ಯಕ್ತವಾಗಿದೆ.

    ನಿನ್ನೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಈ ವಿಷಯವಾಗಿ ಪ್ರತಿಕ್ರಿಯಿಸಿದ್ದಾರೆ. ''ಆಂಧ್ರದಲ್ಲಿ ಪುನೀತ್ ರಾಜ್‌ಕುಮಾರ್ ಚಿತ್ರಗಳನ್ನು ತೆಗೆಸುತ್ತಿದ್ದಾರೆ ಎಂಬ ವಿಷಯ ನನಗೆ ಗೊತ್ತಿರಲಿಲ್ಲ. ಆದರೆ ಆ ರೀತಿ ಮಾಡುತ್ತಿರುವುದು ತಪ್ಪು'' ಎಂದರು.

    ತಿರುಪತಿಯಲ್ಲಿ ಕನ್ನಡ, ಪುನೀತ್ ಭಾವಚಿತ್ರ ತೆರವು: ಬೆಂಗಳೂರಿನ TTDಗೆ ಅಪ್ಪು ಫ್ಯಾನ್ಸ್ ಮುತ್ತಿಗೆತಿರುಪತಿಯಲ್ಲಿ ಕನ್ನಡ, ಪುನೀತ್ ಭಾವಚಿತ್ರ ತೆರವು: ಬೆಂಗಳೂರಿನ TTDಗೆ ಅಪ್ಪು ಫ್ಯಾನ್ಸ್ ಮುತ್ತಿಗೆ

    ''ನನ್ನ ತಮ್ಮ ಎಂದು ನಾನು ಈ ಮಾತು ಹೇಳುತ್ತಿಲ್ಲ. ಯಾವುದೇ ನಟನ ಚಿತ್ರಗಳನ್ನು ತೆಗೆದುಹಾಕುವುದು ಒಳಿತಲ್ಲ. ಅವರು ತಮ್ಮ ಅಭಿಮಾನಕ್ಕಾಗಿ ಚಿತ್ರಗಳನ್ನು ಹಾಕಿಕೊಂಡಿರುತ್ತಾರೆ. ಆ ಅಭಿಮಾನಕ್ಕೆ ಅಪಮಾನ ಮಾಡಬಾರದು. ನಿಜ ಪ್ರೀತಿಯಿಂದ ಅವರು ಹಾಗೆ ಚಿತ್ರಗಳನ್ನು ಹಾಕಿಕೊಂಡಿರುತ್ತಾರೆ. ಆ ನಿಜ ಪ್ರೀತಿಗೆ ಮಸಿ ಬಳಿಯುವ ಕಾರ್ಯವನ್ನು ಮಾಡಬಾರದು'' ಎಂದರು ಶಿವರಾಜ್ ಕುಮಾರ್.

    Shiva Rajkumar Talks About Removing Puneeth Photos In Andhra Pradeshs Tirupati

    ''ಯಾರದ್ದೇ ಪೋಸ್ಟರ್ ಆಗಲಿ ಅದನ್ನು ಕಿತ್ತು ಬೇರೆಯವರಿಗೆ ಅಪಮಾನ ಮಾಡಬಾರದು. ನಮ್ಮದೋ, ಬೇರೊಬ್ಬರದ್ದೊ ಯಾವುದೇ ನಟರದ್ದಾಗಲಿ ಪೋಸ್ಟರ್‌ಗಳನ್ನು ಕಿತ್ತು ಹಾಕಬಾರದು. ಈ ರೀತಿ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಭಾವನೆಗಳಿಗೆ ಧಕ್ಕೆ ತಂದಂತೆ ಆಗುತ್ತದೆ ಆ ಕಾರ್ಯ ಮಾಡಬಾರದು. ಈಗ ಎಲ್ಲರೂ ಪ್ಯಾನ್ ಇಂಡಿಯಾ ಎಂದು ಮಾತನಾಡುತ್ತಿದ್ದಾರೆ. ಇಂಥಹಾ ಸಮಯದಲ್ಲಿ ಈ ರೀತಿಯ ಘಟನೆಗಳು ಎಲ್ಲೆಡೆ ಆಕ್ರೋಶ ಮೂಡಿಸುತ್ತವೆ, ಕಾರ್ಯಕ್ಕೆ, ಪ್ರತಿಕಾರ್ಯ ಮಾಡುವಂತೆ ಪ್ರೇರೇಪಿಸುತ್ತವೆ. ಪ್ಯಾನ್ ಇಂಡಿಯಾ ಜೊತೆಗೆ ನಾವು ಪ್ಲಾನ್ ಇಂಡಿಯಾ ಮಾಡಬೇಕು'' ಎಂದರು.

