ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕನ ಸಿನಿಮಾದಲ್ಲಿ ಶಿವಣ್ಣ ನಟನೆ.?
Recommended Video

ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಬಿಜಿಯಾಗಿರುವ ನಟರ ಪೈಕಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಒಬ್ಬರು. ವರ್ಷಕ್ಕೆ ಎರಡ್ಮೂರು ಸಿನಿಮಾಗಳನ್ನು ನೀಡುವ ಶಿವಣ್ಣ ಸದಾ ಒಂದಲ್ಲಾ ಒಂದು ಚಿತ್ರದ ಶೂಟಿಂಗ್ ನಲ್ಲಿಯೇ ತೊಡಗಿರುತ್ತಾರೆ.
ಇನ್ನೂ ಮೂರ್ನಾಲ್ಕು ವರ್ಷಗಳಿಗೆ ಆಗುವಷ್ಟು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ. ಹೀಗಿರುವಾಗಲೇ, ಹೊಸ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿ ಬಂದಿದೆ. ಅದೇನಪ್ಪಾ ಅಂದ್ರೆ, ನಿರ್ದೇಶಕ ಪಿ.ಶೇಷಾದ್ರಿ ಚಿತ್ರದಲ್ಲಿ ಅಭಿನಯಿಸಲು ಶಿವರಾಜ್ ಕುಮಾರ್ ಒಪ್ಪಿಗೆ ನೀಡಿದ್ದಾರಂತೆ.
ಒಳ್ಳೆಯ ಸ್ಕ್ರಿಪ್ಟ್ ತೆಗೆದುಕೊಂಡು ಹೋದಾಗ, 'ಇಲ್ಲ' ಎಂದು ಶಿವಣ್ಣ ಹೇಳಿದ ಉದಾಹರಣೆಯೇ ಇಲ್ಲ. ಅಂದ್ಮೇಲೆ, ಪಿ.ಶೇಷಾದ್ರಿ ಅಂದ್ರೆ ಸುಮ್ನೆನಾ.? ಪಿ.ಶೇಷಾದ್ರಿ ಆಕ್ಷನ್ ಕಟ್ ಹೇಳಿದ ಎಂಟು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ.

ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ಕಾಲ್ ಶೀಟ್ ಕೇಳಿದಾಗ, ಶಿವಣ್ಣ 'ನೋ' ಅಂತಾರಾ.? ಚಾನ್ಸೇ ಇಲ್ಲ.! ''ಪಿ.ಶೇಷಾದ್ರಿ ಅವರ ಜೊತೆಗೆ ಕೆಲಸ ಮಾಡುವ ಸಾಧ್ಯತೆ ಇದೆ'' ಅಂತ ಸ್ವತಃ ಶಿವಣ್ಣ ಅವರೇ ಹೇಳಿಕೊಂಡಿದ್ದಾರೆ.

ಸದ್ಯ 'ಕವಚ' ಶೂಟಿಂಗ್ ಮುಗಿಸಿರುವ ಶಿವಣ್ಣ 'ರುಸ್ತುಂ' ಹಾಗೂ 'ದ್ರೋಣ' ಚಿತ್ರಗಳಿಗೆ ಚಾಲನೆ ಕೊಟ್ಟಿದ್ದಾರೆ. ಈ ಎರಡು ಸಿನಿಮಾಗಳು ಮುಗಿದ ಬಳಿಕ ಪಿ.ಶೇಷಾದ್ರಿ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೆಚ್ಚಿನ ಅಪ್ ಡೇಟ್ಸ್ ಕೊಡ್ತಾಯಿರ್ತೀವಿ, ಫಿಲ್ಮಿಬೀಟ್ ಕನ್ನಡ ಪುಟಕ್ಕೆ ಭೇಟಿ ನೀಡುತ್ತಿರಿ.


Click it and Unblock the Notifications











