ಯಶ್, ಅಪ್ಪು, ವಿನೋದ್‌ ರಾಜ್‌ ಡ್ಯಾನ್ಸ್‌ಗೆ ನಾನು ಅಭಿಮಾನಿ ಎಂದ ಶಿವ ರಾಜ್‌ಕುಮಾರ್

ರಾಜ್ಯಾದ್ಯಂತ ಸುಮಾರು 1000ಕ್ಕು ಹೆಚ್ಚು ಥಿಯೇಟರ್‌ಗಳಲ್ಲಿ ಭಜರಂಗಿ 2 ಸಿನಿಮಾ ರಿಲೀಸ್‌ಗೆ ಸಿದ್ದವಾಗುತ್ತಿದೆ. ಇದೇ ತಯಾರಿಯಲ್ಲಿರುವ ಚಿತ್ರತಂಡ ಸುದ್ದಿಗೋಷ್ಠಿ ನಡಿಸಿತ್ತು. ಬಹಳ ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯರ ಮಹಾಪೂರವೇ ನೆರೆದಿತ್ತು. ಚಿತ್ರತಂಡಕ್ಕೆ ವಿಶ್ ಮಾಡಲು ಪುನೀತ್ ರಾಜ್‌ಕುಮಾರ್, ನಟ ಯಶ್‌ಕೂಡ ಸುದ್ದಿಗೋಷ್ಠಿಗೆ ಆಗಮಿಸಿ ಮೆರುಗು ಹೆಚ್ಚಿಸಿದ್ದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಹೊಸ ಹೊಸ ವಿಚಾರಗಳು ತೆರೆದುಕೊಂಡಿತ್ತು. ಪುನೀತ್, ಯಶ್, ಸಂತೋಷ್ ಆನಂದ್ ರಾಮ್ ಹೀಗೆ ಒಬ್ಬೊಬ್ಬರು ಮಾತನಾಡಿದ್ದಾರೆ.

ಇದೇ ಸಂದರ್ಭದಲ್ಲಿ ಖುಷಿ ಹಂಚಿಕೊಂಡ ನಟ ಶಿವ ರಾಜ್‌ಕುಮಾರ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಬೃಹತ್ ವೇದಿಕೆಯಲ್ಲಿ ಪವರ್ ಸ್ಟಾರ್ ಪುನೀತ್‌ರಾಜ್ಕುಮಾರ್, ರಾಕಿಂಗ್ ಸ್ಟಾರ್ ಯಶ್, ಮತ್ತು ಶಿವ ರಾಜ್‌ಕುಮಾರ್ ಒಟ್ಟಿಗೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಶಿವ ರಾಜ್‌ಕುಮಾರ್, ವಿನೋದ್‌ ರಾಜ್‌ರನ್ನು ನೆನೆಸಿಕೊಂಡಿದ್ದಾರೆ.

ಮೊದಲಿನಿಂದಲೂ ಶಿವ ರಾಜ್‌ಕುಮಾರ್‌ಗೆ ಚಿತ್ರರಂಗದಲ್ಲಿ ಚೆನ್ನಾಗಿ ಡ್ಯಾನ್ಸ್‌ ಮಾಡುವವರು ಅಂದ್ರೆ ಹೆಚ್ಚಿನ ಪ್ರೀತಿ. ಪುನೀತ್ ಅವರ ಡ್ಯಾನ್ಸ್ ಪರ್ಫಾಮೆನ್ಸ್‌ಗೆ ನಾನು ಯಾವತ್ತು ಫ್ಯಾನ್ ಎಂದಿದ್ದ ಶಿವ ರಾಜ್‌ಕುಮಾರ್, ಈಗ ಈ ವಿಚಾರವನ್ನು ಮತ್ತೆ ಮಾತನಾಡಿದ್ದಾರೆ. ಭಜರಂಗಿ 2 ನ ಟೈಟಲ್‌ ಟ್ರ್ಯಾಕ್‌ಗೆ ಬೊಂಬಾಟ್ ಆಗಿ ವೇದಿಕೆ ಮೇಲೆ ಕುಣಿದ ಶಿವಣ್ಣ , ಯಶ್ ಮತ್ತು ಪುನೀತ್‌ ಡ್ಯಾನ್ಸ್ ಮುಗಿದ ನಂತರ ಮೈಕ್‌ ತೆಗೆದುಕೊಂಡು ಶಿವಣ್ಣ ಮಾತನಾಡಿದ್ದಾರೆ. ನನಗೆ ಡ್ಯಾನ್ಸ್ ಅಂದ್ರೆ ತುಂಬ ಇಷ್ಟ, ಯಶ್‌ ಕೂಡ ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ ಅಪ್ಪು ಕೂಡ ಉತ್ತಮ ಡ್ಯಾನ್ಸರ್ ಎಂದಿದ್ದಾರೆ.