    ತಿರುಮಲಕ್ಕೆ ಹೋಗಿದ್ದ ಕರ್ನಾಟಕದ ವಾಹಗಳ ಮೇಲಿದ್ದ ಪುನೀತ್ ರಾಜ್‌ಕುಮಾರ್ ಚಿತ್ರ ಹಾಗೂ ಕನ್ನಡ ಬಾವುಟಗಳನ್ನು ಅಲ್ಲಿನ ಸ್ಥಳೀಯ ಪೊಲೀಸರು ತೆರವುಗೊಳಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಖಂಡಿಸಿ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಜೊತೆಗೆ ಬೆಂಗಳೂರಿನ ಟಿಟಿಡಿ ದೇವಾಲಯಕ್ಕೆ ಮುತ್ತಿಗೆ ಸಹ ಹಾಕಿದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಫೋಟೊವನ್ನು ಹಿಡಿದು ಬೆಂಗಳೂರಿನ ಟಿಟಿಡಿಯ ಮುಂದೆ ಧಿಕ್ಕಾರ ಕೂಗಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್‌ಗೆ ಅವಮಾನ ಮಾಡಿದ್ದು, ಇದಕ್ಕೆ ಆಡಳಿತ ವರ್ಗ ಉತ್ತರ ನಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು.

    ತಿರುಪತಿಯಲ್ಲಿ ಕನ್ನಡದ ಬಾವುಟ ಹಾಗೂ ಅಪ್ಪು ಫೋಟೊವನ್ನು ತೆರವುಗೊಳಿಸಿದ ಬಗ್ಗೆ ಸಿ ಎಂ ಬಸವರಾಜ ಬೊಮ್ಮಾಯಿ ಹಾಗೂ ತೆಲುಗು ಚಿತ್ರರಂಗದ ನಟರು ಪ್ರತಿಕ್ರಿಯೆ ನೀಡಬೇಕು. ಕರ್ನಾಟಕದಲ್ಲಿ ತೆಲುಗು ಸಿನಿಮಾಗಳು ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತಿದೆ. ಉತ್ತಮ ವ್ಯಾಪಾರ ಮಾಡುತ್ತಿವೆ. ಇಂಥಹಾ ಸನ್ನಿವೇಶವಿರುವಾಗ ಆಂಧ್ರದಲ್ಲಿ ಕನ್ನಡದ ನಟನಿಗೆ ಅವಮಾನ ಆದಾಗ, ಅವರು ಪ್ರತಿಕ್ರಿಯೆ ನೀಡಬೇಕು. ಇದರೊಂದಿಗೆ ನಮ್ಮ ಸಿ ಎಂ ಕೂಡ ತಿರುಪತಿಯಿಂದ ಕಾರಣ ತೆಗೆದುಕೊಳ್ಳಬೇಕು" ಎಂದು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸೇವಾ ಟ್ರಸ್ಟ್‌ನ ಮನು ಆಗ್ರಹಿಸಿದ್ದರು.

    English summary
    Shiva Rajkumar condemns Andhra police action of removing Puneeth Rajkumar's photos from cars in Tirupati.
    Monday, May 2, 2022, 10:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X