Shiva Rajkumar talks about Vinod Raj in Bhajarangi 2 pre release event

ಇದೇ ಸಂದರ್ಭದಲ್ಲಿ ಮಾತು ಮುಂದುವರೆಸಿದ ಅವರು ಹಿಂದೆ ವಿನೋದ್‌ ರಾಜ್‌ ಕೂಡ ಅದ್ಭುತ ಡ್ಯಾನ್ಸರ್ ಎಂದಿದ್ದಾರೆ. ಈ ಮೂಲಕ ವಿನೋದ್ ರಾಜ್ ಅವರನ್ನು ಶಿವ ರಾಜ್‌ಕುಮಾರ್ ನೆನಪಿಸಿಕೊಂಡಿದ್ದಾರೆ. ಅವರ ಡ್ಯಾನ್ಸ್ ಶೈಲಿಯ ಬಗ್ಗೆ ಹೊಗಳಿದ್ದಾರೆ. ಹಾಗೇ ನಟ ಶಶಿಕುಮಾರ್ ಕೂಡ ಸಿನಿಮಾಗಳಲ್ಲಿ ಚನ್ನಾಗಿ ಡ್ಯಾನ್ಸ್ ಮಾಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಶಿವಣ್ಣ ಹೇಳಿರೋ ಈ ವೀಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ, ನೀವು ಕೂಡ ಉತ್ತಮ ಡ್ಯಾನ್ಸರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಶಿವಣ್ಣ ಅವರ ಈ ವರ್ಷದ ಬಹು ನಿರೀಕ್ಷೆಯ ಸಿನಿಮಾ ಭಜರಂಗಿ 2. ಅಕ್ಟೋಬರ್ 29ಕ್ಕೆ ಎಲ್ಲೆಡೆ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಭಜರಂಗಿ 2 ಚಿತ್ರವನ್ನು ಹರ್ಷ ಅವರು ನಿರ್ದೇಶನ ಮಾಡಿದ್ದು, ಶಿವ ರಾಜಕುಮಾರ್ ಹಾಗೂ ಎ.ಹರ್ಷ ಕಾಂಬಿನೇಷನ್​ನಲ್ಲಿ ಮೂಡಿ ಬಂದಿರುವ ಮೂರನೇ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಜೊತೆಗೆ ಜೊತೆ ನಟಿ ಶ್ರುತಿ, ಭಾವನಾ ಮೆನನ್, ಸೌರವ್ ಲೋಕೇಶ್ ಸೇರಿದಂತೆ ದೊಡ್ಡ ತಾರೆಯರ ದಂಡೇ ಇದೆ.

Shiva Rajkumar talks about Vinod Raj in Bhajarangi 2 pre release event

ಸಿನಿಮಾ ರಿಲೀಸ್‌ಗು ಮುನ್ನವೇ ಅಭಿಮಾನಿಗಳು ಕೂಡ ಸಾಕಷ್ಟು ತಯಾರಿ ಮಾಡುತ್ತಿದ್ದು, ಸಿನಿಮಾ ಸಕ್ಸಸ್‌ಗಾಗಿ ದೇವರಪೂಜೆ, ಹರಕೆ ಅಂತೆಲ್ಲಾ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಿಂದ ಮುತ್ತತ್ತಿಗೆ ಹೋಗಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಅಲ್ಲದೇ ಡಾ. ರಾಜ್​ಕುಮಾರ್ ಸ್ಮಾರಕದ ಮುಂದೆ ಭಜರಂಗಿ 2 ಪೋಸ್ಟರ್​​ಗೆ ಹಾಲಿನ ಅಭಿಷೇಕವನ್ನು ಮಾಡಿದ್ರು. ಈ ದೃಶ್ಯವನ್ನು ಸ್ವತಃ ಶಿವರಾಜ್​ಕುಮಾರ್ ವಿಡಿಯೋ ಕಾಲ್ ಮೂಲಕ ವೀಕ್ಷಿಸಿ ಅಭಿಮಾನಿಗಳಿಗೆ ಧನ್ಯವಾದ ಕೂಡ ಸಲ್ಲಿಸಿದ್ರು. ಪ್ರೀತಿ ವಿಶ್ವಾಸಕ್ಕೆ ಚಿರರುಣಿ ಎಂದಿದ್ದರು

ಜಯಣ್ಣ ಫಿಲ್ಮ್ಸ್ ಭಜರಂಗಿ 2 ಸಿನಿಮಾಕ್ಕೆ ಹಣ ಹಾಕಿದೆ. ಶಿವಣ್ಣ ನಟನೆಯ ಬಂಗಾರ ಸನ್ ಆಫ್‌ ಬಂಗಾದರ ಮನುಷ್ಯ, ರುಸ್ತುಂ, ಮಫ್ತಿ ಸಿನಿಮಾಗಳನ್ನು ಜಯಣ್ಣ ಈ ಹಿಂದೆ ನಿರ್ಮಾಣ ಮಾಡಿದ್ದರು. ಇದೀಗ 4ನೇ ಬಾರಿಗೆ ಈ ಜೋಡಿ ಒಂದಾಗಿದೆ.

Shiva Rajkumar talks about Vinod Raj in Bhajarangi 2 pre release event

ಹಾಗೆ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ಬಹಳ ಅದ್ಭುತವಾಗಿ ಗಾಡುಗಳು ಮೂಡಿಬಂದಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನ ಚಿಯತ್ರಕ್ಕಿದೆ. ಅಕ್ಟೋಬರ್ 29ರಂದು ಸುಮಾರು 1,000 ಚಿತ್ರಮಂದಿರಗಳಲ್ಲಿ ಭಜರಂಗಿ 2 ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಪ್ರತಿಷ್ಠಿತ ಐಎಂಡಿಬಿಯಲ್ಲಿ ಬಹು ನಿರೀಕ್ಷಿತ ಚಿತ್ರಗಳ ವಿಭಾಗದಲ್ಲಿ ಭಜರಂಗಿ 2 ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದ್ದು, ಶಿವಣ್ಣನ ದರ್ಶನಕ್ಕಾಗಿ ಅಭಿಮಾನಿಗಳು ವೈಟಿಂಗ್‌ನಲ್ಲಿದ್ದಾರೆ. ಚಿತ್ರಂಗದ ಮಂದಿಕೂಡ ಸಿನಿಮಾ ನೋಡಲು ಕಾತುರದಿಂದಿದ್ದಾರೆ.

More from Filmibeat

English summary
Shiva Rajkumar talks about Vinod Raj in Bhajarangi 2 pre release event. He said Vinod Raj is very good dancer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X